ಕಾಸರಗೋಡು ಜಿಲ್ಲೆಯಲ್ಲಿ ಡೆಂಗೆಜ್ವರ : ಪ್ರತಿರೋಧವೇ ಪ್ರಧಾನ

l

ಕಾಸರಗೋಡು ಜಿಲ್ಲೆಯಲ್ಲಿ ಡೆಂಗೆಜ್ವರ : ಪ್ರತಿರೋಧವೇ ಪ್ರಧಾನ

ಕಾಸರಗೋಡು, ಮೇ 21: ಕಾಸರಗೋಡು ಜಿಲ್ಲೆಯಲ್ಲಿ ಬಿರುಸಿನ ಮಳೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಡೆಂಗೆಜ್ವರ ತಲೆದೋರತೊಡಗಿದೆ. ದೇಲಂಪಾಡಿ, ವೆಸ್ಟ್ ಏಳೇರಿ, ಕೋಡೋಂ-ಬೇಳೂರು ಸಹಿತ ಪ್ರದೇಶಗಳಲ್ಲಿ ಡೆಂಗೆ ವರದಿಯಾಗಿದೆ. ಈ ನಿಟ್ಟಿನಲ್ಲಿ ಕೋವಿಡ್ ಪ್ರತಿರೋಧ ನಡೆಸುತ್ತಿರುವುದರ ಜೊತೆಗೆ ಡೆಂಗೆಜ್ವರದ ಪ್ರತಿರೋಧ ಚಟುವಟಿಕೆಗಳನ್ನೂ ನಡೆಸುವಂತೆ ಜಿಲ್ಲಾ ವೈದ್ಯಧಿಕಾರಿ(ಆರೋಗ್ಯ) ಡಾ.ರಾಜನ್ ಕೆ.ಆರ್. ತಿಳಿಸಿದರು.


                             ತಕ್ಷಣ ತಲೆದೋರುವ ತೀವ್ರ, ಅಸಹನೀಯ ತಲೆನೋವು, ಸಂಧಿ, ಮಾಂಸಪೇಷಿಗಳಲ್ಲಿ ನೋವು, ಕಂಗಳ ಹಿಂಬದಿ ನೋವು, ಎದೆ, ಮುಖಗಳಲ್ಲಿ ಬಾಪು ಇತ್ಯಾದಿಗಳು ಡೆಂಗೆ ಜ್ವರದ ಪ್ರಧಾನ ಲಕ್ಷಣಗಳಾಗಿವೆ. ಹಗಲು ಹೊತ್ತಿನಲ್ಲಿ ಈಡಿಸ್ ಸೊಳ್ಳೆಗಳ ಕಡಿತದಿಂದ ಈ ರೋಗ ಹರಡುತ್ತದೆ. ನೀರಲ್ಲಿ ಈ ಸೊಳ್ಳೆಗಳು ತತ್ತಿಯಿರಿಸುವುದನ್ನು ತಡೆದು ಅವುಗಳ ಸಂತಾನ ನಾಶ ನಡೆಸುವ ಇತ್ಯಾದಿ ಚಟುವಟಿಕೆಗಳ ಮೂಲಕ ಈ ರೋಗದ ಹರಡುವಿಕೆ ತಡೆಯಬಹುದು.


ಇಲಿಜ್ವರ : ಸಾರ್ವಜನಿಕರು ಜಾಗರೂಕತೆ ಪಾಲಿಸಬೇಕು
ಕಾಸರಗೋಡು, ಮೇ 21: ಮಳೆಗಾಲದಲ್ಲಿ ಇತ್ಯಾದಿ ಕಾಲದಲ್ಲಿ ನೀರು ಕಟ್ಟಿನಿಲ್ಲುವ ಪ್ರದೇಶಗಳಲ್ಲಿ ತಲೆದೊರುವ ಸಾಂಕ್ರಾಮಿಕ ರೋಗಗಳಲ್ಲಿ ಒಂದು ಇಲಿಜ್ವರವಾಗಿದೆ. ನಿಶಕ್ತಿ, ಜ್ವರ, ತಲೆನೋವು, ಮಾಂಸಪೇಷಿಗಳಲ್ಲಿ ನೋವು ಈ ರೋಗದ ಪ್ರಧಾನ ಲಕ್ಷಣಗಳಾಗಿವೆ. ಕಂಗಳಲ್ಲಿ ಕೆಂಪು ಬಣ್ಣ, ಮೂತ್ರದ ಪ್ರಮಾಣದಲ್ಲಿ ಕಡಿಮೆ, ಹಳದಿ ಜ್ವರದ ಲಕ್ಷಣಗಳು ಇತ್ಯಾದಿ ಕಂಡುಬರಬಹುದು.
                            ಪಶುಸಂಗೋಪನೆ, ಪ್ರಾಣಿ ಸಾಕಣೆ ಇತ್ಯಾದಿ ನಡೆಸುವವರು ಕೃಷಿಕರು, ಕೃಷಿ ಕಾರ್ಮಿಕರು, ನೌಕರಿ ಖಾತರಿ ಯೋಜನೆ ಕಾರ್ಮಿಕರು, ಮಲಿನ ಜಲ ಸಂಪರ್ಕದಲ್ಲಿರುವವರು, ಕಟ್ಟಡ ನಿರ್ಮಾಣ ಕಾರ್ಮಿಕರು ಇತ್ಯಾದಿ ಮಂದಿ ಆರೋಗ್ಯ ಕಾರ್ಯಕರ್ತರ ಮಾರ್ಗದರ್ಶನದಲ್ಲಿ ಪ್ರತಿರೋಧ ಗುಳಿಗೆ ಡೋಕ್ಸಿ ಸೈಕ್ಲಿನ್ ಕಡ್ಡಾಯವಾಗಿ ಸೇವಿಸಬೇಕು. ಸ್ವಯಂ ಚಿಕಿತ್ಸೆ ನಡೆಸಕೂಡದು. ಯಾವುದೇ ರೋಗ ಲಕ್ಷಣ ಕಂಡುಬಂದಲ್ಲಿ ಸಮೀಪದ ಸರಕಾರಿ ಆಸ್ಪತ್ರೆ ಯಾ ಆರೋಗ್ಯ ಕಾರ್ಯಕರ್ತರನ್ನು ಸಂಪರ್ಕಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿದರು.  

.


https://youtube.com/c/Fox24livenewschannel

Comments