ಜಿಲ್ಲೆಯಿಂದ ಉದ್ಯೋಗಕ್ಕೆ ಹಾಗೂ ವ್ಯಾಪಾರಕಾಗಿ ಕರ್ನಾಟಕಕ್ಕೆ ಹೋಗುವವರಿಗೆ ಹೇರಿದ ನಿಯಂತ್ರಣವನ್ನು ಕೋನೆಗೊಳಿಸದಿದ್ದರೆ ಬಿಜೆಪಿ ಪ್ರತಿಭಟನೆಗೆ ತಯಾರಿ


ಜಿಲ್ಲೆಯಿಂದ ಉದ್ಯೋಗಕ್ಕೆ ಹಾಗೂ ವ್ಯಾಪಾರಕಾಗಿ ಕರ್ನಾಟಕಕ್ಕೆ ಹೋಗುವವರಿಗೆ ಹೇರಿದ ನಿಯಂತ್ರಣವನ್ನು ಕೋಣೆಗೊಳಿಸದಿದ್ದರೆ  ಬಿಜೆಪಿ ಪ್ರತಿಭಟನೆಗೆ ಶುರುಮಾಡುತ್ತೆವೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಅಡ್ವಾ ಶ್ರೀಕಾಂತ್ ತಿಳಿಸಿದ್ದಾರೆ ಕೇಂದ್ರ ಹಾಗು ರಾಜ್ಯ ಸರ್ಕಾರ ಹೊರಡಿಸಿದ unlock 2 ಹಾಗೂ 3 ಯ ಮಾರ್ಗದರ್ಶನದ ಪ್ರಕಾರ ಅಂತರ್ ರಾಜ್ಯ ಪ್ರಯಾಣಕ್ಕೆ ಯಾವುದೇ ನಿಯಂತ್ರಣ ಮಾಡಬಾರದು ಎಂದು  ತಿಳಿಸಿದೆ. ಆದರೆ ಅದಕ್ಕೆ ವಿರುದ್ಧವಾಗಿ. ಯಾತ್ರಾ ನಿಯಂತ್ರಣ ಮುಂದುವರಿದರೆ  ಅದು ಅಂಗೀಕರಿಸಲು ಸಾದ್ಯವಿಲ್ಲ ಎಂದು ಅವರು ತಿಳಿಸಿದರು. 

ಕಾಸರಗೋಡು ಜಿಲ್ಲೆಯ ಸಾವಿರಾರು ಜನರು ನೆರೆ ರಾಜ್ಯ ಕರ್ನಾಟಕವನ್ನು ಆಶ್ರಹಿಸಿ ಜೀವಿಸುತ್ತಿದ್ದಾರೆ. ಕ್ವಾರಂಟೈನ್ ನಿರ್ಬಂಧ ಮಾಡುವುದರ ಮೂಲಕ ಉದ್ಯೋಗಕ್ಕೆ ಹೋಗಲು ಸಾಧ್ಯವಾಗದ ಅವಸ್ಥೆಯಾಗಿದೆ ಇರುವುದು ಹಲವಾರು ಜನರಿಗೆ ತಮ್ಮ ಉದ್ಯೋಗ  ಕಳೆದುಕೊಳ್ಳುವ ಭೀತಿಯಿದೆ ಎಂದು ಶ್ರೀಕಾಂತ್ ಹೇಳಿದರು, ಯಾತ್ರಾ ನಿಯಂತ್ರಣ ಇದ್ದರು ಕೋವಿಡ್ ನಿಯಂತ್ರಣ ಮಾಡಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ ಎಂದು ಅವರು ವಿಮರ್ಶಿಸಿಸಿದರು , ಕರ್ನಾಟಕಕ್ಕೆ ಹೋಗುವುರರಿಂದ ಅಲ್ಲಾ  ರೋಗ ವರ್ಧನೆ ಆಗುವುದು,   ಈಗ ಇರುವ ನಿಯಂತ್ರಣವನ್ನು ತೆಗೆಯದಿದ್ದರೆ ಪ್ರತಿಭಟನೆ ಹಾಗೂ ನಿಯಮ ಹೋರಾಟ ನಡೆಸುವೆವು ಎಂದು  ಶ್ರೀಕಾಂತ್ ತಿಳಿಸಿದರು.

ಅಂತರ್ ರಾಜ್ಯ ಯಾತ್ರೆಯ ಸಂಬಂಧಪಟ್ಟು ಜಿಲ್ಲೆಯ MP  ಹಾಗೂ  ಜಿಲ್ಲೆಯ MLA  ಯರ ಮೌನ ನಿಜಕ್ಕೂ  ಖಂಡನಿಯವಾಗಿದೆ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ರಾಜಕೀಯ ಪಾರ್ಟಿಗಳು ಈ ವಿಷಯದಲ್ಲಿ ಅವರ ಅಭಿಪ್ರಾಯ ತಿಳಿಸಬೇಕೆಂದು ಅವರು ವಿನಂತಿಸಿದರು.

Comments