- Get link
- X
- Other Apps
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರನ್ನು ಭೇಟಿಯಾಗಿ ಮನವಿ
- Get link
- X
- Other Apps
ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮನ್ನಣೆ ನೀಡಬೇಕೆಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಬಿ.ಎಸ್ ಯಡಿಯೂರಪ್ಪರವರನ್ನು ಭೇಟಿಯಾಗಿ ಮನವಿ
ಈ ಸಂದರ್ಭದಲ್ಲಿ ದ.ಕ.ಜಿಲ್ಲಾ ಉಸ್ತುವಾರಿ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ, ಮೂಲ್ಕಿ- ಮೂಡಬಿದ್ರೆ ಶಾಸಕರಾದ ಉಮಾನಾಥ ಕೋಟ್ಯಾನ್, ಪುತ್ತೂರು ಶಾಸಕರಾದ ಸಂಜೀವ ಮಟಂದೂರು, ವಿಧಾನ ಪರಿಷತ್ ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಹಾಗೂ ಶಾಂತಾರಾಮ ಸಿದ್ದಿ ಉಪಸ್ಥಿತರಿದ್ದರು
ನಮ್ಮ ದೇಶದಲ್ಲಿನ ಬಹುತೇಕ ರಾಜ್ಯಗಳಲ್ಲಿ ತಮ್ಮ ತಮ್ಮ ರಾಜ್ಯದಲ್ಲಿನ ಉತ್ತಮ ಸಾಂಸ್ಕೃತಿಕ ಹಿನ್ನೆಲೆಯುಳ್ಳ ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಯನ್ನಾಗಿ ಸಂವಿಧಾನದ ಆರ್ಟಿಕಲ್ 345- ಬಿ ಪ್ರಕಾರ ಘೋಷಿಸಿಕೊಂಡಿದೆ. ಕಳೆದ 2011ನೇ ಜನಗಣತಿ ಪ್ರಕಾರ ಸುಮಾರು18.05 ಲಕ್ಷ ಜನರು ಅಧಿಕೃತವಾಗಿ ತುಳು ಭಾಷೆಯನ್ನು ಮಾತನಾಡುತ್ತಾರೆ.
ಕರ್ನಾಟಕ ತುಳು ಆಕಾಡೆಮಿ ಹಾಗೂ ತುಳು ಸಂಘ ಸಂಸ್ಥೆಗಳ ಪ್ರಕಾರ ಕರ್ನಾಟಕದಲ್ಲಿ ಬೆಂಗಳೂರು ಸೇರಿದಂತೆ ಸರಿ ಸುಮಾರು 40 ಲಕ್ಷಕ್ಕೂ ಅಧಿಕ ತುಳು ಭಾಷಿಕರಿದ್ದು ರಾಷ್ಟ್ರೀಯ ಮತ್ತು ಜಾಗತಿಕ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸುಮಾರು ಒಂದೂವರೆ ಕೋಟಿಗಿಂತಲೂ ಅಧಿಕ ತುಳು ಭಾಷಿಕರಿರುವುದನ್ನು ಗುರುತಿಸಲಾಗಿರುತ್ತದೆ.
ತಮ್ಮ ಅವಗಾಹಣೆಗಾಗಿ ಸಲ್ಲಿಸಿರುವ ಮಾಹಿತಿಗಳನ್ನು ಅವಲೋಕಿಸಿ ಸಕಾಲದಲ್ಲಿ ತುಳು ಭಾಷೆಯನ್ನು ಕರ್ನಾಟಕದ ಅಧಿಕೃತ ಭಾಷೆ ಎಂದು ಸಂವಿಧಾನದ ಆರ್ಟಿಕಲ್ 345 ರ ಪ್ರಕಾರ ಘೋಷಿಸಲು ರಾಜ್ಯ ಸರ್ಕಾರವು ಅನುಸರಿಸಬೇಕಾದ ಮತ್ತು ಈಗಾಗಲೇ ಈ ಕುರಿತಾಗಿ ಕೈಗೊಂಡ ಕ್ರಮಗಳೊಂದಿಗೆ ಸಾಂವಿಧಾನಿಕ ನೀತಿ ನಿಯಮಗಳ ವ್ಯಾಪ್ತಿಯಲ್ಲಿ ಕೇಂದ್ರ ಸರ್ಕಾರದವರು ಅನುಮೋದನೆಯನ್ನು ನೀಡುವಂತೆ ಆಗ್ರಹಿಸುವುದರ ಮೂಲಕ ತುಳುನಾಡಿನ ಸಮಸ್ತರ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಬೇಕೆಂದು ಕರಾವಳಿ ಜಿಲ್ಲೆಯ ಶಾಸಕರುಗಳೆಲ್ಲರೂ ತಮ್ಮಲ್ಲಿ ವಿಜ್ಞಾಪಿಸಿಕೊಳ್ಳುತ್ತೇವೆ.
ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ಈ ಕುರಿತಾದ ಸಾಂವಿಧಾನಿಕ ಕಾನೂನುಗಳ ಪ್ರಕಾರ ಪ್ರಾಸ್ಥಾವನೆಯನ್ನು ಮಂಡಿಸಿ ಅನುಮೋದನೆಯನ್ನು ಪಡೆದು ಕೇಂದ್ರ ಸರ್ಕಾರಕ್ಕೆ ಸಲ್ಲಿಸುವ ಮತ್ತು ಅಲ್ಲಿಂದ ಅನುಮೋದನೆ ಪಡೆಯುವ ನಿಟ್ಟಿನಲ್ಲಿ ಕ್ರಮಗಳನ್ನು ಅತ್ಯಗತ್ಯವಾಗಿ ಕೈಗೊಳ್ಳಬೇಕಾಗಿ ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪ ನವರಲ್ಲಿ ವಿನಂತಿಸಿಕೊಳ್ಳಲಾಗಿದೆ.
- Get link
- X
- Other Apps
Comments
Post a Comment