- Get link
- X
- Other Apps
- Get link
- X
- Other Apps
#ಕಣ್ಮರೆಯಾದರೆ_ನಮ್ಮ_ಟಾಗೋರ್
ಕರ್ನಾಟಕ ವಾರ್ತಾ ಇಲಾಖೆಯ ಮಾಜಿ ಆಯುಕ್ತ, ನಿವೃತ್ತ ADGP, ಸಚಿತ್ರಾ ಚಲನಚಿತ್ರ ಫೌಂಡೇಶನ್ ಅಧ್ಯಕ್ಷ, ಶ್ರೇಷ್ಠ ವಾಗ್ಮಿ.... ಟಾಗೋರ್ IPS ಅವರು ಇನ್ನು ನೆನಪು ಮಾತ್ರ ಎಂಬುದು ಅರಗಿಸಿಕೊಳ್ಳಲಾಗದ ಸತ್ಯ. 🌹😞😞😞🌹🙏
ನನ್ನ ಮತ್ತು ಅವರ ನಡುವೆ ಅದ್ಯಾವುದೋ ಅವ್ಯಕ್ತ ಆತ್ಮೀಯತೆಯೊಂದು ಮೂಡಿ ಹಲವಾರು ವರ್ಷಗಳೇ ಕಳೆದು ಹೋಗಿದೆ. ಇದಕ್ಕೆ ಕಾರಣರು ಕರ್ನಾಟಕ ಜಾನಪದ ಪರಿಷತ್ತು ಅಧ್ಯಕ್ಷರಾದ ಎ.ಆರ್.ಸುಬ್ಬಯ್ಯಕಟ್ಟೆ.
ಬೆಂಗಳೂರಿಗೆ ಹೋದಾಗಲೆಲ್ಲ ಅವರ ಮನೆಗೆ ತೆರಳಿ ಟಾಗೋರ್ ಸರ್ ರವರನ್ನು ಭೇಟಿಯಾಗದೆ ಬಂದದ್ದಿಲ್ಲ. ಪ್ರತಿ ಭೇಟಿಯಲ್ಲೊಂದು ಹೊಸತನವಿತ್ತು. ಅವರ ಮಾತುಗಳನ್ನು ಮೈ ಮರೆತು ಕೇಳಿದ್ದೇ ಹೆಚ್ಚು.
ನನ್ನ ಪಾಲಿಗೆ ಅವರೊಂದು ಉತ್ತಮ ಮಾರ್ಗದರ್ಶಿಯಾಗಿದ್ದರು. ಅವರ ಆಶೀರ್ವಾದದ ರಕ್ಷೆ ಸದಾ ನಮ್ಮೊಂದಿಗಿದೆ. ಅವರ ಮುಖಾಂತರ ನಮ್ಮ ಸಾಹಿತ್ಯ, ಸಾಂಸ್ಕೃತಿಕ, ಜಾನಪದ, ಇನ್ನಿತರ ಕಾರ್ಯಗಳಿಗೆ ಸಿಕ್ಕಿದ ಸಹಕಾರ ಮತ್ತು ಆ ಮೂಲಕ ನಾವು ಇತರರಿಗೆ ನೆರವಾಗುವಲ್ಲಿ ಅವರು ತೋರಿದ ಸಹೃದಯತೆಯ ಕೊಂಡಿ ಕಳಚಿ ಹೋಯಿತು. ನಗುವೇ ಅವರ ಶೋಭೆ. ಮನಮುಟ್ಟುವ ಅವರ ಮಾತು, ನಡೆ, ಆತ್ಮೀಯತೆ, ನಗುಮುಖ ಮರೆಯಲೆಂತು?
ಬದಿಯಡ್ಕದಲ್ಲಿ ಜರುಗಿದ ಕರ್ನಾಟಕ ಜಾನಪದ ಪರಿಷತ್ತು ಆಯೋಜಿಸಿದ ಕುವೆಂಪು ನಾಟಕೋತ್ಸವದಲ್ಲಿ ಎಲ್ಲಾ ದಿವಸಗಳಲ್ಲಿಯೂ ಜತೆಗಿದ್ದು ಪ್ರೋತ್ಸಾಹ ನೀಡಿದವರು. ನೆನಪಿಸಿ ಕರೆ ಮಾಡಿ ಮಾತನಾಡಿ ಕ್ಷೇಮ ಸಮಾಚಾರ ತಿಳಿದುಕೊಳ್ಳುವ ಅವರ ಕಾಳಜಿ ಬೆರಗು ಮೂಡಿಸುತ್ತಿತ್ತು. ಜಾನಪದ ಪರಿಷತ್ತು ಹಾಗೂ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿಯ ಎಲ್ಲಾ ಕಾರ್ಯಕ್ರಮಗಳಿಗೂ ಪ್ರೋತ್ಸಾಹ ನೀಡುತ್ತಿದ್ದರು.. ಪೊಲೀಸ್ ವರಿಷ್ಠರಾಗಿದ್ದರೂ ಬೆಂಗಳೂರಿನಲ್ಲಿದ್ದ ಟಾಗೋರರಿಗೆ ನಮ್ಮ ಕಾಸರಗೋಡು, ಇಲ್ಲಿನ ಅಚ್ಚ ಕನ್ನಡದ ಮೇಲೆ ಅದೇನೋ ಒಲವು.
ನನ್ನ ಅಮ್ಮನನ್ನು #ಅಮ್ಮ ಎಂದೇ ಸಂಬೋಧಿಸುತ್ತಿದ್ದರು. ನಮ್ಮ ಕುಟುಂಬದ ಸದಸ್ಯರು ಎಂಬಂತೆ ಭಾಸವಾಗುವ ರೀತಿಯಲ್ಲಿ ನಮ್ಮೊಂದಿಗಿದ್ದವರು. ಆದುದರಿಂದಲೇ ಅವರ ಅಗಲುವಿಕೆ ಮನಸನ್ನು ತುಂಬಾ ಭಾರವಾಗಿಸಿದೆ.
ಬದುಕು ಜಟಕಾಬಂಡಿ.. ವಿಧಿ ಅದರ ಸಾಹೇಬ... ಎನ್ನುವಂತೆ..
ಯಾರೂ ಶಾಶ್ವತವಲ್ಲ. ಬದುಕನ್ನು ಕಾಣದ ಕೈಗಳು ನಡೆಸಿದಂತೆ ಮುನ್ನಡೆಯಬೇಕು.
ಟಾಗೋರ್ ಸರ್ ಮತ್ತೆ ಹುಟ್ಟಿಬನ್ನಿ.. 💐💐🙏🙏🙏
ಅಖಿಲೇಶ್ ನಗುಮುಗಂ. ಕರ್ನಾಟಕ ಜಾನಪದ ಪರಿಷತ್ತು ಕೇರಳ ಘಟಕ.
ನನ್ನ ಕ್ಯಾಮರಾದಲ್ಲಿ ಸೆರೆಯಾದ ಟಾಗೋರ್ ಸರ್ ಜತೆಗಿನ ಅವಿಸ್ಮರಣೀಯ ಕ್ಷಣಗಳನ್ನು ಈ ಸಂದರ್ಭದಲ್ಲಿ ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುವೆ.
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇https://youtube.com/c/Fox24livenewschannel
- Get link
- X
- Other Apps
Comments
Post a Comment