ಅಂತರಾಜ್ಯ ಸಂಚಾರಕ್ಕೆ ನಿಯಂತ್ರಣ, ಪಾಸ್ ವ್ಯವಸ್ಥೆ ಸಲ್ಲದು:ಕೇಂದ್ರ ಸರಕಾರ

ಅಂತರಾಜ್ಯ ಸಂಚಾರಕ್ಕೆ ನಿಯಂತ್ರಣ, ಪಾಸ್ ವ್ಯವಸ್ಥೆ ಸಲ್ಲದು:ಕೇಂದ್ರ ಸರಕಾರ

ಅಂತಾರಾಜ್ಯ ಸಂಚಾರ ತಡೆಯುವಿಕೆ ಸಲ್ಲದು ಎಂದು ಕೇಂದ್ರ ಸರಕಾರ ಆದೇಶ ಹೊರಡಿಸಿದೆ. ಜನರು ಹಾಗೂ ಸರಕುಗಳ ಅಂತರಾಜ್ಯ ಸಂಚಾರ ಹಾಗೂ ಸಾಗಾಟಕ್ಕೆ ಪ್ರತ್ಯೇಕ ಅನುಮತಿ ಅಥವಾ ಪಾಸ್ ಬೇಕಿಲ್ಲ ಎಂದು ಸ್ಪಷ್ಟಪಡಿಸಿದೆ.
ಕೇಂದ್ರ ಗೃಹ ಕಾರ್ಯದರ್ಶಿ ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರಕಾರಗಳಿಗೆ ಶನಿವಾರ ಬರೆದ ಪತ್ರದಲ್ಲಿ ಅನ್ಲಾಕ್-3  ಕೇಂದ್ರ ಮಾರ್ಗಸೂಚಿಗಳ ಅಡಿಯಲ್ಲಿ ಅಥವಾ ಕೊರೋನಾ ವೈರಸ್ ಲಾಕ್ಡೌನನ್ನು ಸಡಿಲಗೊಳಿಸುವ ಮೂರನೇ ಹಂತದಲ್ಲಿ ರಾಜ್ಯದ ಒಳಗೆ ಯಾ ಹೊರಗಿನ ಸಂಚಾರದ ಮೇಲೆ ಯಾವುದೇ ನಿರ್ಬಂಧ ಹೇರುವಂತಿಲ್ಲ ಎಂದು  ನೆನಪಿಸಿದ್ದಾರೆ.
ಗೃಹ ಕಾರ್ಯದರ್ಶಿ ಅಜಯ್ ಕುಮಾರ್ ಭಲ್ಲಾ ಅವರು ಇಂತಹ ನಿರ್ಬಂಧಗಳು ನಿರಂತರವಾಗಿ ಹೇರುವುದು ವಿಪತ್ತು ನಿರ್ವಹಣಾ ಕಾಯ್ದೆ 2005ರ ಸಂಬಂಧಿತ ನಿಬಂಧನೆಗಳ ಅಡಿಯಲ್ಲಿ ಹೊರಡಿಸಲಾದ ಕೇಂದ್ರ ಗೃಹಸಚಿವಾಲಯದ  ಮಾರ್ಗ ಸೂಚಿಗಳ ಉಲ್ಲಂಘನೆಯಾಗಿದೆ ಎಂದು ತಮ್ಮ ಪತ್ರದಲ್ಲಿ ಎಚ್ಚರಿಸಿದ್ದಾರೆ.

Comments