- Get link
- X
- Other Apps
ಇಂಟರ್ನೆಟ್ ಗಾಗಿ ಬೆಟ್ಟದ ಮೇಲೆ ಟೆಂಟ್ ಹಾಕಿಕೊಂಡು ಓದುತ್ತಿದ್ದ ಹೆಣ್ಣು ಮಗಳಿಗೆ ಸೋನು ಸೂದ್ ಕೊಟ್ಟ ಉಡುಗೊರೆ ಏನು ಗೊತ್ತಾ? ಶಾಕ್ ಆಗ್ತೀರಾ..
- Get link
- X
- Other Apps
ಇಂಟರ್ನೆಟ್ ಗಾಗಿ ಬೆಟ್ಟದ ಮೇಲೆ ಟೆಂಟ್ ಹಾಕಿಕೊಂಡು ಓದುತ್ತಿದ್ದ ಹೆಣ್ಣು ಮಗಳಿಗೆ ಸೋನು ಸೂದ್ ಕೊಟ್ಟ ಉಡುಗೊರೆ ಏನು ಗೊತ್ತಾ? ಶಾಕ್ ಆಗ್ತೀರಾ..
ಇದನ್ನು ನೋಡಿದ ಸೋನು ಸೂದ್ ಅವರು ತಕ್ಷಣ ಈಕೆಯ ಕಷ್ಟಕ್ಕೆ ಸ್ಪಂದಿಸಿ ಇದೀಗ ದೊಡ್ಡ ಮಟ್ಟದಲ್ಲಿ ನೆರವಾಗಿದ್ದಾರೆ.. ಹೌದು ಭಗವಂತ ಕೆಲವೊಮ್ಮೆ ಹಟ ಛಲ ಅನ್ನೋದನ್ನ ಬಡವರಲ್ಲಿಯೇ ತುಂಬುವನೇನೋ ಎನಿಸುತ್ತದೆ.. ಹೌದು ಈಕೆಯ ಹೆಸರು ಸ್ವಪ್ನಾಳಿ ಗೋಪಿನಾಥ್.. ಮಹರಾಷ್ಟ್ರಾದ ಸಿಂಧುದುರ್ಗಾ ಎಂಬ ಹಳ್ಳಿಯ ಹೆಣ್ಣು ಮಗಳು.. ಡಾಕ್ಟರ್ ಆಗಬೇಕೆಂಬ ಕನಸು ಹೊತ್ತವಳು.. ಆದರೆ ಈಕೆಯ ಕನಸಿಗೆ ಅನೇಕ ಅಡೆತಡೆಗಳು ಎದುರಾದವು.. ಆದರೆ ಅದೆಲ್ಲವನ್ನು ಈಕೆ ಮೆಟ್ಟಿ ನಿಂತಿದ್ದಾಳೆ.. ಪಿಯುಸಿಯಲ್ಲಿ 98 % ಅಂಕ ಪಡೆದು ವೈದ್ಯೆಯಾಗಲು ಸಿ ಇ ಟಿ ಗೆ ತಯಾರಿ ನಡೆಸುತ್ತಿದ್ದಾಳೆ..
ಕೊರೊನಾ ಕಾರಣದಿಂದಾಗಿ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಆನ್ಲೈನ್ ತರಗತಿಗಳು ನಡೆಯುತ್ತಿರುವ ವಿಚಾರ ತಿಳಿದೇ ಇದೆ.. ಆನ್ಲೈನ್ ತರಗತಿ ಒಳ್ಳೆಯದೇ ಆದರೂ ಅದೆಷ್ಟೋ ಬಡ ವಿದ್ಯಾರ್ಥಿಗಳಿಗೆ ಇದರಿಂದ ಅನೇಕ ಕಷ್ಟಗಳು ಎದುರಾಗಿವೆ.. ಬಡತನದಿಂದ ಫೋನ್ ಕೊಳ್ಳಲು ಸಹ ಆಗದ ಅದೆಷ್ಟೋ ಉದಾಹರಣೆಗಳಿವೆ.. ಇನ್ನು ಹಳ್ಳಿಗಳಲ್ಲಿ ಸರಿಯಾಗಿ ಇಂಟರ್ನೆಟ್ ವ್ಯವಸ್ಥೆ ಕೂಡ ಇರುವುದಿಲ್ಲ..
ಇನ್ನು ಈ ಹೆಣ್ಣು ಮಗಳ ವಿಚಾರಕ್ಕೆ ಬಂದರೆ.. ಸ್ವಪ್ನಾಲಿ ಅವರ ಹಳ್ಳಿಯಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲ.. ಆನ್ಲೈನ್ ಕ್ಲಾಸ್ ಗಳಿಗೆ ಬಹಳಷ್ಟು ತೊಂದರೆಯಾಗುತಿತ್ತು.. ಆದರೆ ಛಲ ಬಿಡದ ಸ್ವಪ್ನಾಳಿ ತಾನೇ ಹತ್ತಿರದ ಬೆಟ್ಟದ ಮೇಲೆ ಟೆಂಟ್ ಒಂದನ್ನು ನಿರ್ಮಿಸಿಕೊಂಡಿದ್ದಾಳೆ.. ಸದ್ಯ ಅಲ್ಲಿ ಆಕೆಯ ಫೋನ್ ಗೆ ನೆಟ್ವರ್ಕ್ ಸಿಗುತಿದ್ದು ಅದರ ಮೂಲಕ ಆನ್ಲೈನ್ ತರಗತಿಯನ್ನು ಮ್ಯಾನೇಜ್ ಮಾಡುತ್ತಿದ್ದಾಳೆ.. ಅಷ್ಟೇ ಅಲ್ಲದೇ ಬೆಳಿಗ್ಗೆ 7 ಕ್ಕೆ ಆಕೆ ಈ ಬೆಟ್ಟದ ಮೇಲೆ ಬಂದರೆ ಇನ್ನು ಅಲ್ಲಿಂದ ತೆರಳುವುದು ರಾತ್ರಿ 7ರ ನಂತರವೇ.. ಅಲ್ಲಿಯವರೆಗೂ ಟೆಂಟ್ ನಲ್ಲಿಯೇ ಕೂತು ಓದಿಕೊಳ್ಳುತ್ತಾಳೆ.. ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತುದ್ದಂತೆ ನಟ ಸೋನು ಸೂದ್ ಅವರ ಕಣ್ಣಿಗೆ ಬಿದ್ದಿದೆ..
ತಕ್ಷಣ ಈಕೆಯ ಮಾಹಿತಿ ಕೊಡಿ ಎಂದಿದ್ದರು.. ಅದೇ ರೀತಿ ಆ ಹೆಣ್ಣು ಮಗಳ ಮಾಹಿತಿ ಸಿಕ್ಕ ಕೂಡಲೇ ಆಕೆಯ ಸಂಪೂರ್ಣ ಹಳ್ಳಿಗೆ ಇದೀಗ ವೈಫೈ ವ್ಯವಸ್ಥೆ ಮಾಡಿದ್ದಾರೆ.. ಹೌದು ತನ್ನ ಪರಿಶ್ರಮದಿಂದ ಜೀವನದಲ್ಲಿ ಓದಿ ವೈದ್ಯೆಯಾಗಬೇಕೆಂಬ ಸ್ವಪ್ನಾಳಿ ಕನಸಿಗೆ ಸೋನು ಸೂದ್ ನೀರೆರೆದಿದ್ದಾರೆ.. ಸ್ವಪ್ನಾಲಿ ತರಹದ ಇನ್ನಷ್ಟು ವಿದ್ಯಾರ್ಥಿಗಳು ಹಳ್ಳಿಗೆ ಇಂಟರ್ನೆಟ್ ಬಂದ ಕಾರಣ ಸಂತೋಷ ಪಟ್ಟಿದ್ದಾರೆ.. ಇದೀಗ ನೆಮ್ಮದಿಯಾಗಿ ಮನೆಯಲ್ಲಿಯೇ ಕೂತು ಆನ್ಲೈನ್ ತರಗತಿಗಳಿಂದ ಕಲಿಯಬಹುದಾಗಿದೆ.. ಮಳೆ ಗಾಳಿ ಚಳಿ ಎನ್ನದೇ ಬೆಟ್ಟದ ಮೇಲೆ ಟೆಂಟ್ ಹಾಕಿಕೊಂಡು ಕಲಿಯುತ್ತಿದ್ದ ಸ್ವಪ್ನಾಲಿಗೆ ಸೋನು ಸೂದ್ ಅವರಿಂದ ಈ ಉಡುಗೊರೆ ದೊರೆತದ್ದಕ್ಕೆ ಜನರು ಸೋನು ಸೂದ್ ಅವರ ನಡೆಗೆ ಮೆಚ್ಚುಗೆಯ ಮಹಾಪೂರವನ್ನೇ ಹರಿಸಿದ್ದಾರೆ.. ಸಾಧಿಸಬೇಕೆಂಬ ಛಲವುಳ್ಳ ಸ್ವಪ್ನಾಲಿ ಅವರಿಗೆ ಶುಭವಾಗಲಿ.. ಸ್ವಪ್ನಾಲಿ ಕನಸಿಗೆ ನೀರೆರೆದ ಸೋನು ಸೂದ್ ಅವರನ್ನು ದೇವರು ಚೆನ್ನಾಗಿಟ್ಟಿರಲಿ..
Source : starnews team
.
- Get link
- X
- Other Apps
Comments
Post a Comment