ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ಪಾಸಿಟಿವ್ , 170 ಮಂದಿಗೆ ಕೋವಿಡ್ ನೆಗೆಟಿವ್, 6474 ಮಂದಿ ನಿಗಾದಲ್ಲಿ

ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ಪಾಸಿಟಿವ್ , 170 ಮಂದಿಗೆ ಕೋವಿಡ್ ನೆಗೆಟಿವ್, 6474 ಮಂದಿ ನಿಗಾದಲ್ಲಿ, 42 ಮಂದಿ ಮೃತ

ಕಾಸರಗೋಡು, ಸೆ.3:ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 133 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 120 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 8 ಮಂದಿ ವಿದೇಶದಿಂದ, 5 ಮಂದಿ ಇತರ ರಾಜ್ಯಗಳಿಂದ ಬಂದವರು ಎಂದು ಜಿಲ್ಲಾ ವೈದ್ಯಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
      ಪಾಸಿಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
  ಕಾಸರಗೋಡು ನಗರಸಭೆ 26, ಮಧೂರು ಪಂಚಾಯತ್ 13, ಕಾರಡ್ಕ ಪಂಚಾಯತ್ 2, ಚೆಮ್ನಾಡ್ 12, ಚೆಂಗಳ ಪಂಚಾಯತ್ 8, ಕುತ್ತಿಕೋಲು ಪಂಚಾಯತ್ 1, ಮೊಗ್ರಾಲ್ ಪುತ್ತೂರು 6, ಪೈವಳಿಕೆ ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಎಣ್ಮಕಜೆ ಪಂಚಾಯತ್ 3, ಮುಳಿಯಾರು ಪಂಚಾಯತ್ 5, ಮಂಜೇಶ್ವರ ಪಂಚಾಯತ್ 2, ಮಂಗಲ್ಪಾಡಿ ಪಂಚಾಯತ್ 2, ಕುಂಬಳೆ ಪಂಚಾಯತ್ 5, ಕಾಞಂಗಾಡ್ ನಗರಸಭೆ 10, ಉದುಮಾ ಪಂಚಾಯತ್ 11, ಮಡಿಕೈ ಪಂಚಾಯತ್ 1, ಪಳ್ಳಿಕ್ಕರೆ ಪಂಚಾಯತ್ 6, ಅಜಾನೂರು ಪಂಚಾಯತ್ 6, ಪಡನ್ನ ಪಂಚಾಯತ್ 2, ನೀಲೇಶ್ವರ ನಗರಸಭೆ 2, ಕಯ್ಯೂರು-ಚೀಮೇನಿ ಪಂಚಾಯತ್ 2, ಕಿನಾನೂರು-ಕರಿಂದಳಂ ಪಂಚಾಯತ್ 1, ಪುಲ್ಲೂರು-ಪೆರಿಯ ಪಂಚಾಯತ್ 1 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ.      
                     ವಿದೇಶ
 ದುಬಾಯಿಯಿಂದ ಆಗಮಿಸಿದ್ದ ಚೆಮ್ನಾಡ್ ಪಂಚಾಯತ್ ನ 52, ಉದುಮಾ ಪಂಚಾಯತ್ ನ 32, 51, 28, 37 ವರ್ಷದ ಪುರುಷರು, ಅಬುದಾಭಿಯಿಂದ ಬಂದಿದ್ದ ಕಾಸರಗೋಡು ನಗರಸಭೆಯ 24, ಷಾರ್ಜಾದಿಂದ ಆಗಮಿಸಿದ್ದ ಪಳ್ಳಿಕ್ಕರೆ ಪಂಚಾಯತ್ ನ 60 ವರ್ಷದ ಪುರುಷರಿಗೆ ಕೋವಿಡ್ ಸೋಂಕು ಖಚಿತವಾಗಿದೆ.
                     ಇತರ ರಾಜ್ಯ
 ಜಮ್ಮು ಕಾಶ್ಮೀರದಿಂದ ಬಂದಿದ್ದ ಕಾಞಂಗಾಡ್ ನಗರಸಭೆಯ 32, ರಾಜಸ್ತಾನದಿಂದ ಆಗಮಿಸಿದ್ದ ಕರ್ನಾಟಕ ಮೂಲ ನಿವಾಸಿಗಳಾದ 60, 41, ಕಾಸರಗೋಡು ನಗರಸಭೆಯ 30 ವರ್ಷದ ಪುರುಷರು, ಕರ್ನಾಟಕದಿಂದ ಬಂದಿದ್ದ ಮಂಜೇಶ್ವರ ಪಂಚಾಯತ್ ನ 24 ವರ್ಷದ ಪುರುಷ ರೋಗ ಬಾಧಿತರು. 
170 ಮಂದಿಗೆ ಕೋವಿಡ್ ನೆಗೆಟಿವ್ 
                                                ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ 170 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಎ.ವಿ.ರಾಮದಾಸ್ ತಿಳಿಸಿದರು. 
   ನೆಗೆಟಿವ್ ಆದವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
                          ಕಾಸರಗೋಡು ನಗರಸಭೆ 16, ಚೆಮ್ನಾಡ್ ಪಂಚಾಯತ್ 30, ಕಾಞಂಗಾಡ್ ನಗರಸಭೆ 21, ಅಜಾನೂರು ಪಂಚಾಯತ್ 19, ನೀಲೇಶ್ವರ ನಗರಸಭೆ 12, ತ್ರಿಕರಿಪುರ ಪಂಚಾಯತ್ 9, ಚೆರುವತ್ತೂರು ಪಂಚಾಯತ್ 7, ಮಂಗಲ್ಪಾಡಿ, ಕಯ್ಯೂರು-ಚೀಮೇನಿ, ವಲಿಯ ಪರಂಬ ಪಂಚಾಯತ್ ತಲಾ 6, ಚೆಂಗಳ, ಮೊಗ್ರಾಲ್ ಪುತ್ತೂರು, ಪಡನ್ನ, ಕುಂಬಳೆ ಪಂಚಾಯತ್ ತಲಾ 4 ಮಂದಿ, ವರ್ಕಾಡಿ ಪಂಚಾಯತ್ 3, ಕೀನಾನೂರು-ಕರಿಂದಳಂ, ಪಳ್ಳಿಕ್ಕರೆ, ಪುತ್ತಿಗೆ, ಕೋಡೋಂ-ಬೇಳೂರು, ಮಧೂರು ಪಂಚಾಯತ್ ತಲಾ 2, ಮಂಜೇಶ್ವರ, ಪೈವಳಿಕೆ, ಮೀಂಜ, ದೇಲಂಪಾಡಿ, ಕಾರಡ್ಕ, ಪಿಲಿಕೋಡ್, ಮಡಿಕೈ ಪಂಚಾಯತ್ ತಲಾ ಒಬ್ಬರು ಗುಣಮುಖರಾದರು. 
6474 ಮಂದಿ ನಿಗಾದಲ್ಲಿ 
                                              ಕಾಸರಗೋಡು ಜಿಲ್ಲೆಯಲ್ಲಿ 6474 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆ ವರದಿ ತಿಳಿಸಿದೆ. 
                         ಮನೆಗಳಲ್ಲಿ 5587, ಸಾಂಸ್ಥಿಕವಾಗಿ 887 ಮಂದಿ ನಿಗಾದಲ್ಲಿರುವರು. ನೂತನವಾಗಿ 306 ಮಂದಿ ನಿಗಾ ಪ್ರವೇಶ ಮಾಡಿದ್ದಾರೆ. 220 ಮಂದಿ ಗುರುವಾರ ನೂತನವಾಗಿ ನಿಗಾ ಪ್ರವೇಶ ಮಾಡಿದ್ದಾರೆ. 
ನೂತನವಾಗಿ 1254 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 697 ಮಂದಿಯ ಫಲಿತಾಂಶ ಲಭಿಸಲು ಬಾಕಿಯಿದೆ. 
ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5378 ಮಂದಿಗೆ ಕೋವಿಡ್ ಪಾಸಿಟಿವ್ 
ಕಾಸರಗೋಡು, ಸೆ.3: ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ ಒಟ್ಟು 5378 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು. 
ಇವರಲ್ಲಿ 4407 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದೆ. 565 ಮಂದಿ ವಿದೇಶದಿಂದ, 406 ಮಂದಿ ಇತರ ರಾಜ್ಯಗಳಿಂದ ಆಗಮಿಸಿದವರು. 4044 ಮಂದಿಗೆ ಈ ವರೆಗೆ ಕೋವಿಡ್ ನೆಗೆಟಿವ್ ಆಗಿದೆ. ಈಗ 1292 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋವಿಡ್ ಸಂಬಂಧ 42 ಮಂದಿ ಮೃತಪಟ್ಟಿದ್ದಾರೆ. 

Comments