ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ಎಚ್ಚರಿಕೆ ಅಗತ್ಯ

ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಹೆಚ್ಚಳ: ಎಚ್ಚರಿಕೆ ಅಗತ್ಯ
ಕಾಸರಗೋಡು:ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಹರಡುವಿಕೆ ತೀವ್ರಗೊಳ್ಳುತ್ತಿದೆ. ಕೋವಿಡ್ ಬಾಧಿಸಿ ಸಾವನ್ನಪ್ಪುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.  ಸಂಪರ್ಕ ಮೂಲಕ ಕೋವಿಡ್ ಹರಡುತ್ತಿರುವುದು ಕೋವಿಡ್ ರೋಗಿಗಳ ಸಂಖ್ಯೆಯಲ್ಲಿನ  ಗಣನೀಯ ಹೆಚ್ಚಳಕ್ಕೆ ಮುಖ್ಯ ಕಾರಣವಾಗಿದೆ.ಕೋವಿಡ್ ಹರಡುವಿಕೆ ತಡೆಗಟ್ಟಲು ಸಾರ್ವಜನಿಕರು ಸರಕಾರ ನಿರ್ದೇಶಿಸಿದ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕಾಗಿದೆ.

ಜಾಗೃತೆ ಅತ್ಯಗತ್ಯ 

ಸುಮಾರು ಎರಡು ಮೀಟರ್ ಗೂ ಹೆಚ್ಚು ಭೌತಿಕ ಅಂತರ ಕಾಪಾಡುವುದು, ಮೂಗು ಮತ್ತು ಬಾಯಿಯನ್ನು ಸರಿಯಾಗಿ ಮುಚ್ಚುವ ರೀತಿಯಲ್ಲಿ ಮಾಸ್ಕ್ ಧರಿಸುವುದು, ಸೋಪ್ ಮತ್ತು ನೀರಿನಿಂದ 20 ಸೆಕೆಂಡುಗಳ ಕಾಲ ಕೈಗಳನ್ನು ಆಗಾಗ ತೊಳೆಯುವುದು, ಸ್ಯಾನಿಟೈಸರ್ ಮೂಲಕ ಕೈಗಳನ್ನು ಸೋಂಕು ಮುಕ್ತಗೊಳಿಸುವುದು, ಅಂಗಡಿಗಳು ಮತ್ತು ವ್ಯಾಪಾರ ಸಂಸ್ಥೆಗಳಲ್ಲಿ ಮಾಸ್ಕ್ ಮತ್ತು ಗ್ಲೌಸ್ ಗಳನ್ನು ಧರಿಸುವುದು ಕಡ್ಡಾಯವಾಗಿದೆ.

ಸೂಚನೆಗಳನ ಉಲ್ಲಂಘನೆ ಕಂಡುಬಂದಲ್ಲಿ ಮಾಹಿತಿ ನೀಡಬಹುದು

ಕಾಸರಗೋಡು ಜಿಲ್ಲೆಯ ಎಲ್ಲಿಯಾದರೂ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ವ್ಯಾಪಾರ ಸಂಸ್ಥೆಗಳಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆ ಕಂಡು ಬಂದಲ್ಲಿ  8590684023 ವಾಟ್ಸಾಪ್ ಗೆ ಚಿತ್ರ, ವಿಡಿಯೋ ಮಾಹಿತಿಯನ್ನು ಕಳುಹಿಸಬಹುದು.

Comments