ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ ಆರಂಭ


ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ ಆರಂಭ 
ಕಾಸರಗೋಡು, ಮೇ 11 : ಕಾಸರಗೋಡು ಜಿಲ್ಲೆಯಲ್ಲಿ ಇತರ ರಾಜ್ಯಗಳ ಕಾರ್ಮಿಕರಿಗೆ ಆಹಾರ ಧಾನ್ಯಗಳ ವಿತರಣೆ ಆರಂಭಗೊಂಡಿದೆ.  
                           ಇದರ ಅಂಗವಾಗಿ ಕಾಞಂಗಾಡು ನಗರಸಭೆಯ 250 ಮಂದಿ ಇತರ ರಾಜ್ಯಗಳ ಕಾರಿಕರಿಗೆ ಕಿಟ್ ವಿತರಣೆ ನಡೆಯಿತು. ಕಾಸರಗೋಡು ನಗರಸಭೆಯಲ್ಲಿ ಬುಧವಾರ (ಮೇ 12) ಕಿಟ್ ವಿತರಿಸಲಾಗುವುದು. 
                            ಇತರ ರಾಜ್ಯಗಳ ಕಾರ್ಮಿಕರ ಮಾಹಿತಿ ಸಂಗ್ರಹ ನಡೆಸಿರುವ ಹಿನ್ನೆಲೆಯಲ್ಲಿ ನೌಕರಿ ಮಾಲೀಕರ ವ್ಯಾಪ್ತಿಯಲ್ಲಿ ಅಲ್ಲದೆ ನೌಕರಿ ನಡೆಸುವ ಕಾರ್ಮಿಕರಿಗೆ ಕಾರ್ಮಿಕ ಇಲಾಖೆ ಮತ್ತು ಸಪ್ಲೈ ಕೋ ಸಹಕಾರದೊಂದಿಗೆ ಕಿಟ್ ವಿತರಣೆ ನಡೆಸಲಾಗುತ್ತಿದೆ. 5 ಕಿಲೋ ಅಕ್ಕಿ, ತಲಾ 2 ಕಿಲೋ ಗೋಧಿಪುಡಿ, ಕಡ್ಲೆ, 100 ಗ್ರಾಂ ಮೆಣಸಿನ ಪುಡಿ, 5 ಮಾಸ್ಕ್ ಹೀಗೆ 10 ಸಾಮಾಗ್ರಿಗಳಿರುವ ಒಮದು ಸಾವಿರ ಕಿಟ್ ಗಳನ್ನು ಕಾಸರಗೋಡು ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ ಸಿದ್ಧಪಡಿಸಲಾಗಿದೆ. ಇವನ್ನು ಕಾರ್ಮಿಕ ಇಲಾಖೆಯ ಸಿಬ್ಬಂದಿ ನೇರವಾಗಿ ಆಗಮಿಸಿ ಕಾರ್ಮಿಕರಿಗೆ ವಿತರಣೆ ನಡೆಸುತ್ತಿದ್ದಾರೆ. ಮಾಹಿತಿ ಸಂಗ್ರಹ ಪೂರ್ಣಗೊಂಡ ತಕ್ಷಣ ಕಿಟ್ ವಿತರಣೆ ಪೂರ್ಣಗೊಳ್ಳಲಿದೆ ಎಂದು ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಕೇಶವನ್ ತಿಳಿಸಿದರು.

Comments