ಅಂತಾರಾಜ್ಯ ಪ್ರಯಾಣ ನಿಷೇಧ : ಗಡಿಯಲ್ಲಿರುವ ಮಣ್ಣನ್ನು ಸರಕಾರ ತೆಗೆದುಹಾಕದಿದ್ದರೆ ಸ್ವಾತಂತ್ರ್ಯ ದಿನದಂದು ಗಡಿ ಮಣ್ಣು ತೆರವು ಮಾಡಿ ಪ್ರತಿಭಟನೆ :ಯುವಮೋರ್ಚಾ

ಅಂತಾರಾಜ್ಯ  ಪ್ರಯಾಣ ನಿಷೇಧ -ಗಡಿಯಲ್ಲಿರುವ ಮಣ್ಣನ್ನು ಸರಕಾರ ತೆಗೆದುಹಾಕದಿದ್ದರೆ ಸ್ವಾತಂತ್ರ್ಯ ದಿನದಂದು ಗಡಿ ಮಣ್ಣು ತೆರವು ಮಾಡಿ ಪ್ರತಿಭಟನೆ :ಯುವಮೋರ್ಚಾ

 ಕಾಸರಗೋಡು:
 ಕೇರಳ-ಕರ್ನಾಟಕ ಗಡಿ ರಸ್ತೆಗಳಲ್ಲಿ ಹಾಕಿರುವ  ಮಣ್ಣನ್ನು ಸರ್ಕಾರ ತೆಗೆಯದಿದ್ದರೆ ಸ್ವಾತಂತ್ರ್ಯ ದಿನದಂದು ಮಣ್ಣು ತೆರವುಗೊಳಿಸುವ ಆಂದೋಲನಕ್ಕೆ ಯುವಮೋರ್ಚಾ ನಿರ್ಧಾರ .
ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ಯುವ ಮೋರ್ಚಾ ಜಿಲ್ಲಾ ನಾಯಕರ ಸಭೆ ಈ ಬಗ್ಗೆ ನಿರ್ಣಯ ಕೈಗೊಂಡಿದೆ. ಕೇಂದ್ರ ಸರ್ಕಾರ ಮತ್ತು ರಾಜ್ಯದ ಮುಖ್ಯ ಕಾರ್ಯದರ್ಶಿಯ ಅನ್ ಲಾಕ್ 03 ಮಾರ್ಗಸೂಚಿಗಳ ಪ್ರಕಾರ, ಅಂತರರಾಜ್ಯ ಪ್ರಯಾಣಕ್ಕೆ ಯಾವುದೇ  ಅನುಮತಿ ಅಗತ್ಯವಿಲ್ಲ. 
ಆದರೆ, ಕಾಸರಗೋಡು ಜಿಲ್ಲೆಯಲ್ಲಿ ಷರತ್ತುಬದ್ಧ ಅಂತರರಾಜ್ಯ ಪ್ರಯಾಣ ಪರವಾನಗಿ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಯುವ ಮೋರ್ಚಾ ನೇತಾರರು ಆರೋಪಿಸಿದ್ದಾರೆ. ಪಾಸ್ ನೀಡಲು ಅವೈಜ್ಞಾನಿಕ ಮತ್ತು ಅಪ್ರಾಯೋಗಿಕ ಷರತ್ತುಗಳನ್ನು ವಿಧಿಸಲಾಗಿದೆ. ಇಂತಹ ಕಾನೂನು ಬಾಹಿರ ಶರತ್ತುಗಳನ್ನು ಒಪ್ಪಲು ಸಾಧ್ಯವಿಲ್ಲ. ನೂರಾರು ಜನರ ಮೇಲೆ ಪರಿಣಾಮ ಬೀರುವ ಈ ಸಮಸ್ಯೆಯನ್ನು ಕೂಡಲೇ ಬಗೆಹರಿಸಬೇಕೆಂದು ಯುವಮೋರ್ಚಾದ ಜಿಲ್ಲಾ ಸಮಿತಿ ಆಗ್ರಹಿಸಿದೆ.

 " ಗಡಿಯನ್ನು ತೆರೆಯಲು ನಿಮಗೂ ಸ್ಪಂದಿಸುಬಹುದು". ಎಂಬ ಮೆಗಾ-ಸೋಷಿಯಲ್ ಮೀಡಿಯಾ ಅಭಿಯಾನವನ್ನು ಯುವ ಮೋರ್ಚಾ  ಪ್ರಾರಂಬಿಸಲಿದೆ.

ಯುವ ಮೋರ್ಚಾ  ಜಿಲ್ಲಾ ಸಮಿತಿ  ಸಭೆಯನ್ನು ಬಿಜೆಪಿ ಜಿಲ್ಲಾಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಮೋರ್ಚಾ ಜಿಲ್ಲಾಧ್ಯಕ್ಷ ಧನಂಜಯ  ಮಧೂರ್ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಮೋರ್ಚಾ ಜಿಲ್ಲಾ ನೇತಾರರಾದ ಜಯರಾಜ್ ಶೆಟ್ಟಿ, ಜಿತೇಶ್, ಅಂಜು ಜೋಸ್ಟಿ, ಶ್ರೀಜಿತ್ ಪರಕಲ್ಯಾಯಿ ಮೊದಲಾದವರು ಮಾತನಾಡಿದರು.
 ಜಿಲ್ಲಾ ಪ್ರಧಾನ ಕಾರ್ಯದರ್ಶಿ ವೈಶಾಕ್ ಕೇಲೋತ್ ಸ್ವಾಗತಿಸಿ, ಜಿಲ್ಲಾ ಕಾರ್ಯದರ್ಶಿ ಸಾಗರ್ ಚಾತಮತ್ ಅವರು ಧನ್ಯವಾದ ಅರ್ಪಿಸಿದರು.

Comments