ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್ ಶ್ರೀ ರಾಜ್ ಮೋಹನ್

ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ ಕಾಂಗ್ರೆಸ್ ಶ್ರೀ ರಾಜ್ ಮೋಹನ್ 
ಉನ್ನಿತನ್:ಕೆಪಿಸಿಸಿ  ನಿರ್ದೇಶನದ ಪ್ರಕಾರ ಪಂಚಾಯತ್ ಚುನಾವಣೆಗೆ ಪೂರ್ವಭಾವಿಯಾಗಿ ಬದಿಯಡ್ಕ ಮಂಡಲ ಕಾಂಗ್ರೆಸ್ ನೇತೃತ್ವದಲ್ಲಿ ದಿಶಾ ತರಬೇತಿ ಶಿಬಿರ ಸಂಸ್ಕೃತಿ ಭವನ ಬದಿಯಡ್ಕದಲ್ಲಿ ಜರಗಿತು,ಶಿಬಿರವನ್ನು ಕಾಸರಗೋಡು ಸಂಸದ ಶ್ರೀ ರಾಜ್ ಮೋಹನ್ ಉನ್ನಿತನ್ ಉದ್ಘಾಟಿಸಿ ಮಾತನಾಡಿ ಕಾಂಗ್ರೆಸ್ ಪಕ್ಷ ಭಾರತಕ್ಕೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಪಕ್ಷ,ರಾಜಕೀಯ ಇತಿಹಾಸ ಹೊಂದಿರುವ ಪಕ್ಷ ಆದಕಾರಣ ಎಲ್ಲರೂ  ಪಂಚಾಯತ್ ಚುನಾವಣೆಗೆ ಸಜ್ಜಾಗಿ ಮತ್ತೊಮ್ಮೆ ಕಾಂಗ್ರೆಸ್ ಪಕ್ಷವನ್ನುಬದಿಯಡ್ಕ ಪಂಚಾಯತ್ ನಲ್ಲಿ ಆಡಳಿತಕ್ಕೆತರಲು ಎಲ್ಲರೂ ಶ್ರಮಿಸಬೇಕು ಎಂದು ಕರೆ ಕೊಟ್ಟರು. ಬದಿಯಡ್ಕ ಮಂಡಲ ಅಧ್ಯಕ್ಷ ನಾರಾಯಣ ಮಣಿಯಾಣಿ ಅಧ್ಯಕ್ಷತೆ ವಹಿಸಿದ್ದರು

ಡಿಸಿಸಿ ಕಾರ್ಯದರ್ಶಿಗಳಾದ ಶ್ರೀ ಜೇಮ್ಸ್,ಶ್ರೀಸುರೇಶ್,ಬ್ಲಾಕ್ ಉಪಾಧ್ಯಕ್ಷ  ಶ್ರೀ ಪಿಜಿ ಚಂದ್ರಹಾಸ ರೈ , ಕುಂಜಾರ್ ಮಹಮ್ಮದ್ ಹಾಜಿ, ಕಾರ್ಯಕ್ರಮಕ್ಕೆ ಶುಭಾಶಂಸನೆ ಮಾಡಿದರು,ಬ್ಲಾಕ್ ಕಾಂಗ್ರೆಸ್ ಖಜಾಂಚಿ ಖಾದರ್ ಮಾನ್ಯ, ಮಂಡಲ ಉಪಾಧ್ಯಕ್ಷ ಪಿಜಿ ಜಗನ್ನಾಥ ರೈ,ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಶಾಪಿ ಗೊಲಿಯಡ್ಕ, ಚಂದ್ರಹಾಸ ಮಾಸ್ಟರ್, ಕಾಸರಗೋಡ್ ಮಂಡಲಯೂತ್ ಕಾಂಗ್ರೆಸ್   ಅಧ್ಯಕ್ಷ ಮ್ಯಾಥ್ಯೂಸ್, ಯೂತ್ ಕಾಂಗ್ರೆಸ್ ಬದಿಯಡ್ಕ ಮಂಡಲ ಅಧ್ಯಕ್ಷ ಶಾಫಿ ಪಯ್ಯಲ್ದಕ, ವಾರ್ಡ್ ಪದಾಧಿಕಾರಿಗಳು ಯೂತ್ ಕಾಂಗ್ರೆಸ್ ಪದಾಧಿಕಾರಿಗಳು, ಪಂಚಾಯತ್ ಸದಸ್ಯರು ಉಪಸ್ಥಿತರಿದ್ದರು.ಮಂಡಲ ಕಾಂಗ್ರೆಸ್ ಉಪಾಧ್ಯಕ್ಷ ಶ್ರೀ ಗಂಗಾಧರ ಗೋಳಿಯಡ್ಕ ಸ್ವಾಗತಿಸಿ ಮಂಡಲ್ ಉಪಾಧ್ಯಕ್ಷ ಶ್ರೀ ಶ್ಯಾಮ್ ಪ್ರಸಾದ್ ಮಾನ್ಯ ವಂದಿಸಿದರು

Comments