ಮಂಗಳೂರು: ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಬಿರುದು ಪ್ರದಾನ

ಮಂಗಳೂರು: ಗಾಯಕ ಜಗದೀಶ್ ಪುತ್ತೂರು ಅವರಿಗೆ ತುಳುನಾಡ ಗಾನ ಗಂಧರ್ವ ಬಿರುದು ಪ್ರದಾನ

ಮಂಗಳೂರು: ಹಾಡು ಕರ್ನಾಟಕ ರಿಯಾಲಿಟಿ ಶೋ ಖ್ಯಾತಿಯ ಜಗದೀಶ್ ಪುತ್ತೂರು ಅವರಿಗೆ ಒಮನ್ ತುಳುವೆರ್ ಸಂಘಟನೆಯು "ತುಳುನಾಡ ಗಾನ ಗಂಧರ್ವ " ಬಿರುದು ನೀಡಿ ಅಭಿನಂದಿಸಿದೆ.

ಮಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಈ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಗಣ್ಯರ ಸಮ್ಮುಖದಲ್ಲಿ ಶಾಲು ಹೊದಿಸಿ, 'ತುಳುನಾಡ ಗಾನ ಗಂಧರ್ವ' ಬಿರುದು ನೀಡಿ ಗೌರವಿಸಲಾಯಿತು.

ಈ ವೇಳೆ ತುಳು ಚಿತ್ರನಿರ್ದೇಶಕ ವಿಜಯಕುಮಾರ್ ಕೊಡಿಯಲ್ ಬೈಲ್, ತುಳು ಚಿತ್ರ ನಿರ್ಮಾಪಕ, ನಿರ್ದೇಶಕ ಕಿಶೋರ್ ಡಿ. ಶೆಟ್ಟಿ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ ಸಾರ್ ಹಾಗೂ ಇನ್ನಿತರ ತುಳು ಚಿತ್ರರಂಗದ ಕಲಾವಿದರು ಭಾಗವಹಿಸಿದ್ದರು

Comments