ಗಡಿ ನಾಡಿನ ಹೆಸರುಗಳ ಬದಲಾವಣೆ ಆತಂಕಕ್ಕೊಳಗಾಗದಿರಿ:ಶಾಸಕ ಎ ಕೆ ಎಂ ಅಶ್ರಫ್

ಗಡಿ ನಾಡಿನ ಹೆಸರುಗಳ ಬದಲಾವಣೆ ಆತಂಕಕ್ಕೊಳಗಾಗದಿರಿ:ಶಾಸಕ ಎ ಕೆ ಎಂ ಅಶ್ರಫ್
ಕಾಸರಗೋಡು: ಕರ್ನಾಟಕ-ಕೇರಳ ಗಡಿಪ್ರದೇಶದಲ್ಲಿರುವ ಊರಿನ ಹೆಸರುಗಳಲ್ಲಿ ಬದಲಾವಣೆಯಾದ ಸುದ್ದಿ ಸಾಮಾಜಿಕ ಜಾಲತಾಣದ ಮೂಲಕ ಹರಿದಾಡುತ್ತಿದ್ದು, ಈ ಬಗ್ಗೆ ಕರ್ನಾಟಕ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸೇರಿದಂತೆ ಹಲವು ರಾಜಕಾರಣಿಗಳು ಖಂಡನೆಯನ್ನು ನೀಡಿದ್ದಾರೆ.ಈ ಬಗ್ಗೆ ಮಂಜೇಶ್ವರ ಕ್ಷೇತ್ರದ ಶಾಸಕರಾದ ಶ್ರೀ ಎ ಕೆ ಎಂ ಅಶ್ರಫ್ ರವರು ಕೇರಳ ಮುಖ್ಯಮಂತ್ರಿಯ ಕಚೇರಿ ಹಾಗೂ ಕಾಸರಗೋಡು ಜಿಲ್ಲಾಧಿಕಾರಿಯನ್ನು ಸಂಪರ್ಕಿಸಿದ್ದು ಬದಲಾವಣೆಯು ಅಧಿಕೃತವಲ್ಲ ಎಂಬ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.ಸರಕಾರ ಯಾವುದೇ ಸುತ್ತೋಲೆ ಹೊರಡಿಸಿಲ್ಲವೆಂದೂ ಆದಾಗ್ಯೂ  ರೇಶನ್ ಕಾರ್ಡ್ ಸಾಫ್ಟ್ವೇರ್ ನಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದ ಕೆಲವು ಬದಲಾವಣೆಗಳು ಉಂಟಾಗಿದ್ದು ಸರಿಪಡಿಸಲು ತುರ್ತುಕ್ರಮ ಕೈಗೊಳ್ಳುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ. ಅಧಿಕೃತವಲ್ಲದ ಸುದ್ದಿಗೆ ಯಾರೂ ಆತಂಕಕ್ಕೊಳಗಾಗಬೇಡಿ,ಕನ್ನಡಿಗರ ಸಮಸ್ಯೆಗಳನ್ನು ಗಡಿನಾಡ ಜನತೆ ಒಂದಾಗಿ ಎದುರಿಸಲಿದೆಯೆಂದೂ ಅಧಿಕೃತವಾಗಿ ಹೆಸರು ಬದಲಾವಣೆಯಂತಹ ಕ್ರಮವನ್ನು ಸರಕಾರ ಕೈಗೊಂಡಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಶಾಸಕರು ಎಚ್ಚರಿಕೆ ನೀಡಿದ್ದಾರೆ.

Comments