ದೈಹಿಕ ಮಾನಸಿಕ ಆರೋಗ್ಯಕ್ಕೆ ಯೋಗ ದಿವ್ಯೌಷಧ: ಶಾಂತಾ.

 ಮಾನಸಿಕ ಆರೋಗ್ಯಕ್ಕೆ  ಯೋಗ ದಿವ್ಯೌಷಧಿ. ಶಾಂತಾ 
ಮನಸಿನ ಏಕಾಗ್ರತೆಯನ್ನು ಹೆಚ್ಚಿಸುವ ಯೋಗ ಶಾರೀರಿಕ ದೃಢತೆ ಹಾಗೂ ಮನಃಶ್ಶಾಂತಿಯನ್ನು ನೀಡುತ್ತದೆ   ಎಂದು ಬದಿಯಡ್ಕ ಗ್ರಾಮಪಂಚಾಯತು ಅಧ್ಯಕ್ಷೆ ಶಾಂತಾ ಹೇಳಿದರು    ಅವರು ನೀರ್ಚಾಲು ಪ್ರದೇಶದ ವಿಜಯಶ್ರೀ ಕಟ್ಟಡದಲ್ಲಿ ನೂತನವಾಗಿ ಆರಂಭವಾದ ಯೋಗ ತರಗತಿಯನ್ನು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡುತ್ತಿದ್ದರು.  ಯೋಗ ಪ್ರಸ್ತುತ ಜೀವನ ರೀತಿಗೆ ಅತೀ ಅಗತ್ಯ ಎಂದರು. 
ಮಲ್ಲಡ್ಕ ವಾರ್ಡು ಸದಸ್ಯೆ ಸ್ವಪ್ನ.ಕೆ.ಪಿ ಅಧ್ಯಕ್ಷತೆ ವಹಿಸಿ ಮಾತನಾಡಿ ಆಧುನಿಕ ಆಹಾರ ಕ್ರಮ ಮತ್ತು ಆರೋಗ್ಯ ಸುಧಾರಣೆಗೆ ಯೋಗದ ಅಗತ್ಯ ಮತ್ತು ಮಹತ್ವದ ಬಗ್ಗೆ ಮಾಹಿತಿ ನೀಡಿದರು. 
ಕಾಸರಗೋಡು ಬ್ಲೋಕ್ ಪಂಚಾಯತ್ ಪೆರಡಾಲ ವಿಭಾಗದ ಸದಸ್ಯೆ ಅಶ್ವಿನಿ.ಕೆ.ಯಂ ವಿಶೇಷ ಅತಿಥಿಯಾಗಿ ಭಾಗವಹಿಸಿದರು. 
ಮಾಜಿ  ಪಂಚಾಯತ್ ಸದಸ್ಯ ಶ್ಯಾಮ್ ಪ್ರಸಾದ್ ಮಾನ್ಯ, ಎಸ್.ಬಿ.ಐ ಬ್ಯಾಂಕ್ ಮೆನೇಜರ್ ಸುಬ್ರಾಯ ನಾಯಕ್, ವಿಶ್ವನಾಥ.ಬಿ.ಎಸ್. ಲೀಲಾ ಟೀಚರ್ ಶುಭಾಶಂಸನೆಗೈದರು. 
ಗೋಪಾಲಕೃಷ್ಣ ಪಟ್ಡಾಜೆ ಸ್ವಾಗತಿಸಿ ಬಿಂದ್ಯಾ ಕಾರ್ತಿಕ್ ಧನ್ಯವಾದ ಸಮರ್ಪಿಸಿದರು.

Comments