- Get link
- X
- Other Apps
- Get link
- X
- Other Apps
ಸಹಾಯಕ ಪ್ರೊಫೆಸರ್ ನೇಮಕಾತಿ: ಸಂದರ್ಶನ
ಕಾಸರಗೋಡು, ಜೂ.24: ಕಣ್ಣೂರು ಸರಕಾರಿ ಆಯುರ್ವೇದ ಕಾಲೇಜಿನ ದ್ರವ್ಯಗುಣ ವಿಭಾಗದಲ್ಲಿ ಸಹಾಯಕ ಪ್ರೊಫೆಸರ್ ತಾತ್ಕಾಲಿಕ ಹುದ್ದೆ ಬರಿದಾಗಿದೆ. ಈ ಸಂಬಂಧ ನೇಮಕಾತಿಗಾಗಿ ಜು.6ರಂದು ಬೆಳಗ್ಗೆ 11 ಗಂಟೆಗೆ ಪರಿಯಾರಂ ನ ಕಣ್ಣೂರು ಸರಕಾರಿ ಆಯುರ್ವೇದ ಕಾಲೇಜು ಪ್ರಾಂಶುಪಾಲರ ಕಾರ್ಯಾಲಯದಲ್ಲಿ ಕೋವಿಡ್ ಕಟ್ಟುನಿಟ್ಟು ಪಾಲನೆಯೊಂದಿಗೆ ಸಂದರ್ಶನ ನಡೆಯಲಿದೆ.
ಸಂಬಂಧಪಟ್ಟ ವಿಷಯದಲ್ಲಿ ಸ್ನಾತಕೋತ್ತರ ಪದವಿ ಕನಿಷ್ಠ ಶಿಕ್ಷಣಾರ್ಹತೆಯಾಗಿದೆ. ವೃತ್ತಿ ಅನುಭವ ಹೊಂದಿರುವವರಿಗೆ ಆದ್ಯತೆಯಿದೆ. ಜಜನ ದಿನಾಂಕ, ಶಿಕ್ಷಣಾರ್ಹತೆ, ವೃತ್ತಿ ಅನುಭವ ಸಂಬಂಧ ದಾಖಲಾತಿ ಪತ್ರಗಳು, ಅವುಗಳ ನಕಲುಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್ ಗಳ ನಕಲುಗಳ, ಬಯೋಡಾಟಾ ಸಹಿತ ಹಾಜರಾಗಬೇಕು.
ಆಯ್ಕೆಗೊಂಡವರಿಗೆ ಪ್ರತಿತಿಂಗಳು 57525 ರೂ. ವೇತನ ಲಭಿಸಲಿದೆ. ನೇಮಕಾತಿಯ ಕಾಲಾವಧಿ ಒಂದು ವರ್ಷ ಯಾ ಶಶ್ವತ ನೇಮಕಾತಿ ನಡೆಯುವ ವರೆಗೆ ಇರುವುದು. ಹೆಚ್ಚುವರಿ ಮಾಹಿತಿಗಾಗಿ ಚಟುವಟಿಕೆಗಳ ದಿನದಂದು ಕಾಲೇಜಿನ ಕಾರ್ಯಾಲಯವನ್ನು( ದೂರವಾಣಿ ಸಂಖ್ಯೆ: 0497-2800167.) ಸಂಪರ್ಕಿಸಬಹುದು.
- Get link
- X
- Other Apps
Comments
Post a Comment