ಇತರ ರಾಜ್ಯಗಳಿಗೆ ಸಂಚಾರ ನಡೆಸಲು ಯಾವುದೇ ತಡೆಗಳಿಲ್ಲ,ಗಡಿ ಪಂಚಾಯತ್ ಗಳಲ್ಲಿ ನೆಲೆಸಿರುವ ಮಂದಿಗೆ ಸಮೀಪದ ಪಂಚಾಯತ್ ಗಳಿಗೆ ತೆರಳುವ ನಿಟ್ಟಿನಲ್ಲಿ ಗುರುತು ಚೀಟಿ ಹಾಜರುಪಡಿಸಿದರೆ ಸಾಕು : ಜಿಲ್ಲಾಧಿಕಾರಿ

ಇತರ ರಾಜ್ಯಗಳಿಗೆ ಸಂಚಾರ ನಡೆಸಲು ಯಾವುದೇ ತಡೆಗಳಿಲ್ಲ,ಗಡಿ ಪಂಚಾಯತ್ ಗಳಲ್ಲಿ ನೆಲೆಸಿರುವ ಮಂದಿಗೆ ಸಮೀಪದ ಪಂಚಾಯತ್ ಗಳಿಗೆ ತೆರಳುವ ನಿಟ್ಟಿನಲ್ಲಿ ಗುರುತು ಚೀಟಿ ಹಾಜರುಪಡಿಸಿದರೆ ಸಾಕು  : ಜಿಲ್ಲಾಧಿಕಾರಿ
ಕಾಸರಗೋಡು,ಸೆ.2: ಇತರ ರಾಜ್ಯಗಳಿಗೆ ಸಂಚಾರ ನಡೆಸಲು ಯಾವುದೇ ತಡೆಗಳಿಲ್ಲ.  ನೌಕರಿ ಸಂಬಂಧ ದಿನನಿತ್ಯ ಕರ್ನಾಟಕಕ್ಕೆ ತೆರಳಿ ಮರಳುವ ಕಾಸರಗೋಡು ಜಿಲ್ಲೆಯ ನಿವಾಸಿಗಳಿಗೆ ಪ್ರತ್ಯೇಕ ನೋಂದಣಿ, ಪಾಸ್ ಇತ್ಯಾದಿ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಕೊರೋನಾ ಕೋರ್ ಸಮಿತಿ ಆನ್ ಲೈನ್ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಅವರು ಈ ವಿಚಾರ ಪ್ರಕಟಸಿದರು. 
ಕರ್ನಾಟಕದಲ್ಲಿ ಶಾಶ್ವತವಾಗಿ ನೆಲೆಸಿರುವ, ಕಾಸರಗೋಡು ಜಿಲ್ಲೆಗೆ ದಿನನಿತ್ಯ ಬಂದು, ಹೋಗುವ ಮಂದಿ ತಲಾ 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ಆಂಟಿಜೆನ್ ತಪಾಸಣೆ ಸರ್ಟಿಫೀಕೆಟ್ ಅಪ್ ಲೋಡ್ ನಡೆಸಬೇಕು. ಇವರು ಜಾಲ್ಸೂರು,ಪೆರ್ಲ, ಪಾಣತ್ತೂರು, ಮಾಣಿಮೂಲೆ-ಬಂದಡ್ಕ ರಸ್ತೆಗಳ ಮೂಲಕವೂ ಕರ್ನಾಟಕಕ್ಕೆ ನಿತ್ಯ ಸಂಚಾರ ನಡೆಸಬಹುದು. ಸರಕು ವಾಹನಗಳ ಸಹಿತ ವಾಹನಗಳಿಗೆ ಈ ರಸ್ತೆಗಳಲ್ಲಿ ತಡೆ ಇರುವುದಿಲ್ಲ. ಇತರ ರಾಜ್ಯಗಳಲ್ಲಿ ಶಾಶ್ವತವಾಗಿ ನೆಲೆಸಿದ್ದು, ಈಗ ಕಾಸರಗೋಡು ಜಿಲ್ಲೆಯಲ್ಲಿ ಶಾಶ್ವತವಾಗಿ ನೆಲೆಸುವ ಉದ್ದೇಶದಿಂದ ಆಗಮಿಸುವ ಮಂದಿಗೆ ಪಾಸ್ ಅಗತ್ಯವಿಲ್ಲ. ಕೋವಿಡ್ 19 ಪೋರ್ಟಲ್ ನಲ್ಲಿಆಂಟಿಜೆನ್ತಪಾಸಣೆ ನಡೆಸಿ ಫಲಿತಾಂಶ ಸರ್ಟಿಫಿಕೆಟ್ ಅಪ್ ಲೋಡ್ ನಡೆಸಿದರೆ ಸಾಕು ಎಂದು ಜಿಲ್ಲಾಧಿಕಾರಿ ತಿಳಿಸಿದರು. ಕೇಂದ್ರ ಆರೋಗ್ಯ ಮಂತ್ರಾಲಯ ಮತ್ತು ಐ.ಸಿ.ಎಂ.ಆರ್.ನ ಆದೇಶ ಪ್ರಕಾರ 14 ದಿನಗಳ ಕ್ವಾರೆಂ ಟೈನ್ ಅನಿವಾರ್ಯವಾಗಿದೆ ಎಂದರು. ಕೋವಿಡ್ 19 ಜಾಗ್ರತಾ ವೆಬ್ ಪೋರ್ಟಲ್ ನೋಂದಣಿ ನಡೆಸಿದ ಮಂದಿ ರಾಷ್ಟ್ರೀಯ ಹೆದ್ದಾರಿ 66 ಅಲ್ಲದೆ ಕಾಸರಗೋಡು ಜಿಲ್ಲೆಯಲ್ಲಿ ಮುಕ್ತಗೊಳಿಸಲಾದ 4 ಗಡಿ ರಸ್ತೆಗಳ ಮೂಲಕ ತೆರಳಿ, ಮರಳ ಬಹುದಾಗಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.
 ಕೇಂದ್ರ ಸರಕಾರ ಘೋಷಿಸಿರುವ ಅನ್ ಲಾಕ್ 4 ಸಂಬಂಧ ರಾಜ್ಯ ಸರಕಾರದ ಆದೇಶವೂ ಲಭಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲಾಗುವುದು. ತುರ್ತು ಪರಿಸ್ಥಿತಿಯಲ್ಲಿ ಕರಾಟಕಕ್ಕೆ 24 ತಾಸಿನೊಳಗೆ ಹೋಗಿ ಮೃಲುವವರಿಗೆ ಕ್ವಾರೆಂಟೈನ್ ಅಗತ್ಯವಿಲ್ಲ. ಗಡಿ ಪಂಚಾಯತ್ ಗಳಲ್ಲಿ ನೆಲೆಸಿರುವ ಮಂದಿಗೆ ಸಮೀಪದ ಪಂಚಾಯತ್ ಗಳಿಗೆ ತೆರಳುವ ನಿಟ್ಟಿನಲ್ಲಿ ಗುರುತು ಚೀಟಿ ಹಾಜರುಪಡಿಸಿದರೆ ಸಾಕು. ಕೋವಿಡ್ ಸೋಂಕು ಹೆಚ್ಚಳ ಸಂಬಂಧ ಪ್ರತಿರೋಧ ಕ್ರಮಗಳನ್ನು ಕೈಗೊಳ್ಳುವ ಪ್ರಕ್ರಿಯೆಯಯನ್ನು ಕೇರಳ-ಕರ್ನಾಟಕ ಗಡಿ ಪಂಚಾಯತ್ ಗಳ ಜನಪ್ರತಿನಿಧಿಗಳು ಮಾತುಕತೆ ನಡೆಸಿ ನಿರ್ಧರಿಸುವರು ಎಂದು ಸಭೆ ತಿಳಿಸಿದೆ. 
                             ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್, ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್, ಡಿ.ವೈ.ಎಸ್.ಪಿ.ಬಾಲಕೃಷ್ಣನ್ ನಾಯರ್ ಪಿ., ಕೋರ್ ಸಮಿತಿ ಸದಸ್ಯರು ಉಪಸ್ಥಿತರಿದ್ದರು. 
.............................................................................

Comments