ಫೆ.7 ಬಾಕುಡ ಸಮುದಾಯದ‘ಸಿರಿಮುಡಿ’ ಸಂಶೋಧನಾ ಕೃತಿ ಬಿಡುಗಡೆ

ಫೆ.7 ಬಾಕುಡ ಸಮುದಾಯದ
‘ಸಿರಿಮುಡಿ’ ಸಂಶೋಧನಾ ಕೃತಿ ಬಿಡುಗಡೆ

ಮಂಗಳೂರು: ಬೈಲಬಾಕುಡ ಸಮುದಾಯದ ನಾಗಾರಾಧನೆ, ದೈವಾರಾಧನೆ, ಜಾನಪದ ಸಾಹಿತ್ಯ, ತುಳು ಭಾಷೆ, ಸಂಸ್ಕೃತಿಯ ಅಭ್ಯುದಯಕ್ಕೆ ಅವರ ಕೊಡುಗೆ ಕುರಿತು ಸುರೇಶ್ ಮಂಗಲ್ಪಾಡಿ ಅವರು ಸಿದ್ದಪಡಿಸಿದ  ‘ಸಿರಿಮುಡಿ’ ಸಂಶೋಧನಾ ಕೃತಿ ಫೆ.7 ರಂದು ಬೆಳಗ್ಗೆ 9.30 ಕ್ಕೆ ಕಾಸರಗೋಡು ಜಿಲ್ಲೆಯ ಇಚ್ಲಂಗೋಡು ಶ್ರೀ ನಾಗಬ್ರಹ್ಮ ಕೋಮಾರು ಚಾಮುಂಡೇಶ್ವರಿ ದೈವಸ್ಥಾನದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಕರ್ನಾಟಕ ರಾಜ್ಯ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್‌ಸಾರ್ ಕೃತಿ ಬಿಡುಗಡೆಗೊಳಿಸುವರು. ಸಿರಿಮುಡಿ ಸಂಘಟನಾ ಸಮಿತಿ ಅಧ್ಯಕ್ಷ ಹರೀಶ್ ಮಾಸ್ತರ್ ಅಂಗಡಿಪದವು ಅಧ್ಯಕ್ಷತೆ ವಹಿಸುವರು. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಧ್ವನಿ ಸುರುಳಿ ಬಿಡುಗಡೆಗೊಳಿಸುವರು. ಬಡಾಜೆ ಗೋಪಾಲಕೃಷ್ಣ ತಂತ್ರಿ ಆಶೀರ್ವಚನ ನೀಡುವರು. ಮಲಬಾರ್ ದೇವಸ್ವಂ ಬೋರ್ಡ್ (ನೀಲೇಶ್ವರ) ಇನ್ಸ್‌ಪೆಕ್ಟರ್ ಉಮೇಶ್ ಅಟ್ಟೆಗೋಳಿ, ಬಾಕುಡ ಸಮಾಜ ಸೇವಾ ಸಮಿತಿ ಕೇರಳ- ಕರ್ನಾಟಕ ಅಧ್ಯಕ್ಷೆ ಸುಜಾತ ಶಿವ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಸಾಲಿಯಾನ್ ಮುಂತಾದವರು ಮುಖ್ಯ ಅತಿಥಿಗಳಾಗಿರುವರು.
ಸಿರಿಮುಡಿ ಸಂಘಟನಾ ಸಮಿತಿಯು ಬಾಕುಡ ಸಮಾಜ ಸೇವಾ ಸಮಿತಿ ಹಾಗೂ 18 ದೈವಸ್ಥಾನಗಳ ಸಹಭಾಗಿತ್ವದಲ್ಲಿ ಕಾರ್ಯಕ್ರಮ ಆಯೋಜಿಸಿದೆ.

Comments

Post a Comment