ಮುಳ್ಳೇರಿಯ ಸೇವಾಭಾರತಿಗೆ‌ ಸುಬ್ರಹ್ಮಣ್ಯ ಮಠದಿಂದ ಆರ್ಥಿಕ ನೆರವು.


ಮುಳ್ಳೇರಿಯ ಸೇವಾಭಾರತಿಯ ಜನಸ್ನೇಹಿ ಚಟುವಟಿಕೆಗಳನ್ನು ಅರಿತ ಕುಕ್ಕೆ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಶ್ರೀಪಾದರು ಸಂತಸ ವ್ಯಕ್ತಪಡಿಸಿದರು.ಇದೇ ಸಮಯದಲ್ಲಿ   ಎಲ್ಲ ಸೇವಾ ಚಟುವಟಿಕೆಗಳಿಗೆ ಪೂರಕವಾಗುವಂತೆ ಶ್ರೀಮಠದ ವತಿಯಿಂದ ಆರ್ಥಿಕ ಸಹಕಾರವನ್ನೂ ಅಸ್ತಿತ್ವಂ
 ಪ್ರತಿಷ್ಠಾನ ಕುಂಟಾರು ಇದರ ಮೂಲಕ ನೀಡಿದರು.ಪ್ರತಿಷ್ಠಾನದ   ಪವನ್ ಕುಮಾರ್ ಕುಂಟಾರು  ಶ್ರೀಶ್ರೀಗಳ ಆರ್ಥಿಕ ನೆರವನ್ನು ಸೇವಾಭಾರತಿ ಮುಳ್ಳೇರಿಯದ ಸಹ ಸಂಚಾಲಕರಾದ ಶ್ರೀ ಸಂತೋಷ್ ಅವರಿಗೆ ಹಸ್ತಾಂತರಿಸಿದರು.

Comments