ಹಿಂದೂ ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು : ಅಡ್ವಾ ಶ್ರೀಕಾಂತ್

 ಹಿಂದೂ ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು : ಅಡ್ವಾ ಶ್ರೀಕಾಂತ್ 


ಹಿಂದೂ ದೇವಾಲಯ ಕಳ್ಳತನ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಕಳ್ಳತನ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸಬೇಕು.
ಆರಾಧನಾ ಅಲೆಗಳ ಮೇಲೆ ನಡೆಯುವ ಅತಿಕ್ರಮಣ ಅಧಿಕವಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಲಾಗಿದೆ.ಹಿಂದೂ ಶ್ರದ್ಧಾ ಕೇಂದ್ರಗಳ ಹೆಚ್ಚುತ್ತಿರುವ ಕಳ್ಳತನ ಪ್ರಕರಣಗಳ ಬಗ್ಗೆ ಪೊಲೀಸ್ ಇಲಾಖೆ ಹಾಗೂ ರಾಜ್ಯ ಸರಕಾರ ಗಂಭೀರವಾಗಿ ತಗೊಳ್ಳಬೇಕು.. ವಿಶೇಷ ಉನ್ನತ ತನಿಖಾ ತಂಡಗಳನ್ನು ರಚಿಸಬೇಕು.


ಲಾಕ್ ಡೌನ್ ಆರಂಭದ ನಂತರ ಮಂಜೇಶ್ವರ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಹಲವಾರು ಕಳ್ಳತನಗಳು ನಡೆದಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ . ಪೊಲೀಸರ ನಿಷ್ಕ್ರಿಯತೆ ಕಳ್ಳತನ ಅಧಿಕವಾಗಲು ಕಾರಣ.

ಹಿಂದೂ ಆರಾಧನಾಲಯಗಳಿಗೆ ಸೂಕ್ತ ಭದ್ರತೆಯನ್ನು ಒದಗಿಸಬೇಕೆಂದು ಸರಕಾರವನ್ನು ಒತ್ತಾಯಮದಲಾಗಿದೆ. ಕಳ್ಳತನ ಪ್ರಕರಣದಲ್ಲಿ ದೇವಸ್ಥಾನಗಳಿಗೆ ಆದ ನಷ್ಟ ಭರಿಸಲು ದೇವಸ್ವಂ ಬೋರ್ಡ್ ಮತ್ತು ರಾಜ್ಯ ಸರಕಾರ ನಷ್ಟ ಪರಿಹಾರ ನೀಡಬೇಕು.

Comments