5 ರಂದು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸರಣಿ ಉಪನ್ಯಾಸ 'ಸಾಹಿತ್ಯಯಾನ' ದ ಎರಡನೇ ಉಪನ್ಯಾಸ ಕಾರ್ಯಕ್ರಮ

5 ರಂದು ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಕನ್ನಡ ವಿಭಾಗದಲ್ಲಿ ಸರಣಿ ಉಪನ್ಯಾಸ 'ಸಾಹಿತ್ಯಯಾನ' ದ ಎರಡನೇ ಉಪನ್ಯಾಸ ಕಾರ್ಯಕ್ರಮ
ಕಾಸರಗೋಡು: ಕೇರಳ ಕೇಂದ್ರೀಯ ವಿಶ್ವವಿದ್ಯಾಲಯ,ಕಾಸರಗೋಡಿನ ಕನ್ನಡ ವಿಭಾಗದ ಆಯೋಗದಲ್ಲಿ ಸರಣಿ ಉಪನ್ಯಾಸ ' ಸಾಹಿತ್ಯಯಾನ' ದ ಎರಡನೇ ಉಪನ್ಯಾಸ ಕಾರ್ಯಕ್ರಮವು ಜೂನ್ 05 ರಂದು ಸಂಜೆ 5 ಗಂಟೆಗೆ ಗೂಗಲ್ ಮೀಟ್ ಮೂಲಕ ನಡೆಯಲಿದೆ. ' ಅಭಿಜಾತ ಕನ್ನಡ ಕಾವ್ಯ- ಸೊಗಸು' ಎನ್ನುವ ವಿಷಯದಲ್ಲಿ ಸರಕಾರಿ ಕಾಲೇಜು ಕಾಸರಗೋಡು ಇಲ್ಲಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಹಾಗೂ ಸಂಶೋಧನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ರತ್ನಾಕರ ಮಲ್ಲಮೂಲೆ ಅವರು ಉಪನ್ಯಾಸ ನೀಡಲಿದ್ದಾರೆ. ಕೇಂದ್ರೀಯ ವಿ.ವಿಯ ಕನ್ನಡ ವಿಭಾಗದ ಪ್ರಭಾರ ಮುಖ್ಯಸ್ಥರಾದ ಡಾ.ಮೋಹನ್ ಎ.ಕೇ ಪ್ರಾಸ್ತಾವಿಕವಾಗಿ ಮಾತನಾಡುವರು. ಭಾಷೆ ಮತ್ತು ತೌಲನಿಕ ಸಾಹಿತ್ಯ ನಿಕಾಯದ ಮುಖ್ಯಸ್ಥರಾದ ಡಾ.ವಿ.ರಾಜೀವ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು.
ಕನ್ನಡ ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಕಾರ್ಯಕ್ರಮ ಸಂಯೋಜಕ,ಅತಿಥಿ ಸಹಾಯಕ ಪ್ರಾಧ್ಯಾಪಕ ಮಹೇಶ್ ಎಂ ವಿನಂತಿಸಿಕೊಂಡಿದ್ದಾರೆ. ಗೂಗಲ್ ಮೀಟ್ ವಿಳಾಸ:https://meet.google.com/asp-hsrm-ahr

Comments