- Get link
- X
- Other Apps
- Get link
- X
- Other Apps
ಸುಬ್ರಹ್ಮಣ್ಯ ಶ್ರೀಗಳು.
ಸಂಸ್ಕೃತವು ದೇವ ಭಾಷೆ ಮಾತ್ರವಲ್ಲ ಭಾರತದ ಜೀವ ಭಾಷೆ. ಕೆಲವು ಪಾಶ್ಚಿಮಾತ್ಯ ಸಂಸ್ಕೃತಿಗೆ ಮನಸನ್ನು ಹೊಂದಿಸಿಕೊಂಡ ಜನರಿಗೆ ಇದೊಂದು ಮೃತಭಾಷೆ ಮಾತ್ರ ಎಂದು ಕಡೆ ಗಣಿಸಿದರೂ ಪಾಶ್ಚಿಮಾತ್ಯರು ಕಂಪ್ಯೂಟರ್ ತಂತ್ರಜ್ಞಾನಕ್ಕೆ ಪೂರಕವಾದ ಪ್ರಪಂಚದ ಏಕೈಕ ಭಾಷೆ ಸಂಸ್ಕೃತ ಎಂದು ಪ್ರತಿಪಾದಿಸಿದ್ದಾರೆ ಎಂದು ಕುಕ್ಕೆ ಸುಬ್ರಹ್ಮಣ್ಯ ಮಠದ ಪೀಠಾಧಿಪತಿಗಳಾದ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ನುಡಿದರು.
ಅವರು ಅಸ್ತಿತ್ವಂ ಪ್ರತಿಷ್ಠಾನ ಕುಂಟಾರು ಇದರ ಸಹಯೋಗದೊಂದಿಗೆ ಸಂಸ್ಕೃತ ಭಾರತಿ ಕಾಸರಗೋಡು ಸಾಮಾಜಿಕ ಜಾಲತಾಣದ ಮುಖಾಂತರ ನಡೆಸಿದ ದಶದಿನ ಸಂಸ್ಕೃತ ಸಂಭಾಷಣ ವರ್ಗದ ಸಮಾರೋಪ ಸಮಾರಂಭದಲ್ಲಿ ಆಶೀರ್ವಚನ ನೀಡಿದರು.
ಸಂಸ್ಕೃತ ಇಂದು ಯಾವುದೇ ಒಂದು ವರ್ಗದ ಜನರ ಭಾಷೆಯಾಗಿಲ್ಲ. ದೇಶದ ಎಲ್ಲಾ ವರ್ಗದ ಜನರಿಗೂ ಹತ್ತಿರಾದ ಭಾಷೆ ಇದಾಗಿದೆ. ಆ ನಿಟ್ಟಿನಲ್ಲಿ ಇಂತಹ ಶಿಬಿರಗಳು ಅತೀ ಅಗತ್ಯ. ಜನರು ಈ ಶಿಬಿರಗಳನ್ನು ಸದುಪಯೋಗ ಪಡಿಸಿಕೊಂಡು ಸಂಸ್ಕೃತ ಭಾಷೆ ಅಮೃತ ಭಾಷೆ ಎಂಬುದನ್ನು ಜಗತ್ತಿಗೆ ಸಾರಬೇಕು ಎಂದರು.
ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್
ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತು ಸದಸ್ಯರಾದ ವೇದಮೂರ್ತಿ ಕಶೆಕೋಡಿ ಸೂರ್ಯನಾರಾಯಣ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು
ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಅಧ್ಯಕ್ಷತೆ ವಹಿಸಿದ್ದರು. ಶ್ಯಾಮ ಸುದರ್ಶನ ಭಟ್ ಹೊಸಮೂಲೆ ಅತಿಥಿಯಾಗಿದ್ದರು. ಮಂಗಳೂರು ವಿಭಾಗದ ಸಂಯೋಜಕರಾದ ಸತ್ಯ ನಾರಾಯಣ ಸಂಸ್ಕೃತ ಭಾರತಿಯ ಕಾರ್ಯಚಟುವಟಿಕೆಗಳನ್ನು
ಸಂಸ್ಕೃತ ಭಾರತೀ ಕಾಸರಗೋಡು ಜಿಲ್ಲಾ ಸಂಯೋಜಕ ಎಸ್.ಎಂ.ಉಡುಪ ಕುಂಟಾರು, ಶಿಬಿರದ ಸಂಸ್ಕೃತ ಶಿಕ್ಷಕಿ ಸಂದ್ಯಾ ವಿ ಕೆದಿಲಾಯ ಭಾಗವಹಿಸಿದರು.
- Get link
- X
- Other Apps
Comments
Post a Comment