ಕೇರಳ ರಾಜ್ಯ ಮುಖ್ಯಮಂತ್ರಿ ರಾಜೀನಾಮೆ ಆಗ್ರಹಿಸಿ ಅಡ್ವ. ಕೆ. ಶ್ರೀಕಾಂತ್ ಶುಕ್ರವಾರ ಏಕದಿನ ಉಪವಾಸ

ಕೇರಳ ರಾಜ್ಯ ಮುಖ್ಯಮಂತ್ರಿ  ರಾಜೀನಾಮೆ ಆಗ್ರಹಿಸಿ ಅಡ್ವ. ಕೆ. ಶ್ರೀಕಾಂತ್ ಶುಕ್ರವಾರ ಏಕದಿನ ಉಪವಾಸ
ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಕೇರಳ ರಾಜ್ಯ ಮುಖ್ಯಮಂತ್ರಿ ರಾಜೀನಾಮೆ ಆಗ್ರಹಿಸಿ ಬಿಜೆಪಿ ರಾಜ್ಯದ್ಯಂತ ನಡೆಸುವ ಹೋರಾಟದ ಅಂಗವಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವ. ಕೆ. ಶ್ರೀಕಾಂತ್ ಈ ತಿಂಗಳು 4 ನೇ ತಾರೀಕು ಶುಕ್ರವಾರ ಏಕದಿನ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದಾರೆ  . ಸತ್ಯಾಗ್ರಹ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಹಾಗೂ ರಾಷ್ಟ್ರೀಯ ಸಮಿತಿ ಸದಸ್ಯ ಶ್ರೀ ಸಿ.ಕೆ. ಪದ್ಮನಾಭನ್ ಉದ್ಘಾಟನೆ ಮಾಡಲಿದ್ದಾರೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಹಾಗೂ ಜಿಲ್ಲಾ ಪ್ರಭಾರಿ ಶ್ರೀ ಪಿ.ರಘುನಾಥ್ , ರಾಜ್ಯ ಸಮಿತಿ ಸದಸ್ಯ ಪ್ರಮೀಳಾ ಸಿ ನಾಯ್ಕ್, , ಬಿಜೆಪಿ ನಾಯಕರಾದ ಶ್ರೀ ಎಂ ಸಂಜೀವ ಶೆಟ್ಟಿ, ಪಿ ಸುರೇಶ್ ಕುಮಾರ್ ಶೆಟ್ಟಿ,
ಅಡ್ವ.ವಿ.ಬಾಲಕೃಷ್ಣ  ಶೆಟ್ಟಿ, ಪಿ. ರಮೇಶ್ ಮೊದಲಾದವರು ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ ತಿಳಿಸಿದ್ದಾರೆ.

Comments