- Get link
- X
- Other Apps
- Get link
- X
- Other Apps
ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸ್ ನಲ್ಲಿ ಪ್ರಥಮ ಚಿಕಿತ್ಸಾ ಕಾರ್ಯಾಗಾರ.
ಕಣ್ಣೂರು ವಿಶ್ವವಿದ್ಯಾಲಯದ ಕಾಸರಗೋಡು ಕ್ಯಾಂಪಸ್, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್, ಇಂಡಿಯನ್ ಸೊಸೈಟಿ ಒಫ್ ಅನೆಸ್ತಿಯಾಸಿಯಲಿಸ್ಟ್, ಇಂಡಿಯನ್ ಅಕಾಡೆಮಿ ಆಫ್ ಪೀಡಿಯಾಟ್ರಿಕ್ಸ್ ಮತ್ತು ರೋಟರಿ ಕ್ಲಬ್ ಕಾಸರಗೋಡು ಸಂಯುಕ್ತ ಆಶ್ರಯದಲ್ಲಿ ಪ್ರಥಮ ಚಿಕಿತ್ಸೆ ಮತ್ತು ಮಾನಸಿಕ ಸಲಹಾ ಕೇಂದ್ರದ ಚಟುವಟಿಕೆಗಳ ಉದ್ಘಾಟನೆಯು ಇತ್ತೀಚೆಗೆ ಜರಗಿತು.ಪ್ರಥಮ ಚಿಕಿತ್ಸೆ ತರಬೇತಿಯ ಉದ್ಘಾಟನೆಯನ್ನು ಕಾಸರಗೋಡು ನಗರ ಸಭೆಯ ಅಧ್ಯಕ್ಷರಾದ ಅಡ್ವಕೇಟ್ ವಿ ಎಂ ಮುನೀರ್ ನೆರವೇರಿಸಿದರು.
ಸಲಹಾ ಕೇಂದ್ರದ ಚಟುವಟಿಕೆಗಳನ್ನು ನಗರ ಸಭೆಯ ಆರೋಗ್ಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಕಾಲಿದ್ ಕುಚ್ಚಿಕಾಡ್ ನೆರವೇರಿಸಿದರು.
ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಕಾಸರಗೋಡು ಘಟಕದ ಅಧ್ಯಕ್ಷರಾದ ಡಾ ನಾಎಅಯಣ ನಾಯ್ಕ್ ಪ್ರಾಸ್ರಾವಿಕವಾಗಿ ಮಾತನಾಡಿ , ಪ್ರಥಮ ಚಿಕಿತ್ಸೆಯ ಅರಿವು ಪ್ರತಿಯೊಬ್ಬನಿಗೂ ಅಗತ್ಯ. ತನ್ಮೂಲಕ ಅಮೂಲ್ಯ ಜೀವವವನ್ಹು ಉಳಿಸಬಹುದು ಎಂದರು. ರೋಟರಿಯ ಮಾಜಿ ಸಹಾಯಕ ಗವರ್ನರ್ ರಾಧಾಕೃಷ್ಣ, ರೋಟರಿ ಕ್ಲಬ್ ಅಧ್ಯಕ್ಷರಾದ ಡಾ ಜನಾರ್ದನ್ ನಾಯ್ಕ್, ಶಿಕ್ಷಣ ವಿಭಾಗದ ಮುಖ್ಯಸ್ಥೆಯಾದ ಡಾ ರಿಜುಮೋಲ್ ಕೆ ಸಿ ಶುಭಾಹಾರೈಸಿದರು.
ಕಾಸರಗೋಡು ಸರಕಾರಿ ಅಸ್ಪತ್ರೆಯ ಡಾ ಅನೂಪ್ ಹಾಗೂ ಚಟ್ಟಂಚಾಲ್ ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ ಕಾಯಿಂಞ ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿ ನೀಡಿದರು.
ಕ್ಯಾಂಪಸ್ ನಿರ್ದೇಶಕರಾದ ಡಾ ರಾಜೇಶ್ ಬೆಜ್ಜಂಗಳ ಅಧ್ಯಕ್ಷತೆ ವಹಿಸಿದ್ದರು. ಗಣಿತ ವಿಭಾಗದ ಪರಮೇಶ್ವರಿ ಸ್ವಾಗತಿಸಿ, ವಿದ್ಯಾರ್ಥಿ ಪ್ರತಿನಿಧಿ ಅನಘ ವಂದಿಸಿದರು.ಅಕ್ಷತಾ ಪ್ರಾರ್ಥಿಸಿದರು. ಪಲ್ಲವಿ ಕಾರ್ಯಕ್ರಮ ನಿರೂಪಿಸಿದರು.
- Get link
- X
- Other Apps
Comments
Post a Comment