ವುಮನ್ ಕ್ಯಾಟಲ್ ಕೇರ್ ವರ್ಕರ್ ನೇಮಕಾತಿ: ಅರ್ಜಿ ಕೋರಿಕೆ

ವುಮನ್ ಕ್ಯಾಟಲ್ ಕೇರ್ ವರ್ಕರ್ ನೇಮಕಾತಿ: ಅರ್ಜಿ ಕೋರಿಕೆ 
ಕಾಸರಗೋಡು, ಜೂ.3: ಹಾಲು ಅಭಿವೃದ್ಧಿ ಇಲಾಖೆ ಜಾರಿಗೊಳಿಸುವ ಮಿಲ್ಕ್ ಶೆಡ್ ಡೆವಲಪ್ ಮೆಂಟ್ ಯೋಜನೆಯ ಅಂಗವಾಗಿ ವುಮನ್ ಕ್ಯಾಟಲ್ ಕೇರ್ ವರ್ಕರ್ ಒಬ್ಬರ ನೇಮಕಾರಿ ಕರಾರಿನ ಮೇರೆಗೆ ನಡೆಯಲಿದೆ. ಕನಿಷ್ಠ ಹತ್ತನೇ ತರಗತಿ ತೇರ್ಗಡೆಹೊಂದಿರುವ 18ರಿಂದ 50 ವರ್ಷ ನಡುವಿನ ವಯೋಮಾನದವರು ಅರ್ಜಿ ಸಲ್ಲಿಸಬಹುದು. 
ಅರ್ಜಿದಾರರು ಕಾಸರಗೋಡು ಬ್ಲೋಕ್ ಪಂಚಾಯತ್ ವ್ಯಾಪ್ತಿಯ ಶಾಶ್ವತ ನಿವಾಸಿಗಳಾಗಿರಬೇಕು. ಆಸಕ್ತರು ಅರ್ಜಿಯನ್ನು ಮತ್ತು ತತ್ಸಂಬಂಧಿ ದಾಖಲೆಗಳ ಸಹಿತ ಜೂ.5ರಂದು ಸಂಜೆ 5 ಗಂಟೆಗೆ ಮುಂಚಿತವಾಗಿ ಕಾಸರಗೋಡು ಹಾಲು ಅಭಿವೃದ್ಧಿ ಸೇವಾ ಘಟಕ ಕಚೇರಿಗೆ ಸಲ್ಲಿಸಬೇಕು. ಸಂದರ್ಶನಕ್ಕೆ ಅರ್ಹರಾದವರ ಅಂತಿಮ ಪಟ್ಟಿ ಜೂ.10ರಂದು ಸಿವಿಲ್ ಸ್ಟೇಷನ್ ನ ಹಾಲು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ಲಗತ್ತಿಸಲಾಗುವುದು. ಸಂದರ್ಶನ ಜೂ.14ರಂದು ಬೆಳಗ್ಗೆ 10.30 ರಿಂದ ಹಾಲು ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಡೆಯಲಿದೆ. ಹೆಚ್ಚಿನ ಮಾಹಿತಿ ಮತ್ತು ಅರ್ಜಿ ಫಾರಂಗಾಗಿ ಕಾಸರಗೋಡು ಬ್ಲೋಕ್ ಹಾಲು ಅಭಿವೃದ್ಧಿ ಸೇವಾ ಘಟಕ ಕಚೇರಿಯನ್ನು ಸಂಪರ್ಕಿಸಬಹುದು. 

Comments