ಇನ್ನೂ ತೆರೆಯದ ಸ್ವರ್ಗದ ಬಾಗಿಲು.‌ ಸಂಕಷ್ಟದಲ್ಲಿ ಜಿಲ್ಲೆಯ ಜನತೆ, ಇದ್ದ ಕೆಲಸವನ್ನೂ ಕಳಕೊಳ್ಳಬೇಕಾದ ಸ್ಥಿತಿ, ಜಿಲ್ಲಾಡಳಿತ ದಿನಕೊಂದು ಹೊಸ ಹೊಸ ನಿಯಮ

ಇನ್ನೂ ತೆರೆಯದ ಸ್ವರ್ಗದ ಬಾಗಿಲು.‌ ಸಂಕಷ್ಟದಲ್ಲಿ ಜಿಲ್ಲೆಯ ಜನತೆ, ಇದ್ದ ಕೆಲಸವನ್ನೂ ಕಳಕೊಳ್ಳಬೇಕಾದ ಸ್ಥಿತಿ, ಜಿಲ್ಲಾಡಳಿತ ದಿನಕೊಂದು ಹೊಸ ಹೊಸ ನಿಯಮ
ಅನ್ ಲಾಕ್ 4ರನ್ವಯ ರಾಜ್ಯಗಳ ನಡುವೆ ಮುಕ್ತ ಸಂಚಾರದ ಆದೇಶವಿದ್ದರೂ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ತೆರಳುವ ಕೆಲವು ಗಡಿಗಳು ಮಾತ್ರ ತೆರೆದಿದ್ದು ಜನರ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕರ್ನಾಟಕಕ್ಕೆ ಬಹಳ ಹತ್ತಿರವಿರುಗ ಸ್ವರ್ಗದ ಗಡಿ ಇನ್ನೂ ಮುಚ್ಚಿಯೇ ಇದೆ.  ಪಾಸ್ ಸಮಸ್ಯೆ, ಆಂಟಿಜನ್ ಟೆಸ್ಟ್, ಕ್ವಾರಂಟೈನ್... ಒಂದಲ್ಲ ಒಂದು ಸಮಸ್ಯೆ ಯಿಂದ ಇದ್ದ ಕೆಲಸವನ್ನೂ ಕಳಕೊಳ್ಳಬೇಕಾದ ಸ್ಥಿತಿ ಎದುರಾಗಿದೆ. ಆದರೂ ಜಿಲ್ಲಾಡಳಿತ ದಿನಕೊಂದು ಹೊಸ ಹೊಸ ನಿಯಮಗಳನ್ನು ತರುತ್ತಿರುವುದು ಹೊಸ ಬಾಟಲಿಯಲ್ಲಿ ಹಳೇ ಮದ್ದು ಎನ್ನುವಂತಾಗಿರುವುದು ವಿಪರ್ಯಾಸ.‌
ಈ ಸ್ಥಿತಿ ಮುಂದುವರಿದರೆ ಕಂಗಾಲಾಗಿರುವ  ಜನಸಾಮಾನ್ಯರ ಜೀವನ ಬೀದಿಪಾಲಾಗುವುದರಲ್ಲಿ ಸಂಶಯವಿಲ್ಲ.

Comments