- Get link
- X
- Other Apps
- Get link
- X
- Other Apps
ಪರಿಣಾಮ ನೀಡುತ್ತಿರುವ ಕೋವಿಡ್ ಪ್ರತಿರೋಧ: ಕಾಸರಗೋಡು ಜಿಲ್ಲೆಯಲ್ಲಿ 27 ಝೀರೋ ಕೋವಿಡ್ ವಾರ್ಡ್ ಗಳು
ಕಾಸರಗೋಡು, ಮೇ 25: ಕಾಸರಗೊಡು ಜಿಲ್ಲೆಯಲ್ಲಿ ಕೋವಿಡ್ ಪ್ರತಿರೊಧ ಚಟುವಟಿಕೆಗಳು ಪರಿಣಾಮ ನೀಡುತ್ತಿವೆ. ಇಲ್ಲಿನ 27 ಝೀರೋ ವಾರ್ಡ್ ಗಳು ಈ ಮಾತಿಗೆ ಪುಷ್ಠಿ ನೀಡುತ್ತಿವೆ.
ಜಿಲ್ಲಾಡಳಿತೆ, ಪೊಲೀಸ್, ಆರೋಗ್ಯ ಇಲಾಖೆಗಳು, ಸ್ಥಳೀಯಾಡಳಿತ ಸಂಸ್ಥೆಗಳು, ಮಾಸ್ಟರ್ ಯೋಜನೆಯ ಕಾರ್ಯಕರ್ತರು ಮೊದಲಾದವರು ನಡೆಸುತ್ತಿರುವ ಸತತ ಯತ್ನಗಳ ಫಲವಾಗಿ ಈ ಸಕಾರಾತ್ಮಕ ಪರಿಣಾಮ ನಡೆದಿದೆ. ಮೇ 20ರಿಂದ 24 ವರೆಗಿನ ಗಣನೆ ಅವಲೋಕಿಸಿದರೆ ಕಾಸರಗೋಡು ಜಿಲ್ಲೆಯ 27 ವಾರ್ಡ್ ಗಳಲ್ಲಿ ನೂತನ ಕೋವಿಡ್ ಪಾಸಿಟಿವ್ ಪ್ರಕರಣಗಳು ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಇವುಗಳು ಝೀರೋ ಕೋವಿಡ್ ವಾರ್ಡ್ ಗಳಾಗಿವೆ.
ನಮ್ಮ ಯೂಟ್ಯೂಬ್ ಚಾನಲ್ ನ ಈ ಕೆಳಗಿನ ಲಿಂಕ್ ಅನ್ನು ಓಪನ್ ಮಾಡಿ ನೋಡಿ ಸಬ್ ಸ್ಕ್ರೈಬ್ ಮಾಡಿ ಬೆಲ್ ಬಟನ್ ಒತ್ತಿ👇
https://youtube.com/c/Fox24livenewschannel
ಕುಂಬಡಾಜೆ ಗ್ರಾಮ ಪಂಚಾಯತ್ನ 8 ನೇ ವಾರ್ಡ್ ನಲ್ಲಿ ಕಳೆದ 6 ದಿನಗಳಿಂದ, 4ನೇ ವಾರ್ಡ್ನಲ್ಲಿ ಕಳೆದ 4 ದಿನಗಳಿಂದ, ಬೆಳ್ಳೂರು ಗ್ರಾಮ ಪಂಚಾಯತ್ ನ 3ನೇ ವಾರ್ಡ್ ನಲ್ಲಿ 5 ಸದಿನಗಳಿಂದ, 6ನೇ ವಾರ್ಡ್ ನಲ್ಲಿ ಕಳೆದ 6 ದಿನಗಳಿಂದ, ಕಾರಡ್ಕ ಗ್ರಾಮ ಪಂಚಾಯತ್ ನ 3ನೇ ವಾರ್ಡ್ ನಲ್ಲಿ ಕಳೆದ 4 ದಿನಗಳಿಂದ, 11ನೇ ವಾರ್ಡ್ ನಲ್ಲಿ ಕಳೆದ 3 ದಿನಗಳಿಂದ, ಕುಂಬಳೆ ಗ್ರಾಮ ಪಂಚಾಯತ್ ನ 9 ನೇ ವಾರ್ಡ್ ನಲ್ಲಿ, ಮಧೂರು ಗ್ರಾಮ ಪಂಚಾಯತ್ ನ 1ನೇ ವಾರ್ಡ್ ನಲ್ಲಿ, ಕಾಸರಗೊಡು ನಗರಸಭೆಯ 31ನೇ ವಾರ್ಡ್ ನಲ್ಲಿ, ಮಂಜೇಶ್ವರ ಗ್ರಾಮ ಪಂಚಾಯತ್ ನ 20ನೇ ವಾರ್ಡ್ ನಲ್ಲಿ ಕಳೆದ 6 ದಿನಗಳಿಂದ, ಪುತ್ತಿಗೆ ಗ್ರಾಮ ಪಂಚಾಯತ್ ನ 2ನೇ ವಾರ್ಡ್ ನಲ್ಲಿ ಕಳೆದ 4 ದಿನಗಳಿಂದ, ಪೈವಳಿಕೆ ಗ್ರಾಮ ಪಂಚಾಯತ್ ನ 5,6,15ನೇ ವಾರ್ಡ್ ನಲ್ಲಿ 3 ದಿನಗಳಿಂದ, ವರ್ಕಾಡಿ ಗ್ರಾಮ ಪಂಚಾಯತ್ ನ 5,8ನೇ ವಾರ್ಡ್ ಗಳಲ್ಲಿ ಕಳೆದ 4 ದಿನಗಳಿಂದ, ಒಂದೇ ಒಂದುನೂತನ ಕೋವಿಡ್ ಪಾಸಿಟಿವ್ ಪ್ರಕರಣಗಳು ವರದಿಯಾಗಿಲ್ಲ.
ಚೆರುವತ್ತೂರು ಗ್ರಾಮ ಪಂಚಾಯತ್ ನ 5ನೇ ವಾರ್ಡ್ನಲ್ಲಿ, ಈಸ್ಟ್ ಏಳೇರಿ ಗ್ರಾಮ ಪಂಚಾಯತ್ 14ನೇ ವಾರ್ಡ್ ನಲ್ಲಿ ಕಳೆದ 4 ದಿನಗಳಿಂದ, ಕಯ್ಯೂರು-ಚೀಮೇನಿ ಗ್ರಾಮ ಪಂಚಾಯತ್ ನ 3 ನೇ ವಾರ್ಡ್ ನಲ್ಲಿ ಕಳೆದ 4 ದಿನಗಳಿಂದ, ಕಿನಾನೂರು-ಕರಿಂದಳಂ ಗ್ರಾಮ ಪಂಚಾಯತ್ ನ 4ನೇ ವಾರ್ಡ್ ನಲ್ಲಿ ಕಳೆದ 5 ದಿನಗಳಿಂದ, 14,15ನೇ ವಾರ್ಡ್ ನಲ್ಲಿ , ಪಡನ್ನ ಗ್ರಾಮ ಪಂಚಾಯತ್ ನ 3ನೇ ವಾರ್ಡ್ ನಲ್ಲಿ, ವಲಿಯಪರಂಬ ಗ್ರಾಮ ಪಂಚಾಯತ್ ನ 1,2ನೇ ವಾರ್ಡ್ ಗಳಲ್ಲಿ ಕಳೆದ 3 ದಿನಗಳಿಂದ, 4,7,8, ವಾರ್ಡ್ ಗಳಲ್ಲಿ 4 ದಿನಗಳಿಂದ, 13ನೇ ವಾರ್ಡ್ ನಲ್ಲಿ ಕಳೆದ 8 ದಿನಗಳಿಂದ ನೂತನ ಪಾಸಿಟಿವ್ ರೋಗಳು ಪತ್ತೆಯಾಗಿಲ್ಲ.
ಮಾಸ್ಟರ್ ಯೋಜನೆಯ ಸದಸ್ಯರಾಗಿರುವ ಶಿಕ್ಷಕರು ಜೆ.ಎಚ್.ಐ. ಆಶಾ ಕಾರ್ಯಕರ್ತರೊಂದಿಗೆ ಸಂಪರ್ಕಿಸಿ ಕೋವಿಡ್ ಬಧಿತರ ವಾರ್ಡ್ ಮಟ್ಟದ ಗಣನೆಯನ್ನು ಪ್ರತ್ಯೇಕ ಫಾರ್ಮೇಟ್ ನಲ್ಲಿ ಸಿದ್ಧಪಡಿಸುತ್ತಾರೆ. ವಾರ್ಡೊಂದರಲ್ಲಿ 4-5 ಶಿಕ್ಷಕರು ಈ ನಿಟ್ಟಿನಲ್ಲಿ ಚಟುವಟಿಕೆ ನಡೆಸುತ್ತಿದ್ದಾರೆ. ವಾರ್ಡೊಂದರ 40-50 ಮನೆಗಳನ್ನು 6-10 ಮೈಕ್ರೋ ಕ್ಲಸ್ಟರ್ ಗಳಾಗಿ ವಿಂಗಡಿಸಲಾಗುತ್ತದೆ. ಮೈಕ್ರೋ ಕ್ಲಸ್ಟರ್ ಗಳ ಹೊಣೆ ವಾರ್ಡ್ ಮಟ್ಟದ ಜಾಗೃತಿ ಸಮಿತಿಯ ಕೇರ್ ಟೇಕರ್ ಗಿರುತ್ತದೆ. ವಾರ್ಡ್ ಸದಸ್ಯರು, ಕುಟುಂಬಶ್ರೀ ಕಾರ್ಯಕರ್ತರು, ಜಾಗೃತಿ ಸಮಿತಿ ಸದಸ್ಯರು, ಆಶಾ ಕಾರ್ಯಕರ್ತರು, ಮಾಸ್ಟರ್ ಯೋಜನೆಯ ಶಿಕ್ಷಕರು ಸೇರಿರುವ ತಂಡ ವಾರ್ಡ್ ಗಳಲ್ಲಿ ಚಟುವಟಿಕೆ ನಡೆಸುತ್ತದೆ.
ಅನಿವಾರ್ಯ ಹಂತಗಳಲ್ಲಿ ಕೋವಿಡ್ ಪಾಸಿಟಿವ್ ಆಗಿರುವ, ಯಾ ಕ್ವಾರೆಂಟೈನ್ ನಲ್ಲಿರುವ ಮಂದಿಗೆ ಆಹಾರ ಸಾಮಾಗ್ರಿ ಇತ್ಯಾದಿ ತಲಪಿಸುವ ಹೊಣೆ ಮಾಸ್ಟರ್ ಯೋಜನೆಯ ಶಿಕ್ಷಕರಿಗಿದೆ. ಸಾರ್ವಜನಿಕರು ಮಾಸ್ಟರ್ ಯೋಜನೆಯ ಕಾರ್ಯಕರ್ತರೊಂದಿಗೆ ಉತ್ತಮ ಸಹಕಾರ ನೀಡುತ್ತಿದ್ದಾರೆ. ಈ ಎಲ್ಲ ವಿಚಾರಗಳ ಸಕಾರಾತ್ಮ ಪರಿಣಾಮ ಜಿಲ್ಲೆಯಲ್ಲಿ ಕಂಡುಬರುತ್ತಿದೆ.
.....
- Get link
- X
- Other Apps
Comments
Post a Comment