- Get link
- X
- Other Apps
ಟಾಟಾ ಕೋವಿಡ್ ಆಸ್ಪತ್ರೆ ಉದ್ಘಾಟನೆ: ಖಾಸಗಿ ಸಹಭಾಗಿತ್ವ ಫಲದಾಯಕವಾಗಿರುವುದಕ್ಕೆ ಮಾದರಿ : ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನಾಡಿನ ಅಗತ್ಯ ಅರಿತು ಚಿಕಿತ್ಸಾ ಸೌಲಭ್ಯ: ಮುಖ್ಯಮಂತ್ರಿ ಪಿಣರಾಯಿ ವಿಜಯನ್

ಕಾಸರಗೋಡು. ಸೆ.9: ಟಾಟಾ ಕೊರೋನಾ ಆಸ್ಪತ್ರೆ ಖಾಸಗಿ ಸಹಭಾಗಿತ್ವ ಫಲದಾಯಕವಾಗಿರುವುದಕ್ಕೆ ಮಾದರಿಯಾಗಿದೆ. ಇಲ್ಲಿ ಕೋವಿಡ್ ಮಹಾಮಾರಿಯ ಅವಧಿಯಲ್ಲಿ ನಾಡಿನ ಅಗತ್ಯ ಅರಿತು ಚಿಕಿತ್ಸಾ ಸೌಲಭ್ಯ ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ತಿಳಿಸಿದರು.
ಚೆಮ್ನಾಡ್ ಗ್ರಾಮ ಪಂಚಾಯತ್ ನ ಚಟ್ಟಂಚಾಲ್ ನಲ್ಲಿ ಟಾಟಾ ಸಮೂಹ ಸಂಸ್ಥೆ ನಿರ್ಮಿಸಿರುವ ಕೊರೋನಾ ಆಸ್ಪತ್ರೆಯ ಹಸ್ತಾಂತರ ಪ್ರಕ್ರಿಯೆಯನ್ನು ವೀಡಿಯೋ ಕಾನ್ ಫೆರೆನ್ಸ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಆರಂಭದ ಹಂತದಲ್ಲೇ ಅತ್ಯಧಿಕ ಕೋವಿಡ್ ರೋಗಿಗಳು ವರದಿಯಾದ ಜಿಲ್ಲೆ ಕಾಸರಗೋಡು ಆಗಿದೆ. ಕೋವಿಡ್ ಮಹಾಮಾರಿಯ ಪ್ರತಿ ಅವಧಿಯಲ್ಲೂ ಜಿಲ್ಲೆ ಅತೀವ ಜಾಗರೂಕತೆಯೊಂದಿಗೆ ಒಂದೊಂದು ಪ್ರತಿರೋಧ ಹೆಜ್ಜೆಗಳನ್ನು ಇರಿಸುತ್ತಲೇ ಬಂದಿದೆ. ಆರಂಭದ ಅವಧಿಯಲ್ಲಿ ಕಾಸರಗೋಡು ಜನರಲ್ ಆಸ್ಪತ್ರೆ ಫಲದಾಯ ಚಿಕಿತ್ಸೆ ಒದಗಿಸುವ ಮೂಲಕ ಮಾದರಿಯಾಗಿದೆ. ಜೊತೆಗೆ 4 ದಿನಗಳಲ್ಲಿ ಯುದ್ಧಕಾಲದ ಹಿನ್ನೆಲೆಯಲ್ಲಿ ಉಕ್ಕಿನಡ್ಕ ಕಾಸರಗೋಡು ಮೆಡಿಕಲ್ ಕಾಲೇಜು ಆಡಳಿತೆ ಬ್ಲೋಕ್ ಅತ್ಯಾಧುನಿಕ ಸೌಲಭ್ಯಗಳೊಂದಿಗೆ 200 ಮಂದಿಗೆ ದಾಖಲಾತಿ ಸೌಲಭ್ಯಗಳಿರುವ ಕೋವಿಡ್ ಆಸ್ಪತ್ರೆಯಾಗಿ ಸಿದ್ಧಗೊಂಡಿತ್ತು. ಈ ಆಸ್ಪತ್ರೆಗಾಗಿ 273 ಹುದ್ದೆಗಳಿಗೆ ನೇಮಕಾತಿ ಕ್ರಮ ಆರಂಭಗೊಂಡಿದೆ. ಸೋಂಕಿನ ಉಲ್ಬಣಾವಸ್ಥೆಯಲ್ಲಿ ಟಾಟಾ ಸಮೂಹ ಸಂಸ್ಥೆ , ಟಾಟಾ ಟ್ರಸ್ಟ್ ಜೊತೆಗೆ ಕೈಹೋಡಿಸಿ ಆಸ್ಪತ್ರೆ ನಿರ್ಮಿಸಿ ಒದಗಿಸಿದೆ. ಕಾಸರಗೋಡಿನ ವಿಶೇಷ ಪರಿಸ್ಥಿತಿಯನ್ನು ಗಮನಿಸಿ ಇಲ್ಲೇ ಆಸ್ಪತ್ರೆ ನಿರ್ಮಾಣಕ್ಕೆ ಸರಕಾರ ಅನುಮತಿ ನೀಡಿದೆ. ವಾರಗಳ ಅವಧಿಯಲ್ಲೇ 5 ಎಕ್ರೆ ಜಾಗವನ್ನು ಆಸ್ಪತ್ರೆ ನಿರ್ಮಾಣಕ್ಕೆ ಒದಗಿಸಿದೆ. ಸೂಖ್ತ ಅವಧಿಯಲ್ಲೇ ಆಸ್ಪತ್ರೆಯೂ ಸುಸಜ್ಜಿತವಾಗಿ ನಿರ್ಮಾಣಗೊಂಡಿದೆ ಎಂದರು.
ಟಾಟಾಗೆ ಕೇರಳದ ಕೃತಜ್ಞತೆ
ಕೇರಳೀಯ ಜನತೆಯ ಬಗ್ಗೆ ಸಹಾಯ ಒದಗಿಸಲು ಗಮನನೀಡಿರುವ ಟಾಟಾ ಸಮೂಹ ಸಂಸ್ತೆಗೆ ರಾಜ್ಯ ಸರಕಾರ ಕೃತಜ್ಞವಾಗಿದೆ ಎಂದು ಮುಖ್ಯಮಂತ್ರಿ ತಿಳಿಸಿದರು. ವ್ಯಾಪಾರ ಎಥಿಕ್ಸ್ನೊಂದಿಗೆ ವ್ಯವಹರಿಸುವ ಟಾಟಾ ಸಮೂಹ ಸಂಸ್ಥೆ ಜಗತ್ತಿನಲ್ಲಿ ಪ್ರಥಮ ಬಾರಿಗೆ ಕಾರ್ಪರೇಟ್ ಸೋಷ್ಯಲ್ ರೆಸ್ಪಾಸಿಬಿಲಿಟಿ (ಸಿ.ಎಸ್.ಆರ್.) ಚಟುವಟಿಕೆಗಳನ್ನು ಆರಂಭಿಸಿ ಮಾದರಿಯಾಗಿದೆ. ಜಗತ್ತು ತದನಂತರ ಈ ಸಂಸ್ಥೆಯನ್ನು ಅನುಸರಿಸುವುದಕ್ಕೆ ತೊಡಗಿತ್ತು. 60 ಕೋಟಿ ರೂ. ವೆಚ್ಚದಲ್ಲಿ ಟಾಟಾ ಆಸ್ಪತ್ರೆ ಇಲ್ಲಿ ನಿರ್ಮಿಸಲಾಗಿದೆ. ಅತ್ಯುತ್ತಮ ಚಿಕಿತ್ಸೆ ದೊರೆಯದೇ ಇದ್ದ ಕಾಸರಗೋಡು ಜಿಲ್ಲೆಗೆ ಮತ್ತು ಕೇರಳದ ಆರೋಗ್ಯ ವಲಯಕ್ಕೆ ಇದೊಂದು ಮಹತ್ವದ ಕೊಡುಗೆಯಾಗಿದೆ ಎಂದು ನುಡಿದರು.
ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿದ್ದರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಮುಖ್ಯ ಅತಿಥಿಯಾಗಿದ್ದರು.
ಟಾಟಾ ಯೋಜನೆ ನಿಗಮದ ಡಿ.ಜಿ.ಎಂ.ಗೋಪಿನಾಥ್ ರೆಡ್ಡಿ ಅವರು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರಿಗೆ ಆಸ್ಪತ್ರೆಯ ಕೀಲಿಕೈ ಹಸ್ತಾಂತರಿಸಿದರು.
ಸಂಸದ ರಾಜ್ ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ.ನೆಲ್ಲಿಕುನ್ನು,. ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಮುಖ್ಯ ಅತಿಥಿಯಾಗಿದ್ದರು. ಕಾಸರಗೋಡು ಬ್ಲೋಖ್ ಪಂಚಾಯತ್ ಅಧ್ಯಕ್ಷ ಸಿ.ಎಚ್.ಮಹಮ್ಮದ್ ಕುಂಞಿ ಚಾಯಿಂಡಡಿ, ಚೆಮ್ನಾಡ್ ಗ್ರಾಮ ಪಂಚಾಯತ್ ಕಲ್ಲಟ್ರ ಅಬ್ದುಲ್ ಖಾದರ್, ನಗರಸಭೆ ಅಧ್ಯಕ್ಷರ ಛೇಂಬರ್ ಛೇರ್ ಮೇನ್ ಆಗಿರುವ ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್, ಗ್ರಾಮ ಪಂಚಾಯತ್ ಅಧ್ಯಕ್ಷರ ಅಸೋಸಿಯೇಶನ್ ಜಿಲ್ಲಾ ಸಮಿತಿ ಅಧ್ಯಕ್ಷ ಎ.ಎ.ಜಲೀಲ್, ಜಿಲ್ಲಾ ಪಂಚಾಯತ್ ಸದಸಗಯೆ ಸುಫೈಜಾ ಅಬೂಬಕ್ಕರ್ ಮೊದಲಾದವರು ಉಪಸ್ಥಿತರಿದ್ದರು. ಆಸ್ಪತ್ರೆ ನಿರ್ಮಾಣಕ್ಕೆ ಸಹಕರಿಸಿದ ಸಂಘನಾ ಪ್ರತಿನಿಧಿಗಳಿಗೆ ಅಭಿನಂದನೆ ನಡೆಯಿತು.
ರಾಜ್ಯದ ಪ್ರಥಮ ಟಾಟಾ ಕೋವಿಡ್ ಆಸ್ಪತ್ರೆ ಲೋಕಾರ್ಪಣೆ
ಕೋವಿಡ್ ತಲೆದೋರಿದ್ದ ಆರಂಬದ ದಿನಗಳಲ್ಲಿ ಇಡೀ ರಾಜ್ಯದಲ್ಲಿ ಅತ್ಯಧಿಕಪ್ರಮಾಣದ ರೋಗಿಗಳು ಪತ್ತೆಯಾಗಿದ್ದ ಜಿಲ್ಲೆ ಕಾಸರಗೋಡು ಆಗಿತ್ತು. ಈ ಕಾರಣದಿಂದಲೇ ಇಲ್ಲಿ ಆಸ್ಪತ್ರೆ ನಿರ್ಮಿಸಲು ಟಾಟಾ ಸಂಸ್ಥೆ ಮುಂದೆ ಬಂದಿತ್ತು.
ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ರಾಜ್ಯಸರಕಾರದ ಸಹಾಯದೊಂದಿಗೆ ಟಾಟಾ ಸಮೂಹ ಸಂಸ್ಥೆ ಈ ಆಸ್ಪತ್ರೆ ನಿರ್ಮಿಸಿದೆ. ಪ್ರತಿ ದುರ್ಭರ ಸಂದರ್ಭಗಳಲ್ಲೂ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಅಚಲವಾಗಿ ಬೆಂಬಲಿಸಿದ, ಜಿಲ್ಲಾಡಳಿತೆ ಮತ್ತು ಕಂದಾಯ ಇಲಾಖೆ ಸಿಬ್ಬಂದಿ ನೀಡಿರುವ ಸತತ ಸಹಾಯಗಳ ಫಲವಾಗಿ ನಿರ್ಮಾಣ ಚಟವಟಿಕೆಗಳು ತ್ವರಿತಗೊಂಡಿದ್ದುವು ಎಂದು ಟಾಟಾ ಸಮೂಹ ಸಂಸ್ಥೆಯ ಯೋಜನೆ ಆಡಳಿತಾಧಿಕಾರಿ ಆಂಟನಿ ಪಿ.ಎಲ್. ತಿಳಿಸಿದರು.
ಟಾಟಾ ಕೋವಿಡ್ ಆಸ್ಪತ್ರೆ: 3 ಝೋನ್ ಗಳು: 551 ಹಾಸುಗೆಗಳು
ಕೋವಿಡ್ ಪ್ರತಿರೋಧ ಅಂಗವಾಗಿ ಕಾಸರಗೋಡು ಜಿಲ್ಲೆಯ ತೆಕ್ಕಿಲ್ ಗ್ರಾಮದಲ್ಲಿ ಆರಂಭಗೊಳ್ಳುತ್ತಿರುವ ಟಾಟಾ ಕೋವಿಡ್ ಆಸ್ಪತ್ರೆ ಉಳಿದ ಚಿಕಿತ್ಸಾಲಯಗಳಿಗಿಂತ ಭೌತಿಕವಾಗಿ ಭಿನ್ನವಾಗಿದೆ.
3 ಝೋನ್ ಗಳಾಗಿ ವಿಂಗಡಣೆ ಹೊಂದಿದೆ. ಮೊದಲನೇ ಝೋನ್ ನಲ್ಲಿ ಕ್ವಾರೆಂಟೈನ್ ಸೌಲಭ್ಯಗಳು, ದ್ವಿತೀಯ ಝೋನ್ ನಲ್ಲಿ ಕೋವಿಡ್ ಪಾಸಿಟಿವ್ ರೋಗಿಗಳ ದಾಖಲಾತಿ, ತೃತೀಯ ಝೋನ್ ನಲ್ಲಿ ಪ್ರತ್ಯೇಕ ಐಸೋಲೇಷನ್ ಸಹಿತ ಸೌಲಭ್ಯಗಳು ಇರುವುವು. ಝೋನ್ ಒಂದು ಮತ್ತು ಮೂರರ ಒಂದೊಂದು ಕಂಟೈನರ್ ಗಳಲ್ಲಿ ತಲಾ 5 ಹಾಸುಗೆಗಗಳು, ಒಂದು ಶೌಚಾಲಯ, ಝೋನ್ ಎರಡರಲ್ಲಿ ಶೌಚಾಲಯ ಸಹಿತ ಒಂದು ಹಾಸುಗೆ ಇರುವುದು. 126 ಯೂನಿಟ್ ಗಳಲ್ಲಿ (ಕಂಟೈ ನರ್ ಗಳು) ಒಟ್ಟು 551 ಹಾಸುಗೆಗಳು ಆಸ್ಪತ್ರೆಯಲ್ಲಿವೆ. ಪ್ರತಿ ಕಂಟೈನರ್ 40 ಅಡಿ ಉದ್ದ, 10 ಅಡಿ ಅಗಲ ಇರುವುದು. 81 ಸಾವಿರ ಚದರ ಅಡಿ ವಿಸೀರ್ಣವನ್ನು ಆಸ್ಪತ್ರೆ ಹೊಂದಿದೆ.
ತೆಕ್ಕಿಲ್ ಗ್ರಾಮದ 5 ಎಕ್ರೆ ಜಾಗದಲ್ಲಿ ರಸ್ತೆ, ಸ್ವಾಗತ ಸೌಲಭ್ಯ,ಕ್ಯಾಂಟೀನ್, ವೈದ್ಯರಿಗೆ, ದಾದಿಯರಿಗೆ ಪ್ರತ್ಯೇಕ ಕೊಠಡಿಗಳು ಸಹಿತ ಎಲ್ಲ ಸೌಲಭ್ಯಗಳೂ ಈ ಆಸ್ಪತ್ರೆಯಲ್ಲಿವೆ. ರಾಷ್ಟ್ರೀಯ ಹೆದ್ದಾರಿ ಬದಿಯ ಜಾಗವನ್ನು ಪತ್ತೆಮಾಡಿ ಒದಗಿಸುವಲ್ಲಿಂದ ತೊಡಗಿ ಎಲ್ಲ ಹಂತಗಳಲ್ಲೂ ಆಸ್ಪತ್ರೆಯ ಪ್ರಗತಿಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಮತ್ತು ಬಳಗದ ಬೆಂಬಲ ನಿರಂತರವಾಗಿತ್ತು.
ಕೋವಿಡ್ ಆಸ್ಪತ್ರೆ : ಟಾಟಾ ಸಂಸ್ಥೆಯಿಂದ ನಾಡಿಗೆ ಕೊಡುಗೆ
ಕೋವಿಡ್ ಆಸ್ಪತ್ರೆ ಯು ಟಾಟಾ ಸಂಸ್ಥೆಯಿಂದ ನಾಡಿಗೆ ಕೊಡುಗೆಯಾಗಿದೆ.
ಆಸ್ಪತ್ರೆಯ ಯೂನಿಟ್ ಗಳಿಂದ ತೊಡಗಿ ಎಲ್ಲ ನಿರ್ಮಾಣಗಳನ್ನೂ ಟಾಟಾ ಸಮೂಹ ಸಂಸ್ಥೆ ಉಚಿತವಾಗಿಯೇ ಡೆಸಿಕೊಟ್ಟಿದೆ. ದೇಶದ ವಿವಿಧೆಡೆ ತುರ್ತು ಪರಿಸ್ಥಿತಿಗಳಲ್ಲಿ ಈ ಸಂಸ್ಥೆ ಯುದ್ಧಕಾಲಹಿನ್ನೆಲೆಯಲ್ಲಿ ಈ ಆಸ್ಪತ್ರೆಗಳನ್ನು ನಿರ್ಮಿಸಿ ಆಯಾ ಸರಕಾರಗಳಿಗೆ ಒದಗಿಸಿದೆ.
ತೆಕ್ಕಿಲ್ ಗ್ರಾಮದಲ್ಲಿ 5 ಡಕ್ರೆ ಜಾಗ, ಜಲ, ವಿದ್ಯುತ್ ಸಹಿತ ಆಸ್ಪತ್ರೆ ವ್ಯವಸ್ಥೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನೂ ರಾಜ್ಯ ಸರಕಾರ ಮತ್ತು ಕಾಸರಗೋಡು ಜಿಲ್ಲಾಡಳಿತೆ ಒದಗಿಸಿದೆ. 1.25 ಲಕ್ಷ ಲೀ. ನೀರು ಸಂಗ್ರಹಿಸುವ ಟಾಂಕಿ, ಶೌಚಾಲಯಗಳ ತ್ಯಾಜ್ಯ ಸಂಸ್ಕರಣೆಗೆ 63 ಬಯೋ ಜೈ ಜಸ್ಟರ್ಸ್, 8 ಓವರ್ ಫ್ಲೈ ಟಾಂಕಿಗಳು ಹೀಗೆ ಅನೇಕ ವಿಶೇಷತೆಗಳನ್ನು ಆಸ್ಪತ್ರೆ ಹೊಂದಿದೆ.
ಟಾಟಾ ಕೋವಿಡ್ ಆಸ್ಪತ್ರೆ: 4 ತಿಂಗಳ, 50 ಕಾರ್ಮಿಕರು
ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣ 4 ತಿಂಗಳ ಅವಧಿಯಲ್ಲಿ ನಡೆದಿದೆ. 50 ಕಾರ್ಮಿಕರು ಇದಕ್ಕಾಗಿ ಅಹೋರಾತ್ರಿ ದುಡಿಮೆ ನಡೆಸಿದ್ದಾರೆ.
ಏ.28,29ರಂದು ಆಸ್ಪತ್ರೆಯ ನಿರ್ಮಾಣ ಆರಂಭಗೊಂಡಿತ್ತು. ಆಗಸ್ಟ್ ತಿಂಗಳಕೊನೆಯ ವಾರದಲ್ಲಿ ನಿರ್ಮಾಣ ಪೂರ್ತಿಗೊಂಡಿತ್ತು. ಪ್ರತಿಕೂಲಪರಿಸ್ಥಿತಿಯಲ್ಲಿ, ಕೋವಿಡ್ ಸೋಂಕಿನ ತೀವ್ರತೆಯ ನಡುವೆಯೂ ಕಾಮಗಾರಿ ನಡೆದು ಪೂರ್ತಿಗೊಂಡಿದೆ. ಕಾರ್ಮಿಕರು ಊರಿಗೆ ತೆರಳಿದವರು ಮರಳಿ ಬರದೇ ಮುಗ್ಗಟ್ಟು ತಲೆದೋರಿದ್ದರೂ, ನಿರ್ಮಾಣಕ್ಕೆ ತಡೆಯಾಗಿರಲಿಲ್ಲ ಎಂಬುದು ಗಮನಾರ್ಹ.
ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣ : ನಡೆದು ಬಂದ ದಾರಿ
ಕೇರಳದಲ್ಲೇ ಪ್ರಥಮ ಬಾರಿಗೆ ಸಿದ್ಧವಾಗಿರುವ ಟಾಟಾ ಕೋವಿಡ್ ಆಸ್ಪತ್ರೆಯ ನಿರ್ಮಾಣ ನಡೆದು ಬಂದ ದಾರಿ ಗಮನಾರ್ಹವಾಗಿದೆ.
2020 ಏ.6: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಮತ್ತು ಕಂದಾಯ ಸಚಿವ ಇ.ಚಂದ್ರಶೇಖರನ್ ಕಾಸರಗೋಡು ಜಿಲ್ಲೆಯಲ್ಲಿ ಟಾಟಾ ಕೋವಿಡ್ ಆಸ್ಪತ್ರೆ ನಿರ್ಮಾಣದ ಘೋಷಣೆ ನಡೆಸಿದರು.
2020 ಏ.7: ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರ ನೇತೃತ್ವದಲ್ಲಿ ಆಸ್ಪತ್ರೆಗಾಗಿ ತೆಕ್ಕಿಲ್ ಗ್ರಾಮದಲ್ಲಿ ಜಾಗ ಪತ್ತೆ ಮಾಡಿದ್ದರು.
2020 ಏ.8: ಈ ಜಾಗದಲ್ಲಿ ಆಸ್ಪತ್ರೆ ನಿರ್ಮಾಣಕ್ಕೆ ರಾಜ್ಯ ಸರಕಾರ ಅನುಮತಿ ನೀಡಿತ್ತು.
2020 ಏ.9: ಆಸ್ಪತ್ರೆ ನಿರ್ಮಾಣಕ್ಕೆ ಮೂಲಭೂತ ಸೌಲಭ್ಯ ಒದಗಿಸಿ, ನಿರ್ಮಾಣ ಆರಂಭವಾಗಿತ್ತು.
2020 ಏ.28: ಆಸ್ಪತ್ರೆ ಇರುವ ಜಾಗ ಸಂಬಂಧ ತಲೆದೋರಿದ್ದ ವಿವಾದ ಮುಕ್ತಾಯಗೊಂಡಿದ್ದು, ರಸ್ತೆ ಸಹಿತ ಸೌಲಭ್ಯ ಒದಗಿಸಿ ಜಾಗದ ಹಸ್ತಾಂತರ.
2020 ಮೇ 15: ಟಾಟಾ ಆಸ್ಪತ್ರೆಯ ಮೊದಲ ಫ್ರೀಫಾಬ್ ಸ್ಟ್ರಕ್ಚರ್ ತೆಕ್ಕಿಲ್ ಗ್ರಾಮದಲ್ಲಿ ಘೋಷಣೆಗೊಂಡಿತು.
2020 ಜು.10: ಟಾಟಾ ಆಸ್ಪತ್ರೆಯ ಕೊನೆಯ ಫ್ರೀ ಫಾಬ್ ಸ್ಟ್ರಕ್ಚರ್ ಸ್ಥಾಪನೆ.

Comments
Post a Comment