- Get link
- X
- Other Apps
- Get link
- X
- Other Apps
ಜೂ.7ರಂದು ಕಾಸರಗೋಡು ಆಕ್ಸಿಜನ್ ಘಟಕಕ್ಕೆ ಶಿಲಾನ್ಯಾಸ
ಕಾಸರಗೋಡು, ಜೂ.6: ಕಾಸರಗೋಡು ಜಿಲ್ಲಾ ಪಂಚಾಯತ್ ನೇತೃತ್ವದಲ್ಲಿ, ಸ್ಥಳೀಯಾಡಳಿತ ಸಂಸ್ಥೆಗಳ ಜಂಟಿ ಯೋಜನೆಯಾಗಿರುವ ಕಾಸರಗೋಡು ಆಕ್ಸಿಜನ್ ಘಟಕದ ಶಿಲಾನ್ಯಾಸ ಜೂ.7ರಂದು ಮಧ್ಯಾಹ್ನ 3 ಗಂಟೆಗೆ ಆನ್ ಲೈನ್ ರೂಪದಲ್ಲಿ ಜರುಗಲಿದೆ.
ಸ್ಥಳೀಯಾಡಳಿತ, ಅಬಕಾರಿ ಸಚಿವ ಎಂ.ವಿ.ಗೋವಿಂದನ್ ಮಾಸ್ಟರ್ ಶಿಲಾನ್ಯಾಸ ನಡೆಸುವರು. ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಅಧ್ಯಕ್ಷತೆ ವಹಿಸುವರು. ಶಾಸಕರಾದ ಎ.ಕೆ.ಎಂ.ಅಶ್ರಫ್, ಎನ್.ಎ.ನೆಲ್ಲಿಕುನ್ನು, ನ್ಯಾಯವಾದಿ ಸಿ.ಎಚ್.ಕುಂಞಂಬು, ಇ.ಚಂದ್ರಶೇಖರನ್, ಎಂ.ರಾಜಗೋಪಾಲನ್ ಮುಖ್ಯ ಅತಿಥಿಯಾಗಿರುವರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಯೋಜನೆ ವರದಿ ವಾಚಿಸುವರು. ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್ ಅಧಿಕಾರಿ ಇ.ಪಿ.ರಾಜ್ ಮೋಹನ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಷಾನವಾಝ್ ಪಾದೂರು, ಆರೋಗ್ಯ ಸ್ಥಾಯೀ ಸಮಿತಿ ಅಧ್ಯಕ್ಷೆ ಎಸ್.ಎನ್.ಸರಿತಾ, ಕಾಞಂಗಾಡು ನಗರಸಭೆ ಅಧ್ಯಕ್ಷೆ ಕೆ.ವಿ.ಸುಜಾತಾ, ಕಾಸರಗೋಡು ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀಮಾ, ಚೆಮ್ನಾಡು ಗ್ರಾಮಪಂಚಾಯತ್ ಅಧ್ಯಕ್ಷೆ ಸುಫೈಜಾ ಅಬೂಬಕ್ಕರ್, ವಿವಿಧ ವಿಭಾಗಗಳ ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಪಂಚಾಯತ್ ಯೋಜನೆ ಸಮಿತಿ ಉಪಾಧ್ಯಕ್ಷ ಡಾ.ಸಿ.ತಂಬಾನ್ ಮೊದಲಾದವರು ಉಪಸ್ಥಿತರಿರುವರು.
ಸಾರ್ವಜನಿಕ ವಲಯದಲ್ಲಿ ಚಟ್ಟಂಚಾಲಿನಲ್ಲಿ ಸ್ಥಾಪನೆಗೊಳ್ಳಲಿರುವ ಕಾಸರಗೋಡು ಆಕ್ಸಿಜನ್ ಘಟಕಕ್ಕೆ ಜೂ.7ರಂದು ಶಿಲಾನ್ಯಾಸ ಜರುಗಲಿದೆ. 80 ದಿನಗಳ ಅವಧಿಯಲ್ಲಿ ಈ ಘಟಕ ನಿರ್ಮಾಣ ಪೂರ್ಣಗೊಳ್ಳಲಿದೆ.
ಚಟ್ಟಂಚಾಲಿನ ಉದ್ದಿಮೆ ಉದ್ಯಾನದಲ್ಲಿ ಜಿಲ್ಲಾ ಪಂಚಾಯತ್ ನ ಸ್ವಾಮ್ಯದಲ್ಲಿರುವ 50 ಸೆಂಟ್ಸ್ ಜಾಗದಲ್ಲಿ ಈ ಘಟಕ ನಿರ್ಮಾಣಗೊಳ್ಳಲಿದೆ. ಜಿಲ್ಲಾ ಪಂಚಾಯತ್ 50 ಲಕ್ಷ ರೂ.ವನ್ನೂ ಈ ನಿಟ್ಟಿನಲ್ಲಿ ಒದಗಿಸಲಿದೆ. ಜಿಲ್ಲೆಯ ಎಲ್ಲ ಗ್ರಾಮ ಪಂಚಾಯತ್ ಗಳೂ, ನಗರಸಭೆಗಳೂ ಈ ಯೋಜನೆಗಾಗಿ ಮೊಬಲಗು ಮೀಸಲಿರಿಸಿವೆ.
ದಿನವೊಂದಕ್ಕೆ 200 ಸಿಲಿಂಡರ್ ಆಕ್ಸಿಜನ್ ಉತ್ಪಾದಿಸುವ ಸಾಮರ್ಥ್ಯದ ಘಟಕ ಈ ಮೂಲಕ ನಿರ್ಮಾಣಗೊಳ್ಳಲಿದೆ. ಘಟಕದ ಸಿವಿಲ್ ಚಟುವಟಿಕೆಗಳನ್ನು ನಿರ್ಮಿತಿ ಕೇಂದ್ರ ಜಾರಿಗೊಳಿಸಲಿದೆ. ಜಿಲ್ಲಾ ಉದ್ದಿಮೆ ಕೆಂದ್ರ ಪ್ರಬಂಧಕ ನಿರ್ವಹಣೆ ಸಿಬ್ಬಂದಿಯಾಗಿದ್ದಾರೆ. ಭವಿತವ್ಯದಲ್ಲಿ ಉದ್ದಿಮೆ ಅಗತ್ಯಗಳಿಗೂ ಬಳಸಬಹುದಾದ ರೀತಿ ಘಟಕವನ್ನು ನಿರ್ಮಿಸಲಾಗುವುದು.
ಕೊಚ್ಚಿಯಲ್ಲಿ ಪ್ರಧಾನ ಕೇಂದ್ರ ಹೊಂದಿರುವ ಕೇರ್ ಸಿಸ್ಟಂಸ್ ಸಂಸ್ಥೆಗೆ ಈ-ಟೆಂಡರ್ ಮೂಲಕ ನಿರ್ಮಾಣ ಹೊಣೆ ಲಭಿಸಿದೆ. ಒಟ್ಟು 11.87 ಕೋಟಿ ರೂ. ವೆಚ್ಚದಲ್ಲಿ ಘಟಕದ ನಿರ್ಮಾಣ ಜರುಗಲಿದೆ. ಯೋಜನೆಯ ಶೇ 20 ಮೊಬಲಗು ಮುಂಗಡವಾಗಿ ನೀಡಲಾಗುವುದು. ಶೇ 50 ಮೊಬಲಗು ಘಟಕದ ಸ್ಥಾಪನೆ ವೇಳೆ, ಶೇ 30 ನಿರ್ಮಾಣ ಪೂರ್ಣಗೊಂಡ ಅವಧಿಯಲ್ಲಿ ವಿತರಿಸಲಾಗುವುದು.
- Get link
- X
- Other Apps
Comments
Post a Comment