ಯುವತಿ ನಾಪತ್ತೆ : ಚುರುಕುಗೊಂಡ ತನಿಖೆ


ಯುವತಿ ನಾಪತ್ತೆ : ಚುರುಕುಗೊಂಡ ತನಿಖೆ
ಕಾಸರಗೋಡು, ಮೇ 22: ಕಾಸರಗೊಡು ಜಿಲ್ಲೆಯ ಪುಲ್ಲೂರು ಪೊಳ್ಳಕ್ಕಡ ಆಲಿಂಗಾಲ್ ನಿವಾಸಿ ಶ್ರೀಧರನ್ ಎಂಬವರ ಪುತ್ರಿ ಕೆ.ಅಂಜಲಿ (21) ಏ.19ರಿಂದ ಕಾಣೆಯಾಗಿದ್ದಾರೆ. ಈ ಬಗ್ಗೆ ಅಂಬಲತ್ತರ ಪೊಲೀಸರು ಕೇಸು ದಾಖಲಿಸಿದ್ದು, ತನಿಖೆ ಚುರುಕಿನಿಂದ ಸಾಗುತ್ತಿದೆ. ಏ.19ರಂದು ಮಧ್ಯಾಹ್ನ 1.30ಕ್ಕೆ ಮನೆಯಿಂದ ತೆರಳಿದವರು ನಂತರ ಮರಳಿರಲಿಲ್ಲ ಎಂದು ಕೇಸಿನಲ್ಲಿ ತಿಳಿಸಲಾಗಿದೆ. ಬಿಳಿ ಬಣ್ಣ, 167 ಸೆ.ಮೀ. ಎತ್ತರ ಹೊಂದಿದ್ದಾರೆ. ನಾಪತ್ತೆಯ ಸಂದರ್ಭ ಕಪ್ಪು ಬಣ್ಣದಲ್ಲಿ ಬಿಳಿ ಚುಕ್ಕೆಗಳಿರುವ ಟಾಪ್, ಕಪ್ಪು ಪ್ಯಾಂಟ್ ಧರಿಸಿದ್ದರು. ಒಂದು ಹ್ಯಾಂಡ್ ಬ್ಯಾಗ್, ಒಂದು ಶೋಲ್ಡರ್ ಬ್ಯಾಗ್ ಜತೆಗೆ ಒಯ್ದಿದ್ದಾರೆ. ಇವರ ಕುರಿತು ಯಾವುದೇ ಮಾಹಿತಿಗಳಿದ್ದಲ್ಲಿ ಅಂಬಲತ್ತರ ಪೊಲೀಸರಿಗೆ( ದೂರವಾಣಿ ಸಂಖ್ಯೆಗಳು: 04672243200, 9497947275.) ಮಾಹಿತಿ ನೀಡುವಂತೆ ತಿಳಿಸಲಾಗಿದೆ.

Comments