ರಾಜ್ಯ ಸರಕಾರದ ಅನುಮತಿ ಪಡೆದ ಕೋವಿಡ್ ರೋಗಿಗಳು ಸ್ವಗೃಹಗಳಲ್ಲೇ ಚಿಕಿತ್ಸೆ ಪಡೆಯಬಹುದು: ಜಿಲ್ಲಾಧಿಕಾರಿ

 

ರಾಜ್ಯ ಸರಕಾರದ ಅನುಮತಿ ಪಡೆದ ಕೋವಿಡ್ ರೋಗಿಗಳು ಸ್ವಗೃಹಗಳಲ್ಲೇ ಚಿಕಿತ್ಸೆ ಪಡೆಯಬಹುದು: ಜಿಲ್ಲಾಧಿಕಾರಿ

 

ಕಾಸರಗೋಡು, .11: ರಾಜ್ಯ ಸರಕಾರದ ಅನುಮತಿ ಪಡೆದ ಕೋವಿಡ್ ರೋಗಿಗಳು ಸ್ವಗೃಹಗಳಲ್ಲೇ ಚಿಕಿತ್ಸೆ ಪಡೆಯಬಹುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.

                           ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆ ದಿನೇದಿನೇ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ. ಪಿ.ಸಿ.ಆರ್., ಆಂಟಿಜೆನ್ ಟೆಸ್ಟ್ ಗಳಲ್ಲಿ ಪಾಸಿಟಿವ್ ಕೇಸ್ ಪತ್ತೆಯಾದ, ಆದರೆ ರೋಗದ ಲಕ್ಷಣ ಹೊಂದದೇ ಇರುವ ಮಂದಿಗಳು, ಬಗ್ಗೆ ರಾಜ್ಯ ಸರಕಾರದ ಅನುಮತಿ ಪಡೆಯಬಹುದು ಎಂದು ಜಿಲ್ಲಾಧಿಕಾರಿ ನುಡಿದರು.

                       ಮನೆಗಳಲ್ಲಿ ಚಿಕಿತ್ಸೆ ಪಡೆಯುವ ರೋಗಿಗಳ ಶುಶ್ರೂಷೆ ಸರಿಯಾದ ದಿಶೆಯಲ್ಲಿ ಸಾಗುತ್ತಿರುವುದನ್ನು ಖಚಿತಪಡಿಸಿಕೊಳ್ಳುವ ಉದ್ದೇಶದಿಂದ ಟೆಲಿ ಮೆಡಿಸಿನ್ ಸಹಿತ ಎಲ್ಲ ಸೌಲಭ್ಯಗಳನ್ನೂ ಸಜ್ಜುಗೊಳಿಸಲಾಗುವುದು. ರೋಗಿಗಳ ಯೋಗಕ್ಷೇಮ ಇತ್ಯಾದಿ ವಿಚಾರಿಸುವ ನಿಟ್ಟಿನಲ್ಲಿ ಸೌಲಭ್ಯಗಳನ್ನು ಏರ್ಪಡಿಸಲಾಗುವುದು.

             ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳ ನಿಗಾ ಚುರುಕು

                              ಕೋವಿಡ್ ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಮನೆಗಳಲ್ಲಿ ವಾರ್ಡ್ ಮಟ್ಟದ ಜಾಗ್ರತಾ ಸಮಿತಿಗಳು ತಮ್ಮ ನಿಗಾ ಚುರುಕುಗೊಳಿಸಬೇಕು. ಮನೆಗಳ ಅಗತ್ಯದ ಎಲ್ಲ ಸೌಲಭ್ಯಗಳೂ(ಪ್ರತ್ಯೇಕ ಕೊಠಡಿ, ಶೌಚಾಲಯ ಸೌಕರ್ಯ ಸಹಿತ) ಇರುವ ಬಗ್ಗೆ ಖಚಿತಪಡಿಸಿಕೊಳ್ಳಬೇಕು. ತದನಂತರವಷ್ಟೇ ರೋಗಿಗಳು ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ಜಾಗ್ರತಾ ಸಮಿತಿಗಳು ಜಿಲ್ಲಾ ವೈದ್ಯಾಧಿಕಾರಿಗೆ ಶಿಫಾರಸು ಮಾಡಬಹುದು.

                              ಕಾಸರಗೋಡು ಜಿಲ್ಲೆಯ ಎಲ್ಲ ನಗರಸಭೆ, ಗ್ರಾಮಪಂಚಾಯತ್ ಗಳೂ ತಮ್ಮ ಸ್ವಂತ ಯೋಜನೆ ನಿಧಿ ಬಳಸಿ ಕನಿಷ್ಠ 10 ಫಿಗರ್ ಟಿಪ್ ಪಲ್ಸ್ ಆಕ್ಸೀ ಮೀಟರ್ ಖರೀದಿಸಿ ಪುನರ್ ಬಳಕೆ ಕ್ರಮದಲ್ಲಿ ಆಯಾ ಸ್ಥಳೀಯಾಡಳಿತ ಸಂಸ್ಥೆಗಳ ವ್ಯಾಪ್ತಿಯ


 ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಗಳಿಗೆ ತಾತ್ಕಾಲಿಕ ಬಳಕೆಗಾಗಿ ವಿತರಣೆ ನಡೆಸಬೇಕು. ಸಂಬಂಧ ನಗರಸಭೆ, ಗ್ರಾಮಪಂಚಾಯತ್ ಕಾರ್ಯದರ್ಶಿಗಳಿಗೆ ಹೊಣೆ ನೀಡಲಾಗಿದೆ. ಕೋವಿಡ್ ರೋಗಿಗಳು ಯಾವುದೇ ಕಾರಣಕ್ಕೆ ಇತರರನ್ನು ಸಂಪರ್ಕಿಸದಂತೆ ಪೊಲೀಸರು ಬಿಗಿ ನಿಗಾ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು.

                                21 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ 4283 ಕೋವಿಡ್ ಸೋಂಕು ಬಾಧಿತರು

                      ಈಗ ಕಾಸರಗೋಡು ಜಿಲ್ಲೆಯಲ್ಲಿ 21 ಸಿ.ಎಫ್.ಎಲ್.ಟಿ.ಸಿ.ಗಳಲ್ಲಿ 4283 ಕೋವಿಡ್ ಸೋಂಕು ಬಾಧಿತರು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಲಕ್ಷಣ ಹೊಂದಿರುವ ಮತ್ತು ಹೊಂದದೇ ಇರುವ ಸೋಂಕು ಬಾಧಿತರು ಸರಕಾರಿ ವ್ಯವಸ್ಥೆಗಳಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ಕೊರತೆಯ ಹಿನ್ನೆಲೆಯಲ್ಲಿ 10 ಸಿ.ಎಫ್.ಎಲ್.ಟಿ.ಸಿ. ಗಳಲ್ಲಿ 1090 ಹಾಸುಗೆಗಳಿರುವ ದಾಖಲಾತಿ ವ್ಯವಸ್ಥೆ ಇದೆ. ಹೆಚ್ಚುವರಿ ರೋಗಿಗಳನ್ನು ದಾಖಲಿಸಬೇಕಾಗಿ ಬಂದರೆ ಸಮಸ್ಯೆಯಾಗುವ ಹಿನ್ನೆಲೆಯಲ್ಲಿ ಸ್ವಗೃಹಗಳಲ್ಲಿ ಚಿಕಿತ್ಸೆ ಪಡೆಯುವ ವ್ಯವಸ್ಥೆ ನಡೆಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ನುಡಿದರು.

Comments