ಕರ್ನಾಟಕಕ್ಕೆ ಹೋಗಲು ಪಾಸ್: ಕೇರಳ ಸರಕಾರದಿಂದ ಜನರಿಗೆ ಮೋಸ ಮಾಡಲಾಗಿದೆ ಅಂತಾರಾಜ್ಯ ಯಾತ್ರೆಯ ನಿರ್ಬಂಧಗಳನ್ನು ತೆಗೆಯದಿದ್ದರೆ ಬಿಜೆಪಿ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಶ್ರೀಕಾಂತ್ ಮುನ್ನೆಚ್ಚರಿಕೆ

ಕರ್ನಾಟಕಕ್ಕೆ ಹೋಗಲು ಪಾಸ್: ಕೇರಳ ಸರಕಾರದಿಂದ  ಜನರಿಗೆ ಮೋಸ ಮಾಡಲಾಗಿದೆಅಂತಾರಾಜ್ಯ  ಯಾತ್ರೆಯ ನಿರ್ಬಂಧಗಳನ್ನು ತೆಗೆಯದಿದ್ದರೆ ಬಿಜೆಪಿ ಹೋರಾಟಕ್ಕೆ  ಇಳಿಯಬೇಕಾಗುತ್ತದೆ ಎಂದು  ಶ್ರೀಕಾಂತ್ ಮುನ್ನೆಚ್ಚರಿಕೆ 
ಕರ್ನಾಟಕಕ್ಕೆ ಹೋಗಲು ಪಾಸ್: ಕೇರಳ ಸರಕಾರದಿಂದ  ಜನರಿಗೆ ಮೋಸ ಮಾಡಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ. ಶ್ರೀಕಾಂತ್ ಆರೋಪಿಸಿದ್ದಾರೆ.
ಅಂತಾರಾಜ್ಯ ಯಾತ್ರೆಗೆ ಯಾವುದೇ ಪಾಸಿನ ಅವಶ್ಯಕತೆವಿಲ್ಲವೆಂದು  ಕೇಂದ್ರ ಹಾಗೂ ರಾಜ್ಯ ದುರಂತ ನಿವಾರಣ ಸಮಿತಿಗಳ ಮಾರ್ಗ ನಿರ್ದೇಶನಗಳನ್ನು ಉಲಂಘಿಸಿ ಕರ್ನಾಟಕಕ್ಕೆ ಹೋಗಲು ಕೆಲವು ವಿಶೇಷ ನಿರ್ಬಂಧಗಳನನ್ನು ಹೇರಿ  ದಿವಸ ಪಾಸ್ ನೀಡುತ್ತೆವೆ ಎಂದು 
ಕಾಸರಗೋಡು ಜಿಲ್ಲಾಡಳಿತ ವರ್ಗದ ತೀರ್ಮಾನ ಅಂಗೀಕರಿಸಲು ಸಾಧ್ಯವಿಲ್ಲವೆಂದು ಅವರು ತಿಳಿಸಿದರು. 


   ಜಿಲ್ಲೆಯವರಿಗೆ  ಕರ್ನಾಟಕಕ್ಕೆ ಹೋಗಲು 
ಯಾತ್ರಾ ಅನುಮತಿ ನೀಡಲಾಗುವುದೆಂಬ  ಕಂದಾಯ ಸಚಿವ   ಇ. ಚಂದ್ರಶೇಖರನ್ ಹಾಗೂ ಜಿಲ್ಲಾಡಳಿತದ  ಘೋಷಣೆ ಜನರ ಕಣ್ಣಲ್ಲಿ ಮಣ್ಣೆರಚುವ ತಂತ್ರ. ಕಂದಾಯ ಸಚಿವ ಇ. ಚಂದ್ರಶೇಖರರನ್ನು ಹಾಗೂ ಅಧಿಕಾರಿಗಳು   
 ರಾಜ್ಯ ದುರಂತ ನಿವಾರಣಾ ಅಧ್ಯಕ್ಷರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯ ಆದೇಶವನ್ನ  ಉಲ್ಲಂಘಿಸಿದ್ದಾರೆ. ನಿಬಂಧನೆಗಳೊಂದಿಗೆ  ಪಾಸ್ ನೀಡುವುದು ಕಾನೂನುಬಾಹಿರವೆಂದು ಶ್ರೀಕಾಂತ್ ಹೇಳಿದರು.

ಅಪ್ರಾಯೋಗಿಕ ವಿಧಾನಗಳು ಮತ್ತು ನಿರ್ಬಂಧಗಳನ್ನು ಹೇರುವ ಮೂಲಕ ಜನರನ್ನು ತೊಂದರೆಗೆ ಸಿಲುಕುಸುತ್ತಿದ್ದಾರೆ. ಜಿಲ್ಲೆಯ ಉಸ್ತುವಾರಿ ಸಚಿವ ಇ. ಚಂದ್ರಶೇಖರನ್ 
ಸಂಸದರು ಹಾಗು ಶಾಸಕರುಗಳು ಜನರಿಗೆ ಮೋಸ ಮಾಡುತ್ತಿದ್ದಾರೆಂದು ಶ್ರೀಕಾಂತ್ ಟೀಕಿಸಿದ್ದಾರೆ.

ಎಲ್ಲಾ ಪ್ರಮುಖ ಮಾರ್ಗಗಳಲ್ಲಿ ಅಂತರ್ ರಾಜ್ಯ ಯಾತ್ರೆಗೆ  ಯಾವುದೇ ನಿರ್ಬಂಧ ಹೇರದೆ  ಅನುಮತಿಯನ್ನು ನೀಡಬೇಕು ಎಂದು ಬಿಜಿಪಿ  ಒತ್ತಾಯಿಸಿದೆ.  ಅಂತಾರಾಜ್ಯ  ಯಾತ್ರೆಯ ನಿರ್ಬಂಧಗಳನ್ನು ತೆಗೆಯದಿದ್ದರೆ ಬಿಜೆಪಿ ಹೋರಾಟಕ್ಕೆ  ಇಳಿಯಬೇಕಾಗುತ್ತದೆ ಎಂದು  ಶ್ರೀಕಾಂತ್ ಮುನ್ನೆಚ್ಚರಿಕೆ ನೀಡಿದ್ದಾರೆ.

Comments