ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಂದಿ ತಿವಿದು ಮೃತಪಟ್ಟ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಮಾನ್ಯ ಸಮೀಪದ ಪುದುಕೋಳಿಯ ದಿ|ಐತಪ್ಪ ನಾಯ್ಕ್‌ರವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಿ ಕೊಡುವುದಾಗಿ ನ್ಯಾಯವಾದಿ ಶ್ರೀಕಾಂತ್ ಭರವಸೆ

 

ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಂದಿ ತಿವಿದು ಮೃತಪಟ್ಟ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಮಾನ್ಯ ಸಮೀಪದ ಪುದುಕೋಳಿಯ ದಿ|ಐತಪ್ಪ ನಾಯ್ಕ್ರವರ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು  ಒದಗಿಸಿ ಕೊಡುವುದಾಗಿ ನ್ಯಾಯವಾದಿ ಶ್ರೀಕಾಂತ್ ಭರವಸೆ


 

ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಎಂಟನೆಯ ಸೇವಾ ಕಾರ್ಯವು,  ಇತ್ತೀಚೆಗೆ ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದಾಗ ಹಂದಿ ತಿವಿದು ಮೃತಪಟ್ಟ ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಮಾನ್ಯ ಸಮೀಪದ ಪುದುಕೋಳಿಯ ದಿ|ಐತಪ್ಪ ನಾಯ್ಕ್ರವರ ಕುಟುಂಬಕ್ಕೆ ದಿನನಿತ್ಯದ ಸಾಮಗ್ರಿಗಳನ್ನು ಹಸ್ತಾಂತರಿಸುವ ಮೂಲಕ ಜರಗಿತು. ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷರು ನ್ಯಾಯವಾದಿ ಶ್ರೀಕಾಂತ್  ಮಾತನಾಡಿ  ಅರಣ್ಯ ಇಲಾಖೆಯಿಂದ ಸಿಗಬಹುದಾದ ಎಲ್ಲಾ ಸೌಲಭ್ಯಗಳನ್ನು  ಒದಗಿಸಿ ಕೊಡುವುದಾಗಿ ಹಾಗು  ಪೂರ್ತಿಯಾಗದ ಮನೆಯ ಕೆಲಸವನ್ನು ಪೂರ್ಣ ಗೊಳಿಸಲು ಪ್ರಯತ್ನ ಮಾಡುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದಲ್ಲಿ  ರಜನಿ ಸಂದೀಪ್ ಮಾಜಿ ಬ್ಲೋಕ್ ಪಂಚಾಯತ್ ಹಾಗೂ ಮಂಡಲ ಅಧ್ಯಕ್ಷರು ಮಹಿಳಾ ಮೋರ್ಚಾ, ಬ್ಲೋಕ್ ಪಂಚಾಯತ್ ಸದಸ್ಯೆ ಅಶ್ವಿನಿ. ಪಂಚಾಯತ್ ಸದಸ್ಯೆ ಸ್ವಪ್ನ, ಪಂಚಾಯತ್ ಸದಸ್ಯ ಶಂಕರ ಡಿ,  ಬಾಲಕೃಷ್ಣ ಶೆಟ್ಟಿ ಕಡಾರು, ಬಿಜೆಪಿ ಕಾಸರಗೋಡು ಮಂಡಲ ಅಧ್ಯಕ್ಷರಾದ ಹರೀಶ್ ನಾರಂಪಾಡಿ, ಯುವ ಪತ್ರಕರ್ತ ರತನ್ ಕುಮಾರ್ ಹೊಸಂಗಡಿ, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಹಿರಿಯ ಸಲಹೆಗಾರರು ರಾಧಾಕೃಷ್ಣ ಮಾನ್ಯ, ಸಂಸ್ಥಾಪಕ ಅಧ್ಯಕ್ಷರಾದ ಮನೋಜ್ ಕುಲಾಲ್ ಕೊಡಕ್ಕಲ್, ಸಂಸ್ಥಾಪಕ ಉಪಾಧ್ಯಕ್ಷರಾದ ವಂಶಿ ಪಂಡಿತ್ ಮಂಗಳೂರು, ಸಂಸ್ಥಾಪಕ ಪ್ರಧಾನ ಕಾರ್ಯದರ್ಶಿ, ಟೀಮ್ ಮಂಜುಶ್ರೀ ಕುಡ್ಲ ತಂಡದ ಗೌರವಾಧ್ಯಕ್ಷರಾದ ಪುಷ್ಪರಾಜ್ ರಾವ್, ಅಧ್ಯಕ್ಷರಾದ ಚಂದ್ರೇಶ್ ಮಾನ್ಯ, ಉಪಾಧ್ಯಕ್ಷರಾದ ರಮೇಶ್ ಕುಲಾಲ್ ನಾರಾಯಣ ಮಂಗಲ, ಪ್ರಚಾರ ಸಮಿತಿ ಅಧ್ಯಕ್ಷರು ರಜನೀಶ್ ಅಶ್ವ, ಸದಸ್ಯರಾದ ಸಚಿನ್ ಬಜಿರೆ (ವೇಣೂರು), ಮಂಜುನಾಥ ಏಳ್ಕಾನ, ಬಿಜೆಪಿ ಕಾರ್ಯಕರ್ತರಾದ ಗಿರೀಶ್ ಮಾನ್ಯ, ಮಧುಚಂದ್ರ ಮಾನ್ಯ, ವಿವೇಕ್ ಮಾನ್ಯ, ಪ್ರಶಾಂತ್ ಮಾನ್ಯ, ತಿರುಮಲೇಶ್ವರ ಪುದುಕೋಳಿ ಅಲ್ಲದೇ ಪತ್ರಕರ್ತರು, ಟೀಮ್ ಮಂಜುಶ್ರೀ ತುಳುನಾಡ್ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಮುಂತಾದವರು ಉಪಸ್ಥಿತರಿರದ್ದರು.


 

ಕಾರ್ಯಕ್ರಮಕ್ಕೆ ಧರ್ಮಪಾಲ ಶೆಟ್ಟಿ ಮಂಗಳೂರು, ಸಂಸ್ಥೆಯ ಮಹಾ ಪೋಷಕರುಗಳಾದ ಕಿಶೋರ್ ಡಿ ಶೆಟ್ಟಿ, ರಾಘವೇಂದ್ರ ರಾವ್ ಶರವು, ಚಂದ್ರಶೇಖರ್(ಪೋಲಿಸ್ ಅಧಿಕಾರಿಗಳು), ವಿಕ್ರಮ್ ಪೂಜಾರಿ, ನವೀನ್ ಶೆಟ್ಟಿ ಅಳಕೆ, ದೀಪಕ್ ರಾವ್ ಸಂಪೂರ್ಣ ಸಹಕಾರವನ್ನು ನೀಡಿದರು.

Comments