ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ತೆರೆದು ಜನರಿಗೆ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್, ಕೇಂದ್ರ ಸರಕಾರದ ಆದೇಶಗಳನ್ನು ಪಾಲಿಸಲು ಪಿಣರಾಯಿ ಸರಕಾರ ತಯಾರಾಗದಿದ್ದಲ್ಲಿ ಬಿಜೆಪಿ ಕಾನೂನು ಉಲ್ಲಂಘನಾ ಆಂದೋಲವನ್ನು ಆರಂಭಿಸಲಿದೆ.

ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ತೆರೆದು ಜನರಿಗೆ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್
ಮೋದಿ ಸರಕಾರದ ಆದೇಶಗಳನ್ನು ಪಾಲಿಸಲು ಪಿಣರಾಯಿ ಸರಕಾರ ತಯಾರಾಗದಿದ್ದಲ್ಲಿ  ಬಿಜೆಪಿ ಕಾನೂನು ಉಲ್ಲಂಘನಾ ಆಂದೋಲವನ್ನು ಆರಂಭಿಸಲಿದೆ.

ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಪಾಸ್ ಅಥವಾ ಅನುಮತಿ ಅಗತ್ಯವಿಲ್ಲ ಎಂದು ಕೇಂದ್ರ ಗ್ರಹ ಖಾತೆ ಕಾರ್ಯದರ್ಶಿರಾಜ್ಯ ಮುಖ್ಯ ಕಾರ್ಯದರ್ಶಿಗಳಿಗೆ ಕಟ್ಟುನಿಟ್ಟಿನ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಕಾಸರಗೋಡು ಜಿಲ್ಲೆಯ ಎಲ್ಲಾ ಗಡಿಗಳನ್ನು ತೆರೆದು ಜನರಿಗೆ ಮುಕ್ತ ಸಂಚಾರ ಸ್ವಾತಂತ್ರ್ಯವನ್ನು ನೀಡಬೇಕೆಂದು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಕೇರಳ ರಾಜ್ಯ ಸರಕಾರವನ್ನು ಆಗ್ರಹಿಸಿದ್ದಾರೆ. ಕೇಂದ್ರದ ಆದೇಶದ ಪಾಲನೆ ಕೂಡಲೇ ಮಾಡಬೇಕು.ಕಾಸರಗೋಡು ಜಿಲ್ಲೆಯ ಜನರು ಅನುಭವಿಸುತ್ತಿರುವ ಸಂಕಷ್ಟಕ್ಕೆ ಶೀಘ್ರವೇ ಪರಿಹಾರ ಕಾಣಲು ರಾಜ್ಯ ಸರಕಾರ ತಯಾರಾಗ ಬೇಕೆಂದು ಶ್ರೀಕಾಂತ್ ಆಗ್ರಹಿಸಿದ್ದಾರೆ.
ಅನ್ ಲಾಕ್  03 ಮಾರ್ಗಸೂಚಿ ಪ್ರಕಾರ  ಅಂತಾರಾಜ್ಯ ಪ್ರಯಾಣಕ್ಕೆ ಪಾಸಿನ ಅಗತ್ಯವಿಲ್ಲ ಎಂದು ತಿಳಿಸಿದರು ಕಾಸರಗೋಡು ಜಿಲ್ಲೆಯಲ್ಲಿ ಇದಕ್ಕೆ ವಿರುದ್ಧವಾಗಿ ಕಟ್ಟನಿಟ್ಟಿನ ಷರತ್ತುಗಳೊಂದಿಗೆ ಪಾಸಿನ ವ್ಯವಸ್ಥೆಯನ್ನು ಮಾಡಿರುವುದು ಕಾನೂನುಬಾಹಿರವೆಂದು  ಕೇಂದ್ರದ ಹೊಸ ಆದೇಶದೊಂದಿಗೆ ಸ್ಪಷ್ಟವಾಗಿದೆ ಎಂದು ಶ್ರೀಕಾಂತ್ ಹೇಳಿದರು. ಮೋದಿ ಸರಕಾರದ ಆದೇಶಗಳನ್ನು ಪಾಲಿಸಲು ಪಿಣರಾಯಿ ಸರಕಾರ ತಯಾರಾಗದಿದ್ದಲ್ಲಿ  ಬಿಜೆಪಿ ಕಾನೂನು ಉಲ್ಲಂಘನಾ ಆಂದೋಲವನ್ನು ಆರಂಭಿಸಲಿದೆ ಎಂದು ಅವರು  ತಿಳಿಸಿದರು. ಕಾಸರಗೋಡು ಜಿಲ್ಲೆಯ ಜನರಲ್ಲಿ ತೋರುವ ಮಲತಾಯಿ ಧೋರಣೆಯನ್ನು ಕೊನೆಗಾಣಿಸಬೇಕೆಂದು ಶ್ರೀಕಾಂತ್   ಆಗ್ರಹಿಸಿದ್ದಾರೆ.

Comments

  1. ನಿಜಾ...ಕಾಸರಗೋಡಿಗರಿಗೆ ತುಂಬಾ ಕಷ್ಟವಾಗಿದೆ‌‌.

    ReplyDelete
  2. Still we thinking that we are in saudi Arabia.with out passport and proper Visa we can not get out from KSA

    ReplyDelete

Post a Comment