ಕನ್ನಡ ಪುತ್ರಿ ಈಗ ಕಾಸರಗೋಡಿನ ಉಪಜಿಲ್ಲಾಧಿಕಾರಿ

ಕನ್ನಡ ಪುತ್ರಿ ಈಗ ಕಾಸರಗೋಡಿನ ಉಪಜಿಲ್ಲಾಧಿಕಾರಿ

ಕಾಸರಗೋಡು, ಸೆ.9: ಪ್ರಾಮಾಣಿಕತೆ ಮತ್ತು ಬದ್ಧತೆಯಿಂದ ಯತ್ನಿಸಿದರೆ ಯಾವುದೂ ಅಸಾಧ್ಯವಲ್ಲ..ಇದು ನೂತನವಾಗಿ ಪದಗ್ರಹಣ ನಡೆಸಿರುವ ಕಾಞಂಗಾಡ್ ಉಪಜಿಲ್ಲಾಧಿಕಾರಿ, ಕನ್ನಡಿಗರಾಗಿರುವ ಡಿ.ಆರ್.ಮೇಘಶ್ರೀ ತಮ್ಮ ಅನುಭವ ಹಂಚಿಕೊಂಡ ಬಗೆ ಹೀಗೆ...
                            ಅವರು ಬಯಸಿದ್ದರೆ ಇದಕ್ಕಿಂತಲೂ ಅಧಿಕ ವೇತನ, ಸೌಲಭ್ಯ, ಸಾಫ್ಟ್ ವೇರ್ ಇಂಜಿನಿಯರ್ ವಲಯದ ಉನ್ನತ ಉದ್ಯೋಗ ಪಡೆಯಬಹುದಾಗಿತ್ತು. ಆದರೆ ತಮ್ಮ ಕರ್ಮಪಥ ಇದಲ್ಲ ಎಂದು ದೃಢ ನಿರ್ಧಾರ ಮಾಡಿಕೊಂಡಿರುವ ಇವರು ಸರಕಾರಿ ಹೊಣೆಗಾರಿಕೆಯೊಂದಿಗೆ ಜನಸೇವೆ ನಡೆಸುವ ಅಚಲ ಸಂಕಲ್ಪ ತೊಟ್ಟಿದ್ದರು.
                          ಎಳವೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲೇ ಶಾಲೆಗೆ ತೆರಳುತ್ತಿದ್ದೆ. ಈ ಅವಧಿಯಲ್ಲಿ ಅನೇಕ ಬೇಡಿಕೆಗಳೊಂದಿಗೆ ಮನವಿ ಹಿಡಿದುಕೊಂಡು ಜನಸಾಮಾನ್ಯರು ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಲು ಕಾದುನಿಲ್ಲುವುದನ್ನು ಕಂಡಿದ್ದೆ. ಈ ಅವಧಿಯಲ್ಲಿ ಸಾಮಾನ್ಯ ಜನರ ಬದುಕಿಗೆ ದೈನಂದಿನ ಅಗತ್ಯದ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಧಿಕಾರಿಯಂಥಾ ಒಬ್ಬ ಸರಕಾರಿ ಅಧಿಕಾರಿಯಾಗುವುದು ಸೂಕ್ತ ಎಂದು ಮನವರಿಕೆಯಾಗಿತ್ತು. ಈ ಅರಿವಿನ ಬೆಳಕಿನಲ್ಲಿ ಸಿವಿಲ್ ಸರ್ವೀಸ್ ರಂಗಕ್ಕಿಳಿದಿದ್ದೆ ಎಂದು ಅವರು ತಿಳಿಸುತ್ತಾರೆ.
                         ಕನ್ನಡಿಗರ ಹೆಮ್ಮೆಯ ನೆಲಗಳಲ್ಲಿ ಒಂದಾದ ಸಿಡಿಲಿಗೂ ಜಗ್ಗದ ಉಕ್ಕಿನ ಕೋಟೆಯಂಥಾ ಚಿತ್ರದುರ್ಗ ನಿವಾಸಿಯಾಗಿರುವ ಮೇಘಶ್ರೀ ಅವರ ನಿಲುವುಗಳೂ ಅಚಲವಾಗಿವೆ.  
   ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಕೋವಿಡ್ ವಿರುದ್ಧ ಹೋರಾಟ ಪ್ರಶಂಸನೀಯ
                             ಕೋಯಿಕೋಡ್ ಜಿಲ್ಲೆಯಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ ನಂತರ ಈಗ ಕಾಞಂಗಾಡ್ ಉಪಜಿಲ್ಲಾಧಿಕಾರಿಯಾಗಿ ಮೇಘಶ್ರೀ ಅವರು ಕಾಸರಗೋಡು ಜಿಲ್ಲೆಗೆ ಬಂದಿದ್ದಾರೆ. ಕರ್ನಾಟಕದವರಾದ ತಮಗೆ ಕೇರಳದ ಬಗ್ಗೆ ವಿಶéೇ ಅಭಿಮಾನವಿದೆ. ಅದರಲ್ಲೂ ಗಡಿನಾಡು ಕಾಸರಗೋಡು ಜಿಲ್ಲೆಯ ಬಗ್ಗೆ ಹೆಮ್ಮೆಯಿದೆ. ಅನೇಕ ಮಿತಿಗಳಿದ್ದರೂ, ಇಲ್ಲಿ ಕೋವಿಡ್ ವಿರುದ್ಧ ನಡೆಯುತ್ತಿರುವ ಹೋರಾಟ ಇತ್ಯಾದಿ ಜನಪರ ಚಟುವಟಿಕೆಗಳು ಪ್ರಶಂಸನೀಯ. ಸಮರ್ಪಕ ಆಡಳಿತ ವ್ಯವಸ್ಥೆ, ಹೊಣೆಗಾರಿಕೆಯುಳ್ಳ ಜನ ಇಲ್ಲಿನ ಯಶಸ್ಸಿಗೆ ಕಾರಣ ಎಂದವರು ಅಭಿಪ್ರಾಯಪಟ್ಟಿದ್ದಾರೆ.
                                  ಪ್ರವಾಸೋದ್ಯಮ -ಅಪಾರ ಸಾಧ್ಯತೆ
                            ಕಾಸರಗೋಡು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಧ್ಯತೆಯಿದೆ. ಅದನ್ನು ಸಮಪರ್ಪಕವಾಗಿ, ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕು. ಕೋವಿಡ್ ಭೀತಿ ಪೂರ್ಣರೂಪದಲ್ಲಿ ತೊಲಗಿದ ನಂತರ ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬಹುದಾಗಿದೆ ಎಂದವರು ನಿರೀಕ್ಷೆ ವ್ಯಕ್ತಪಡಿಸುತ್ತಾರೆ.
                          ಆರೋಗ್ಯ-ಶೈಕ್ಷಣಿಕ ವಲಯದಲ್ಲಿ ಮಹಿಳೆಯರಿಗೆ ವಿಶೇಷ ಆದ್ಯತೆಗೆ ಕ್ರಿಯಾತ್ಮಕ ಯತ್ನ ನಡೆಸುವುದಾಗಿ ಅವರು ಭರವಸೆ ನೀಡಿದ್ದಾರೆ.
                   ತಂದೆಯೇ ರೋಲ್ ಮಾಡೆಲ್
                           ಎಸ್.ಬಿ.ಐ.ಯಲ್ಲಿ ಪ್ರಧಾನ ಪ್ರಬಂಧಕರಾಗಿದ್ದ ತಮ್ಮ ತಂದೆ ರುದ್ರಮುನಿಯವರು ತಮ್ಮ ಬದುಕಿಗೆ ರೋಲ್ ಮಾಡೆಲ್ ಎಂದು ಮೇಘಶ್ರೀ ಅವರು ತಿಳಿಸುತ್ತಾರೆ. ತಾವು ಐ.ಎ.ಎಸ್.ಪದವಿಗೇರಲು ಪ್ರಧಾನ ಕಾರಣರೂ ಅವರೇ. ತಾವು ತಮ್ಮ ಪದವಿಯಲ್ಲಿದ್ದು ಸಾಮಾನ್ಯ ಜನತೆಗೆ ನೀಡುತ್ತಿದ್ದ ಸಹಾಯಗಳನ್ನು ನೋಡುತ್ತಲೇ ತಮಲ್ಲೂ ಈ ಭಾವನೆ ಒಡಮೂಡಿತ್ತು. ಕೌಟುಂಬಿಕ ಬದುಕು, ನೌಕರಿ ಯಶಸ್ವಿಯಾಗಿ ಸಮತೋಲನ ನಡೆಸುತ್ತಿದ್ದ ಅವರು ತಮಗೆ ಸದಾ ಒಂದು ಅದ್ಬುತವಾಗಿದ್ದರು ಎನ್ನುತ್ತಾರೆ.
                    ಎರಡನೇ ಯತ್ನದಲ್ಲಿ ಗಿಟ್ಟಿದ ಐ.ಎ.ಎಸ್
                         ಮೊದಲ ಯತ್ನದಲ್ಲಿ ಐ.ಎ.ಎಸ್. ಸರ್ವೀಸ್ ನ ಪ್ರಿಲಿಂಸ್ ನಲ್ಲೂ ತೇರ್ಗಡೆಯಾಗಲು ತಮಗೆ ಸಾಧ್ಯವಾಗಿರಲಿಲ್ಲ. ಆದರೆ ಸೋಲನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದ ತಾವು ನಡೆಸಿದ್ದ ಸತತ ಯತ್ನದ ಫಲವಾಗಿ ಎರಡನೇ ಯತ್ನದಲ್ಲಿ ಐ.ಎ.ಎಸ್. ಪದವಿ ಪಡೆದುಕೊಂಡೆ ಎಂದಿದ್ದಾರೆ. ಮೈನ್ಸ್ ಪರೀಕ್ಷೆಯಲ್ಲಿ ಕನ್ನಡ ಸಾಹಿತ್ಯ ತಮ್ಮ ಆಪ್ಶನಲ್ ಸಬ್ಜೆಕ್ಟ್ ಆಗಿತ್ತು. ಶಿಸ್ತು ಬದ್ಧ ಸ್ಟಡಿ ಪ್ಲಾನ್, ಸತತ ಯತ್ನ, ಕಠಿಣ ಶ್ರಮಗಳ ಫಲವಾಗಿ ಸಿವಿಲ್ ಸರ್ವೀಸ್ ತಮ್ಮಗೆ ದೊರಕಿದೆ ಎಂದವರು ಅಭಿಮಾನದಿಂದ ತಿಳಿಸುತ್ತಾರೆ.
             ಇಬ್ಬರು ಹೆಣ್ಣುಮಕ್ಕಳ ತಾಯಿ
                      ಎರಡೂವರೆ ವರ್ಷ ಪ್ರಾಯದ ವಿಸ್ಮಯಾ, 6 ತಿಂಗಳ ಹಸುಳೆ ಧೃತಿ ಇವರ ಮಕ್ಕಳು. ಮೇಘಶ್ರೀ ಅವರ ಪತಿ ಡಾ.ವಿಕ್ರಂ ಸಿಂಹ ಅವರು ಕರ್ನಾಟಕ ಕೃಷಿ ವಿವಿಯ ಸಹಾಯಕ ಪ್ರಾಚಾರ್ಯರಾಗಿದ್ದಾರೆ. ತ್ಮ ಕುಟುಂಬದ ಪೂರ್ಣ ಬೆಂಬಲ ತಮ್ಮ ಯಶಸ್ಸಿನ ಪ್ರಧಾನ ಕಾರಣ ಎನ್ನುತ್ತಾರೆ ಅವರು.

Comments

  1. Waw,madam,v Kasaragod kannadigaas r expecting ur support in development of kasaragod.bez v r not getting proper attention from the Kerala govt in developmental works.

    ReplyDelete
  2. Congratulations. Welcome to Kasaragod. All the best.

    ReplyDelete
  3. Congratulations. Welcome to Kasaragod. All the best.

    ReplyDelete

Post a Comment