ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿಎಡನೀರುಮಠದ ನೂತನ ಯತಿಗಳಪದಗ್ರಹಣ ಸಚ್ಚಿದಾನಂದ ಭಾರತಿ, ಎಂದು ಭಕ್ತವೃಂದಕ್ಕೆ ಪರಿಚಯವಾಗಲಿರುವ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ : ಕುಮಾರ ಸುಬ್ರಹ್ಮಣ್ಯ ಮುಳಿಯಾಲ



ಶ್ರೀ ಶಂಕರಾಚಾರ್ಯವರ್ಯೋ ಬ್ರಹ್ಮಾಂಡ ಪ್ರಧಾಯಕಃ I
ಅಜ್ಞಾನ ತಿಮಿರಾಂಧಸ್ಯ ಸುಜ್ಞಾನಂಬುಧಿ ಚಂದ್ರಮಾ II
ಶ್ರೀ_ಶ್ರೀ_ಶ್ರೀ_ಸಚ್ಚಿದಾನಂದ_ಭಾರತಿಎಡನೀರುಮಠದ_ನೂತನ_ಯತಿಗಳಪದಗ್ರಹಣ 
ಸಚ್ಚಿದಾನಂದ ಭಾರತಿ, ಎಂದು ಭಕ್ತವೃಂದಕ್ಕೆ ಪರಿಚಯವಾಗಲಿರುವ ಜಯರಾಮ ಮಂಜತ್ತಾಯರು ತೋಟಕಾಚಾರ್ಯ ಪರಂಪರೆಯ ಎಡನೀರು ಮಠದ  ಉತ್ತರಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.
ಜನನ_ಬಾಲ್ಯ_ವಿದ್ಯಾಭ್ಯಾಸ
ಜಯರಾಮ ಮಂಜತ್ತಾಯರು ಶ್ರೀ ಶ್ರೀ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರ ಪೂರ್ವಾಶ್ರಮದ ಸಹೋದರಿ ಶ್ರೀಮತಿ ಸಾವಿತ್ರಿಮತ್ತು ಶ್ರೀನಾರಾಯಣ ಕೆದಿಲಾಯ ದಂಪತಿಗಳಿಗೆ 08-03-1970 ರಲ್ಲಿ ಜನಿಸಿದರು ಬಾಲ್ಯದಲ್ಲೇ ಜಯರಾಮರನ್ನು ಕೇಶವಾನಂದ ಭಾರತೀ ಯವರ ತಾಯಿ 1982 ರಲ್ಲಿ ದತ್ತು ತೆಗೆದುಕೊಂಡು ಮಂಜತ್ತಾಯ ಕುಟುಂಬಕ್ಕೆ ಸೇರ್ಪಡೆಗೊಳಿಸಿದ್ದರು .ತನ್ನಪ್ರಾಥಮಿಕ ಮತ್ತು ಪ್ರೌಢ ವಿಧ್ಯಾಭ್ಯಾಸವನ್ನು ಎಡನೀರಿನ ಮಠದ ಶಾಲೆಯಲ್ಲೇ ನಡೆಸಿದ ಅವರು ಪದವಿಯನ್ನು ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ಪೂರೈಸಿದರು..ಹಾಗೆಯೇ ಋಗ್ವೇದ ಮತ್ತು ಯಜುರ್ವೇದ ಎರಡೂ ಶಾಖೆಗಳ ಪ್ರಾಥಮಿಕ ಶಿಕ್ಷಣವನ್ನೂ ಪೂರೈಸಿದವರಿದ್ದಾರೆ
#ನೂತನ_ಯತಿಗಳ_ಧೀಕ್ಷಾ_ಪೂರ್ವಕಾರ್ಯಕ್ರಮಗಳು 
ಎಡನೀರು ಮಠದ ನೂತನ ಯತಿಗಳ, ಪದಗ್ರಹಣ ಸಮಾರಂಭದ ಪೂರ್ವಭಾವಿಯಾಗಿ .ದಕ್ಷಿಣೋತ್ತರ ಜಿಲ್ಲೆಗಳಲ್ಲಿ ಮತ್ತು ಕೇರಳ ರಾಜ್ಯದ ವಿವಿಧ ಕ್ಷೇತ್ರಗಳನ್ನು (#ಸುಮಾರು150ಕ್ಷೇತ್ರ ) #ಸಂದರ್ಶಿಸಿ ಎಲ್ಲಾ ದೈವ  ದೇವರ ಅನುಗ್ರಹವನ್ನು ಪಡೆದು ,ಸಕಲ ಜನರ ಪ್ರೀತಿ ಪೀಠದ ಮೇಲಿನ ಶ್ರದ್ಧೆ ಮತ್ತು  ವಿಶ್ವಾಸಗಳನ್ನು ಅಂಗೀಕರಿಸಿ ,ದ್ವೈತಾದ್ವೈತ, ವಿಶಿಷ್ಟಾದ್ವೈತ ಪರಂಪರೆಯ ಪೀಠಾಧಿಪತಿಗಳ ಆಶೀರ್ವಾದವನ್ನು ಪಡೆದು   ಅಕ್ಟೊಬರ್ 19  ರಿಂದಲೇ ಎಡನೀರು ಮಠದಲ್ಲಿ ನುರಿತ ವೈದಿಕ ವಿದ್ವಾ0ಸರಿಂದ ಋಗ್ವೆದ , ವಾಲ್ಮೀಕಿ ರಾಮಾಯಣ ಪಾರಾಯಣ , ಋಗ್ವೆದ ಪವಮಾನ ಹೋಮ,ಸನ್ಯಾಸ ಕರ್ಮಾಧಿಕಾರ ಕಾರ್ಯಕ್ರಮ ಪ್ರಾರ0ಭವಾಗಿ , 20  ರಂದು ದೇವ, ಋತು, ದಿವ್ಯ, ಮನುಷ್ಯ ,ಶ್ರಾದ್ಧಾದಿಗಳು ,ಮುಂದುವರಿದು,22  ರಂದು ಭೂತ,ಪಿತೃ,ಮಾತೃ,ಆತ್ಮಶ್ರಾದ್ಧಾದಿಗಳನ್ನು ಪೂರೈಸಿದರು ಮತ್ತು ಋಗ್ವೆದ ಪಾರಾಯಣ ದೊಂದಿಗೆ ಕಾರ್ಯಕ್ರಮ ಪೂರ್ಣಗೊಂಡವು. 23  ರಂದು ರಾಮಾಯಣ  ಪಾರಾಯಣ, ಗುರುವಂದನೆ, ದೇವತಾರ್ಚನೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.24  ರಂದು ರಾಮಾಯಣ ಪಾರಾಯಣ ಮತ್ತು ಕ್ರಷ್ಣ ಯಜುರ್ವೇದ ಪಾರಾಯಣವನ್ನು ಭಕ್ತಿ ಶ್ರದ್ಧೆಯಿಂದ ನಡೆಸಿ ಕಂಚಿಗೆ ಪ್ರಯಾಣ ಬೆಳೆಸಲಾಯಿತು  .  
 #ನೂತನ_ಯತಿಗಳು
 25 ರಂದು ಕಂಚಿ ಕಾಮಕೋಟಿ ಮಠದಲ್ಲಿ, ಕಾಮಕೋಟಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ ಮತ್ತು ನಿರ್ದೇಶನದಂತೆ  ಅನುಜ್ಞಾ ಕಲಶ,ಪುಣ್ಯವಾಚನಮ್ ವಷಣಂ ಸಂಕಲ್ಪ ಮತ್ತು ಸಾಮವೇದ ಪಾರಾಯಣ ಕಾರ್ಯಕ್ರಮಗಳೊಂದಿಗೆ ,ಸಾಯಂಕಾಲ ಅಗ್ನಿ ಪ್ರತಿಷ್ಠೆ ಮಾಡಿ ಪೂರ್ಣಾಹುತಿ ಯೊಂದಿಗೆ ಜಾಗರಣೆ ಯಲ್ಲಿರಲಾಯಿತು . 
ಪ್ರಣವೋಪದೇಶ .
 26  ರಂದು ಕಂಚಿ ಕಾಮಕೋಟಿ ಮಠದಲ್ಲಿ, ಕಾಮಕೋಟಿ ಪೀಠದ ಪೀಠಾಧ್ಯಕ್ಷರಾದ ಶ್ರೀ ಶ್ರೀ ಶ್ರೀ  ಶಂಕರ ವಿಜಯೇಂದ್ರ ಸರಸ್ವತಿ ಮಹಾಸ್ವಾಮಿಗಳ ಉಪಸ್ಥಿತಿ ಮತ್ತು ನಿರ್ದೇಶನದಂತೆ ವಿರಜಾ ಹೋಮ, ಪ್ರಾಥರನುಷ್ಠಾನ ಗಳು ನೆರವೇರಿಸಿ , ಜಯರಾಮ ಮಂಜತ್ತಾಯರು  "ಸನಾತನ ಧರ್ಮದ ಉನ್ನತಿಗಾಗಿ ತಮ್ಮ ಸನ್ಯಾಸ ಧರ್ಮದ ಪರಿಪಾಲನೆಯ ಕೈಂಕರ್ಯಕ್ಕೆ ಬಂಧು ಬಾಂಧವರಿಂದ ಅಡೆತಡೆಯಾಗಬಾರದು ' ಎಂದು ವಿನಂತಿಸಿದರು. ಜನಿವಾರ, ಉಡುದಾರ, ತಲೆ ಕೂದಲು ಹಾಗೂ ವಸ್ತ್ರಗಳನ್ನು ತ್ಯಜಿಸಿದರು. ಬಳಿಕ, '#ಕಂಚಿ_ಕಾಮಕೋಟಿ_ಪೀಠದ_ಶಂಕರಾಚಾರ್ಯ_ಶ್ರೀ_ಶ್ರೀ_ಶ್ರೀ_ಶಂಕರ_ವಿಜಯೇಂದ್ರ_ಸರಸ್ವತಿ  ಮಹಾಸ್ವಾಮಿಗಳು  ಕಾಷಾಯ ವಸ್ತ್ರ, ದಂಡ ಕಮಂಡಲಗಳನ್ನು #ಜಯರಾಮ_ಮಂಜತ್ತಾಯರಿಗೆ ನೀಡುವ  ಮೂಲಕ #ಸನ್ಯಾಸ_ದೀಕ್ಷೆ_ದಯಪಾಲಿಸಿದರು.
ನಂತರ,ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ  ಮಹಾಸ್ವಾಮಿಗಳು   '#ಪ್ರಣವೋಪದೇಶ', '#ಮಹಾವಾಕೋಪದೇಶ' ಅನುಗ್ರಹಿಸಿದರು. " #ಅಯನಾತ್ಮ_ಬ್ರಹ್ಮಾಸಿ'ಎಂಬ ಪೀಠದ ಆಧ್ಯಾತ್ಮಿಕ ವಾಕ್ಯವನ್ನು ಉಪದೇಶಿಸಿದರು ಬ್ರಹ್ಮಕ್ಯರಾದ ಶ್ರೀ ಶ್ರೀ ಶ್ರೀ  ಈಶ್ವರಾನಂದ ಭಾರತಿ ಯವರಿಂದ ಸನ್ಯಾಸತ್ವವನ್ನು ಪಡೆದು. ಅವರು ನೀಡಿದ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿರ್ವಹಿಸಿದ. ,ಬ್ರಹ್ಮಕ್ಯರಾದ ಶ್ರೀ ಶ್ರೀಶ್ರೀ ಕೇಶವಾನಂದಭಾರತಿ ಮಹಾಸ್ವಾಮಿಗಳ  ಗುರುತರ ಜವಾಬ್ದಾರಿಯನ್ನು ನೆಚ್ಚಿನ ಶಿಷ್ಯ ಜಯರಾಮ ಮಂಜತ್ತಾಯರಿಗೆ ನೀಡುತ್ತಿದ್ದೇನೆ.ತಮ್ಮ ಗುರುಗಳಾದ ಶ್ರೀ ಶ್ರೀ ಶ್ರೀ ಜಯೇಂದ್ರ ಸರಸ್ವತಿ ಮತ್ತು ಎಲ್ಲಾ ಪೂರ್ವ ಪರಂಪರೆಯ ಗುರುಗಳ ಅನುಜ್ಞೆಯೊಂದಿಗೆ ಆಶೀರ್ವಾದವನ್ನು ಬೇಡುತ್ತಿದ್ದೇನೆ ಎಂದು ಪ್ರಾರ್ಥಿಸಿಕೊಂಡರು.  
#ಶಿಷ್ಯ_ಸ್ವೀಕಾರ_ಮಹೋತ್ಸವದ_ವಿಧಿ_ವಿಧಾನಗಳು
ಎಡನೀರು ಮಠದ ನೂತನ  ಯತಿಗಳು ಪುಷ್ಪ, ಗಂಧ, ಅಕ್ಷತೆ ಹಾಗೂ ನಾಣ್ಯಗಳ ಮೂಲಕ ಕಂಚಿ ಕಾಮಕೋಟಿ ಪೀಠದ  ಯತಿಗಳಾದ ಶ್ರೀ ಶ್ರೀ ಶ್ರೀ ಶಂಕರ ವಿಜಯೇಂದ್ರ ಸರಸ್ವತಿ  ಮಹಾಸ್ವಾಮಿಗಳ  ಪಾದಪೂಜೆ ನೆರವೇರಿಸಿ ನಮಸ್ಕರಿಸಿದರು. ಇದಾದ ನಂತರ #ಶ್ರೀ_ಶ್ರೀ_ಶ್ರೀ_ಶಂಕರ_ವಿಜಯೇಂದ್ರಸರಸ್ವತಿ_ಮಹಾಸ್ವಾಮಿಗಳು_ಎಡನೀರು_ಕಿರಿಯ_ಶ್ರೀಗಳಿಗೆ ಯೋಗಪಟ್ಟ ಪ್ರದಾನಿಸಿ #ಸಚ್ಚಿದಾನಂದ_ಭಾರತಿ  ಎಂದು #ನಾಮಕರಣ ಮಾಡಿದರು.ನಂತರ ಕಂಚಿ ಶ್ರೀ ಮಠದ ಅಧಿಷ್ಠಾನ ದರ್ಶನ, ಮತ್ತು ದೇವಿ ಕಾಮಾಕ್ಷಿ ದರ್ಶನ ವನ್ನು ಮಾಡಿ ಅನುಗ್ರಹ  ಪಡೆದರು  . ಹೀಗೆ #ಸ್ವಸ್ತಿಶ್ರೀ_ಗತಶಾಲಿವಾಹನ_ಶಕವರ್ಷ 1942 ಕೊಲಂಬವರ್ಷ 1196 #ಶಾರ್ವರಿನಾಮ_ಸಂವತ್ಸರದ_ದಕ್ಷಿಣಾಯನ_ಶರತ್_ಋತು ನಿಜ ಆಶ್ವಯುಜಯುಕ್ತ  #ತುಲಾಮಾಸ_9ನೇ_ದಿನ_ಶುಕ್ಲಪಕ್ಷ_ದಶಮಿ_10_30_ರ_ಧನುರ್ಲಗ್ನದಲ್ಲಿ  ,ತೋಟಕಾಚಾರ್ಯ ಪರಂಪರೆಯ #ಎಡನೀರುಮಠದ_ಉತ್ತರಾಧಿಕಾರಿಯಾಗಿ_ಶ್ರೀ_ಸಚ್ಚಿದಾನಂದ_ಭಾರತಿ ಎಂಬ ಅಭಿನಾಮದೊಂದಿಗೆ #ಪೀಠಾಧಿಕಾರಿಯಾಗಿ_ಪದಗ್ರಹಣಮಾಡಿದ್ದಾರೆ (26-10-2020 )  ಎಂದು ಘೋಷಿಸಿದರು.
#ಎಡನೀರು_ಪುರ_ಪ್ರವೇಶ
27  ರಂದು ರಾಮಾಯಣ ಪಾರಾಯಣ ಮಂಗಳದೊಂದಿಗೆ  ಬಳಿಕ ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ,ತೋಟಕಾಚಾರ್ಯ ಪರಂಪರೆಯ ನೂತನ ಯತಿಗಳಾದ ಎಡನೀರು   ಶ್ರೀ ಶ್ರೀ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮಿಗಳವರು ಎಡನೀರಿನ “ ಪುರಪ್ರವೇಶ” ಮಾಡಲಿದ್ದಾರೆ .
#ಪೀಠಾರೋಹಣ 
#ಅಕ್ಟೊಬರ್28 ರಂದು ಎಡನೀರು  ಮಠದಲ್ಲಿ  ಪಟ್ಟಾಭಿಷೇಕಾ0ಗವಾಗಿ ,ದೇವತಾರ್ಚನೆ, ಅಪ್ರತಿ ರಥ ಶಾಂತಿ ಹೋಮದೊಂದಿಗೆ ಕಲಶೋದ್ವಾಸನ ಮಾಡಿ ಅಷ್ಟೋತ್ತರ ನಾರಿಕೇಳ ಗಣಪತಿ ಹವನ,ನವಚಂಡೀ ಯಾಗ ಸಂಪನ್ನಗೊಳಿಸಿ ಪೀಠಾರೋಹಣ  ಶಾಸ್ತ್ರೋಕ್ತವಾಗಿ ನೆರವೇರಲಿದೆ 
ಎಲ್ಲಾ ಶಾಸ್ತ್ರೋಕ್ತ ವೈದಿಕ ಕಾರ್ಯಕ್ರಮಗಳೊಂದಿಗೆ ,
“ಈ ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||”
‘ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪಿ ಅವುಗಳ ಮೋಹವೂ ಹೋಗುತ್ತದೆ.ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ  ಜ್ಞಾನವು  ಉದಿಸಿ ಜೀವನ್ಮುಕ್ತಿಯೇ ಪ್ರಾಪ್ತವಾಗುತ್ತದೆ ಎಂದು ಭಜಗೋವಿಂದಂ ನ ಮೂಲಕ ತಿಳಿಸಿದ ಅದ್ವೈತ ಸಿದ್ಧಾಂತದ ಪರಮಾಚಾರ್ಯ ಶ್ರೀ ಶ್ರೀ ಶ್ರೀ ಶಂಕರಾಚಾರ್ಯ ಪರಂಪರೆಯ ತೋಟಾಕಾಚಾರ್ಯ ಸಂಸ್ಥಾನ #ಎಡನೀರು_ಮಠದ_ನೂತನ_ಯತಿವರೇಣ್ಯರಾಗಿ_ಶ್ರೀ_ಶ್ರೀ_ಶ್ರೀ_ಸಚ್ಚಿದಾನಂದ_ಭಾರತಿ_ಸ್ವಾಮಿಗಳವರು ಎಡನೀರು ಮಠದಲ್ಲಿ ಸ್ವಸ್ತಿಶ್ರೀ ಗತಶಾಲಿವಾಹನ ಶಕವರ್ಷ 1942  ಕೊಲಂಬವರ್ಷ 1196  #ಶಾರ್ವರಿ_ನಾಮ_ಸಂವತ್ಸರದ ದಕ್ಷಿಣಾಯನ ಶರತ್ ಋತು ನಿಜ ಆಶ್ವಯುಜಯುಕ್ತ #ತುಲಾಮಾಸ11ನೇ_ದಿನ_ಶುಕ್ಲಪಕ್ಷದ್ವಾದಶಿ_10_30_ರ_ಧನುರ್ಲಗ್ನದಲ್ಲಿ(28-10-2020)   ಸಮಸ್ತ ಶಿಷ್ಯ ಕೋಟಿಯ ಕ್ಷೇಮಾಭ್ಯುದಯವನ್ನು ಸಂಪ್ರಾರ್ಥಿಸುತ್ತಾ , #ಅನುಷ್ಠಾನ_ನಿರತರಾಗಿ_ಪೀಠಾಧಿಪತಿಯಾಗಿ_ವಿರಾಜಮಾನರಾಗಲಿದ್ದಾರೆ.
ಓಂ ನಮಃ ಪ್ರಣವಾರ್ಥಾಯ ಶುದ್ಧಙ್ಞಾನೈಕಮೂರ್ತಯೇ |
ನಿರ್ಮಲಾಯ ಪ್ರಶಾಂತಾಯ ದಕ್ಷಿಣಾಮೂರ್ತಯೇ ನಮಃII 
ಓ೦ ಸ್ವಸ್ತಿ II
ಕುಮಾರ_ಸುಬ್ರಹ್ಮಣ್ಯ_ಮುಳಿಯಾಲ.

Comments