ಒನ್ ಲೈನ್ ಕಲಿಕಾ ಸೌಕರ್ಯ ವಂಚಿತ ವಿದ್ಯಾರ್ಥಿಗಳಿಗೆ ಆಶಾದಾಯಕಎಣ್ಮಕಜೆಯಲ್ಲಿ "ಸ್ಮಾರ್ಟ್ ಪೋನ್ ಚಾಲೆಂಜ್" ಯೋಜನೆಗೆ ಚಾಲನೆ

ಒನ್ ಲೈನ್ ಕಲಿಕಾ ಸೌಕರ್ಯ ವಂಚಿತ ವಿದ್ಯಾರ್ಥಿಗಳಿಗೆ ಆಶಾದಾಯಕ
ಎಣ್ಮಕಜೆಯಲ್ಲಿ "ಸ್ಮಾರ್ಟ್ ಪೋನ್ ಚಾಲೆಂಜ್" ಯೋಜನೆಗೆ ಚಾಲನೆ
ಪೆರ್ಲ: ಆನ್ ಲೈನ್ ಕಲಿಕೆಗೆ ಪೂರಕವಾದ ಸ್ಮಾರ್ಟ್ ಪೋನ್ ಇಲ್ಲದ ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಪಂಚಾಯತ್ ಎಜುಕೇಶನ್ ಸಮಿತಿ (ಪಿಇಸಿ) ಹಮ್ಮಿಕೊಂಡಿರುವ ಎಣ್ಮಕಜೆ ಗ್ರಾಮ ಪಂಚಾಯತ್ ಮಟ್ಟದ ಸ್ಮಾರ್ಟ್ ಪೋನ್ ಚಾಲೆಂಜ್ ಯೋಜನೆಗೆ ಸ್ಮಾರ್ಟ್ ಫೋನ್  ವಾಗ್ದಾನ ನೀಡುವ ಮೂಲಕ ಶಾಸಕ ಎಕೆಎಂ ಆಶ್ರಫ್ ಚಾಲನೆ ನೀಡಿದರು.ಕಾರ್ಯಕ್ರಮದಲ್ಲಿ ಮಾತನಾಡಿದ ಆವರು ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಂಟು ಪಂಚಾಯತು ಮಟ್ಟದಲ್ಲಿ ಮೊಬೈಲ್ ಪೋನ್ ಅಭಾವದಿಂದ ಕಲಿಕೆಯನ್ನು ಮುಂದುವರಿಸಲಾಗದ ಬಡ ವಿಧ್ಯಾರ್ಥಿಗಳನ್ನು ಗುರುತಿಸಿ ಪಂ.ಅಧ್ಯಕ್ಷರುಗಳ ನೇತೃತ್ವದಲ್ಲಿ ಜನಪ್ರತಿನಿಧಿಗಳ,ಶಿಕ್ಷಣ ಕಾರ್ಯಕರ್ತರ ಹಾಗೂ ಕೊಡುಗೈ ದಾನಿಗಳ ಸಹಾಯದಿಂದ ಮೊಬೈಲ್ ಪೋನ್ ಖರೀದಿಸಿ ನೀಡುವುದರ ಜತೆಗೆ ಶಾಸಕರ ಗೌರವ ಧನವನ್ನು ಸೇರಿಸಿಕೊಂಡು ಹಮ್ಮಿಕೊಂಡಿರುವ ಯೋಜನೆಯು ಬಡ ಮಕ್ಕಳ ಶಿಕ್ಷಣಕ್ಕೆ ಆಶಾದಾಯಕ ಎಂದರು. ಎಣ್ಮಕಜೆ ಗ್ರಾಮ ಪಂಚಾಯತು ಅಧ್ಯಕ್ಷ ಸೋಮಶೇಖರ್ ಜೆ.ಎಸ್. ಅಧ್ಯಕ್ಷತೆವಹಿಸಿ ತಮ್ಮ ವತಿಯಿಂದ ಪೋನ್ ನೀಡುವ ವಾಗ್ದಾನ ನೀಡಿದರು. ಪಂ.ಉಪಾಧ್ಯಕ್ಷೆ ಡಾ.ಫಾತಿಮತ್ ಝಹನಾಸ್, ಬ್ಲೋಕ್ ಪಂ.ಸದಸ್ಯ ಬಟ್ಟು ಶೆಟ್ಟಿ ಮೊಬೈಲ್ ಪೋನ್ ನೀಡುವ ಬಗ್ಗೆ ವಾಗ್ದಾನ ನೀಡಿದರು.  ಜಿಲ್ಲಾ ಪಂ.ಸದಸ್ಯ ನಾರಾಯಣ ನಾಯ್ಕ್, ಪಂ.ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಬಿ.ಎಸ್.ಗಾಂಭೀರ್, ಜಯಶ್ರೀ ಎ.ಕುಲಾಲ್,ಸೌಧಾಭಿ ಹನೀಫ್, ಬ್ಲೋಕ್ ಪಂ.ಸದಸ್ಯ ಆನಿಲ್ ಕುಮಾರ್ ಕೆ.ಪಿ. ಕುಂಬಳೆ ಉಪಜಿಲ್ಲಾ ಶಿಕ್ಷಣಾಧಿಕಾರಿ ಯತೀಶ್ ಕುಮಾರ್ ರೈ,,ಬಿಪಿಸಿ ಶಿವರಾಮ ಎ,ಬಿ ಆರ್ ಸಿ ಕೋರ್ಡಿನೇಟರ್ ಸುರೇಶ್,ಪಂಚಾಯತ್ ಸಹ ಕಾರ್ಯದರ್ಶಿ ಸಜಿ, ಪಿಇಸಿ ಸೆಕ್ರಟರಿ ದಿನೇಶ್ ಕುಮಾರ್,ಪಂಚಾಯತ್ ಸದಸ್ಯರು ಪಾಲ್ಗೊಂಡಿದ್ದರು.

Comments