ವಿಶೇಷಚೇತನ ಮಕ್ಕಳಿಗೆ ಟೆಲಿ ಪುನರ್ ವಸತಿಸೌಲಭ್ಯ : ರಾಜ್ಯದಲ್ಲೇ ಪ್ರಫ್ರಥಮ ಬಾರಿಗೆ ಕಾಸರಗೋಡಿನಲ್ಲಿ


ವಿಶೇಷಚೇತನ ಮಕ್ಕಳಿಗೆ ಟೆಲಿ ಪುನರ್ ವಸತಿ
ಸೌಲಭ್ಯ
                   
ರಾಜ್ಯದಲ್ಲೇ ಪ್ರಫ್ರಥಮ ಬಾರಿಗೆ ಕಾಸರಗೋಡಿನಲ್ಲಿ
ಕಾಸರಗೋಡು, ಮೇ 7: ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕಾಸರಗೊಡು ಜಿಲ್ಲೆಯಲ್ಲಿ ವಿಶೇಷಚೇತನ ಮಕ್ಕಳಿಗೆ ಟೆಲಿ ಪುನರ್
ವಸತಿ ಮತ್ತು ಆನ್ ಲೈನ್ ಥೆರಪಿ ಸೌಲಭ್ಯ ಏರ್ಪಡಿಸಲಾಗಿದೆ. ಕೋವಿಡ್ 19 ಹೆಚ್ಚಳದ ಹಿನ್ನೆಲೆಯಲ್ಲಿ ವಿಶೇಷ ಚೇತನ ಮಕ್ಕಲಿಗೆ
ಮುಂದುವರಿಯುವ ತರಬೇತಿ ಮತ್ತು ಜಾಗೃತಿ ಖಚಿತಪಡಿಸುವ ಉದ್ದೇಶದಿಂದ ಜಿಲ್ಲಾಡಳಿತೆ ಮತ್ತು ಸಮಾಜನೀತಿ ಇಲಾಖೆಗಳು
ಅಕ್ಕರ ಫೌಂಡೇಷನ್ ನ ಸಹಕಾರದೊಂದಿಗೆ ಟೆಲಿ ಪುನರ್ ವಸತಿ ಸೌಲಭ್ಯ ಆರಂಭಿಸಿದೆ.
ಆನ್ ಲೈನ್ ಮೂಲಕ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸೌಲಭ್ಯಕ್ಕೆ ಚಾಲನೆ ನೀಡಿದರು. ಜಿಲ್ಲಾ
ಸಮಾಜನೀತಿ ಅಧಿಕಾರಿ ಷೀಬಾ ಮುಂತಾಝ್ ಅಧ್ಯಕ್ಷತೆ ವಹಿಸಿದ್ದರು. ಜಂಟಿ ನಿರ್ದೇಶಕಿ ಜಲಜಾ ಪ್ರಾಸ್ತಾವಿಕ ಭಾಷಣ
ಮಾಡಿದರು. ಡಿ.ಡಿ.ಇ. ಕೆ.ವಿ.ಪುಷ್ಪಾ, ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಎಸ್.ಎಸ್.ಕೆ. ಜಿಲ್ಲಾ ಕಾರ್ಯಕ್ರಮ
ಅಧಿಕಾರಿ ಪಿ.ರವೀಂದ್ರನ್, ಜಿಲ್ಲಾ ಶಿಶು ಸಂರಕ್ಷಣೆ ಅಧಿಕಾರಿ ಬಿಂದು ಸಿ.ಎ, ಅಕ್ಕರ ಫೌಂಡೇಷನ್ ಪ್ರತಿನಿಧಿ ಜಿಮಿ ರಾಜ್
ಮೊದಲಾದವರು ಉಪಸ್ಥಿತರಿದ್ದರು ಜಿಲ್ಲಾ ಪ್ರೊಬೇಷನ್ ಅಧಿಕಾರಿ ಬಿಜು ಸ್ವಾಗತಿಸಿದರು. ಟೆಲಿ ರಿಹಾಬ್ ಜಿಲ್ಲಾ ಸಂಚಾಲಕಿ ರಿಮಾ
ವಂದಿಸಿದರು.
ವಿಶೇಷಚೇತನರ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವ ಫಿಝಿಯೋಥೆರಪಿಸ್ಟ್, ಸ್ಪೀಚ್ ಥೆರಪಿಸ್ಟ್, ಒಕ್ಯೂಪೇಷನ್ ಥೆರಪಿಸ್ಟ್,
ಸೈಕಾಲಜಿಸ್ಟ್ , ಸೋಷ್ಯಲ್ ಎಜ್ಯುಕೇಟರ್, ಸೋಷ್ಯಲ್ ವರ್ಕರ್ ಎಂಬ ಪ್ರೊಫೆಷನಲ್ ಗಳನ್ನು ಅಳವಡಿಸಿ ಮಕ್ಕಳ
ವಿಶೇಷಚೇತನತೆ, ವಯೋಮತಿ, ಅಗತ್ಯ ಇತ್ಯಾದಿಗಳ ಹಿನ್ನೆಲೆಯಲ್ಲಿ ಮನೆಯಲ್ಲೇ ನಡೆಸಬಹುದಾದ ಕಟ್ಟುನಿಟ್ಟುಗಳನ್ನು ಮೊದಲ
ಹಂತದಲ್ಲಿ ತಿಳಿಸಲಾಗುವುದು. ತದನಂತರ ಅವರಿಗೆ ಅಗತ್ಯವಿರುವ ವರ್ಕ್ ಶೀಟ್, ಡೆಮೋ ವಿಡಿಯೋ, , ಆನ್ ಲೈನ್ ಥೆರಪಿ
ಇತ್ಯಾದಿ ನೀಡಲಾಗುವುದು. ಹೆಚ್ಚುವರಿ ಮಾಹಿತಿಗಾಗಿ ಮತ್ತು ನೋಂದಣಿಗಾಗಿ ದೂರವಾಣಿ ಸಂಖ್ಯೆಗಳು: 9188666403,
989582606.

Comments