- Get link
- X
- Other Apps
- Get link
- X
- Other Apps
ಕಲೆ "ಎನ್ನುವುದೊಂದು ಶಕ್ತಿ.
ಯುವ ಸಾಧಕ ಪ್ರಶಾಂತ್ ಎಂ ಟಿ ವಿಟ್ಲ
"ಕಲೆ "ಎನ್ನುವುದೊಂದು ಶಕ್ತಿ. ಅಪಾರವಾದಂತಹ ಶ್ರದ್ದೆ,ತಾಳ್ಮೆ,ಪ್ರಯತ್ನವಿದ್ದರೆ ಕಲಾಮಾತೆ ಒಲಿಯುತ್ತಾಳೆ, ನಂಬಿದವರನ್ನ ಕೈಹಿಡಿದು,ಮುನ್ನಡೆಸುತ್ತಾಳೆ ಎಂಬುದಕ್ಕೆ ಯುವ ಸಾಧಕ, ಸಾಹಿತಿ,ನೃತ್ಯಗಾರ,ಕ್ರೀಡಾಪಟು "ಪ್ರಶಾಂತ್. ಕುಮಾರ್ ಎಂ.ಟಿ, ವಿಟ್ಲ" ಇವರು ಉದಾಹರಣೆಯಾಗಿದ್ದಾರೆ. ಹೌದು ವಿಟ್ಲ ಸಮೀಪದ ಕಡಂಬು ಎಂಬ ಕುಗ್ರಾಮದಲ್ಲಿ ತಿಮ್ಮ ಮತ್ತು ಕಲ್ಯಾಣಿ ದಂಪತಿಗಳ ದ್ವಿತೀಯ ಪುತ್ರರಾಗಿ ಜನಿಸಿದ ಇವರು,ಕಡು ಬಡತನದಲ್ಲಿ ತಮ್ಮ ಬಾಲ್ಯವನ್ನು ಕಳೆದರು. ಕಿತ್ತು ತಿನ್ನುವ ಬಡತನದ ನಡುವೆ ಬಾಲ್ಯದಲ್ಲಿಯೇ ಆಟ-ಪಾಠಗಳಲ್ಲಿ ಮುಂದಿದ್ದ ಇವರು ಮಾರ್ಪನಡ್ಕ ಮತ್ತು ವಿಟ್ಲ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದರು. ಶಾಲಾ ಜೀವನದಲ್ಲಿ ಬರವಣಿಗೆ,ನಾಟಕ, ನೃತ್ಯಗಳಲ್ಲಿ ಭಾಗವಹಿಸಿ ಉಪಜಿಲ್ಲೆ, ಜಿಲ್ಲೆ, ರಾಜ್ಯಮಟ್ಟದಲ್ಲೂ ಹಲವಾರು ಬಹುಮಾನಗಳನ್ನ ತನ್ನದಾಗಿಸಿಕೊಂಡಿದ್ದಾರೆ. ಸಂಗೀತದಲ್ಲಿ ಒಲವಿದ್ದ ಇವರು "ನ್ಯೂ ಶೈನ್ ವಿಟ್ಲ" ತಂಡದಲ್ಲಿ,ಇನ್ನಿತರ ಆಹ್ವಾನ ತಂಡದಲ್ಲಿ ಸರಿ ಸುಮಾರು ಸಾವಿರಕ್ಕಿಂತಲೂ ಹೆಚ್ಚು ವೇದಿಕೆಯಲ್ಲಿ ಗಾಯಕರಾಗಿ ತನ್ನ ಕಲಾ ಚಾತುರ್ಯವನ್ನ ಪ್ರಕಟಪಡಿಸಿದ್ದಾರೆ. ಸುಮಾರು 100ಕ್ಕಿಂತಲೂ ಹೆಚ್ಚು ಹಾಡು(ಸಾಹಿತ್ಯ)ಗಳನ್ನು ರಚಿಸಿದ್ದಾರೆ. ಇದರಲ್ಲಿ "ಹಾಡು ಕರ್ನಾಟಕ" ಖ್ಯಾತಿಯ , ಆರ್ಯಭಟ ಪ್ರಶಸ್ತಿ ವಿಜೇತ "ಜಗದೀಶ್.ಪುತ್ತೂರು ", ಅಪ್ಪೆ ಟೀಚರ್ ಖ್ಯಾತಿಯ ಮಿಥುನ್ ರಾಜ್ ವಿದ್ಯಾಪುರ ಇಂತಹ ಗಾಯಕರೂ ಇವರ ಸಾಹಿತ್ಯದಲ್ಲಿ ಗಾಯನ ಮಾಡಿದ್ದಾರೆ. ಅದೆಷ್ಟೋ ವೇದಿಕೆಗಳಲ್ಲಿ ಸಿನೆಮಾ,ಭಾವಗೀತೆ ಜಾನಪದ, ಭಕ್ತಿಗೀತೆ ಹಾಡುಗಳಿಗೆ ಹೆಜ್ಜೆ ಹಾಕಿ ನೃತ್ಯದಲ್ಲೂ ಸೈ ಎನಿಸಿಕೊಂಡಿದ್ದಾರೆ. ಹಲವಾರು ಪ್ರತಿಭೆಗಳಿಗೆ ನೃತ್ಯ ಗುರುಗಳಾಗಿಯೂ ಗಮನ ಸೆಳೆದಿದ್ದಾರೆ. ಉತ್ತಮ ಕಬಡ್ಡಿ ಆಟಗಾರರಾಗಿರುವ ಇವರ ತಂಡಕ್ಕೆ, ವೈಯಕ್ತಿಕ ಬಹುಮಾನಗಳೂ ಇವರಿಗೆ ಲಭಿಸಿವೆ. ಸರಿ ಸುಮಾರು ಇವರು ಬರೆದ 1000ಕ್ಕಿಂತಲೂ ಅಧಿಕ ಕವನಗಳು ಜಯಕಿರಣ,ಕಾರವಲ್, ಬೆಂಗಳೂರಿನ ಮಾನಸ, ಸವಿ ಸವಿ ಸವಿ ಪ್ರೀತಿ ,ಮಂಗಳ ಮುಂತಾದ ಮಾಸಪತ್ರಿಕೆಯಲ್ಲಿ ಈಗಾಗಲೇ ಪ್ರಕಟಗೊಂಡಿದೆ. 700ರಷ್ಟು ಲೇಖನಗಳೂ ಸ್ಥಳೀಯ ಪತ್ರಿಕೆಯಲ್ಲಿ ಬೆಳಕಿಗೆ ಬಂದಿದೆ. ಕೆಲವೊಂದು ಕಿರುಚಿತ್ರದಲ್ಲಿ ಅಭಿನಯಿಸಿದ ಇವರು ನಟನೆಯಲ್ಲೂ ಮುಂದಿದ್ದಾರೆ. ಪ್ರಶಾಂತರು ಇತ್ತೀಚೆಗೆ ಜನ್ಮಭೂಮಿ,ಭಾರತಾಂಬೆಯ ಬಗ್ಗೆ ರಚಿಸಿದ ಸಾಹಿತ್ಯಕ್ಕೆ ವಿಶ್ವವಿಖ್ಯಾತಿ ಪಡೆದಿರುವ ಗಾಯಕ" ವಿಜಯ್ ಪ್ರಕಾಶ್" ಇವರು ಗಾಯನ ಮಾಡಲಿದ್ದಾರೆ ಬೆಂಗಳೂರಿನ ನಿರ್ದೇಶಕರಾದ ನವೀನ್ ಕುಮಾರ್ ಇವರ ನಿರ್ದೇಶನದಲ್ಲಿ ಮೂಡಿಬರಲಿದೆ..ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯವೆಂದರೆ ತಪ್ಪಾಗಲಾರದು. 73ನೇ ಸ್ವಾತಂತ್ರೋತ್ಸವದ ಸಂಭ್ರಮದಲ್ಲಿ ಈ ಹಾಡು ಹಲವಾರು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಗೊಳ್ಳಲಿದೆ.
ಪ್ರಶಾಂತ್ ಇವರಂತಹ ಅದ್ಬುತ ಸಾಧಕರು ,ಇನ್ನಷ್ಟು ಎತ್ತರೆತ್ತರಕ್ಕೆ ಬೆಳೆಯಲಿ ಎಂಬುವುದೇ ನಮ್ಮೆಲ್ಲರ ಹಾರೈಕೆ.
-----------------------
ಬರಹ;- ಸುಜಿತ್.ಕುಮಾರ್.✍️
- Get link
- X
- Other Apps
Comments
Post a Comment