ವಿಶ್ವದ ಪ್ರಥಮ ಕೊರೋನಾ ಲಸಿಕೆ ನೋಂದಾಯಿಸಿದ ರಷ್ಯಾ


ವಿಶ್ವದ ಪ್ರಥಮ ಕೊರೋನಾ ಲಸಿಕೆ ನೋಂದಾಯಿಸಿದ ರಷ್ಯಾ
ಮದ್ದಿಲ್ಲದ ರೋಗ ಕೊರೋನಾ ಮಹಾಮಾರಿಯು ಜಗತ್ತನ್ನು ನಡುಗಿಸ ಹೊರಟು ತಿಂಗಳುಗಳೇ ಕಳೆದರೂ ಇನ್ನೂ ಸೂಕ್ತ ಲಸಿಕೆ  ನಿರ್ಮಾಣ ವಾಗದೆ ಚಡಪಡಿಸುತ್ತಿರುವಂತೆ ಇದೀಗ ರಷ್ಯಾ ಲಸಿಕೆ ನೋಂದಾಯಿಸುವ ಮೂಲಕ ಹೊಸ ನಿರೀಕ್ಷೆ ಹುಟ್ಟಿಸಿದೆ.
ರಷ್ಯಾದ ಅಧ್ಯಕ್ಷ ಬ್ಲಾಡಿಮಿರ್ ಪುಟಿನ್ ಅವರ ನೇತೃತ್ವದಲ್ಲಿ ಗಮಲೇಯಾ ಸಂಶೋಧನಾ ಸಂಸ್ಥೆ ಹಾಗೂ ರಷ್ಯಾದ  ರಕ್ಷಣಾ ಸಚಿವಾಲಯ ಜಂಟಿಯಾಗಿ  ತಯಾರಿಸಲಾದ ಲಸಿಕೆಯನ್ನು ಅವರ ಮಗಳ ಮೇಲೆಯೇ ಪರೀಕ್ಷಿಸಲಾಗಿದ್ದು ಯಶಸ್ವಿಯಾಗಿದೆ ಎಂದು ಬಲ್ಲ ಮೂಲಗಳಿಂದ ಮಾಹಿತಿ ಹೊರಬಂದಿದೆ.‌ 
ಕೊರೋನಾದ ಮೇಲೆ ಬಲಬಾದ ಪರಿಣಾಮ ಬೀರಲಿರುವ ಈ ಲಸಿಕೆಯು ಸ್ಥಿರವಾಗಿ ದೇಹದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಪುಟಿನ್ ಹೇಳಿದ್ದಾರೆ.

ವಿಶ್ವದಲ್ಲಿಯೇ ಮೊದಲ ಬಾರಿಗೆ ರಷ್ಯಾದಲ್ಲಿ ಕೊರೋನಾ ವೈರಸ್ ಲಸಿಕೆಯನ್ನು ನೋಂದಾಯಿಸಲಾಗಿದೆ ಎಂದು ಪುಟಿನ್ ಅವರು ಸರಕಾರಿ ಮಂತ್ರಿ ಗಳೊಂದಿಗೆ ವೀಡಿಯೋ ಕಾನ್ಫರೆನ್ಸ್ ಕರೆಯಲ್ಲಿ ಸ್ಪಷ್ಟಪಡಿಸಿದ್ದಾರೆ.  ಮಾತ್ರವಲ್ಲದೆ ಇದಕ್ಕೆ  ಶ್ರಮಿಸಿದವರಿಗೆ ಧನ್ಯವಾದ ಸಮರ್ಪಿಸಿದ್ದಾರೆ.

Comments