ದೇಶಕಾಯುವ ಸೈನಿಕರನ್ನು ಸದಾ ನಾವೆಲ್ಲರೂ ನೆನಪಿಸಿಕೊಳ್ಳಬೇಕು-ಶ್ರೀಮತಿ ಲಕ್ಷ್ಮೀ.

ದೇಶಕಾಯುವ ಸೈನಿಕರನ್ನು ಸದಾ ನಾವೆಲ್ಲರೂ ನೆನಪಿಸಿಕೊಳ್ಳಬೇಕು-ಶ್ರೀಮತಿ ಲಕ್ಷ್ಮೀ.
-------------------------------------------
ಬೇಕೂರು;- ಭಾರತವು ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ.ಭಾರತೀಯರಾದ ನಾವೆಲ್ಲರೂ ಇಂದು ಸುಖವಾಗಿದ್ದೇವೆಯೆಂದಾದರೆ ಅದಕ್ಕೆ ಮೂಲ ಕಾರಣ ಗಡಿ ಕಾಯೋ ಯೋಧರು.  ಸಕಾಲದಲ್ಲಿ ಕೊರೊನಾ ಮಹಾಮಾರಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಗಲಿರುಳು ದುಡಿಯುತ್ತಿರುವ ವೈದ್ಯರು,ಪೊಲೀಸರು,ಆಶಾ ಕಾರ್ಯಕರ್ತೆಯರನ್ನೂ  ಸದಾ ನಾವು ಸ್ಮರಿಸಬೇಕೆಂದು ಸರಕಾರಿ ಹೈಯರ್ ಸೆಕೆಂಡರಿ ಶಾಲೆ ಬೇಕೂರು,ಇಲ್ಲಿನ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಲಕ್ಷ್ಮೀ ನುಡಿದರು.ಅವರು ಬೇಕೂರು ಶಾಲೆಯಲ್ಲಿ 74ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಧ್ವಜಾರೋಹಣಗೈದು ಮಾತನಾಡಿದರು.ಮಂಗಲ್ಪಾಡಿ ಪಂಚಾಯತ್ ಸದಸ್ಯರಾದ ಉಮೇಶ್,ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷರಾದ ಅಬ್ದುಲ್ ರಹಿಮಾನ್ ಬೇಕೂರು,ಶಾಲಾ ರಕ್ಷಕ-ಶಿಕ್ಷಕ ಸಂಘದ ಸದಸ್ಯರಾದ ಅಶ್ರಫ್ ಮುಖ್ಯ ಅತಿಥಿಗಳಾಗಿದ್ದರು.ಕನ್ನಡ ಅಧ್ಯಾಪಿಕೆ ಶ್ರೀಮತಿ ಭಾಗ್ಯಲಕ್ಷ್ಮೀ ಧ್ವಜಗೀತೆ ಹಾಡಿ, ಅಧ್ಯಾಪಕ ಹಮೀದ್ ನಿರೂಪಿಸಿ,  ಅಧ್ಯಾಪಕ ಸಿಬ್ಬಂದಿ ವರ್ಗದ ಕಾರ್ಯದರ್ಶಿ ದಿನೇಶ್ ಕೆ. ವಿ ವಂದಿಸಿದರು.ಶಾಲೆಯ ಅಧ್ಯಾಪಕ, ಅಧ್ಯಾಪಿಕೆಯರು ಉಪಸ್ಥಿತರಿದ್ದರು.

Comments