- Get link
- X
- Other Apps
- Get link
- X
- Other Apps
ಅಂತರರಾಜ್ಯ ಪ್ರಯಾಣ ನಿಷೇಧವನ್ನು ತೆಗೆದುಹಾಕುವಂತೆ ಒತ್ತಾಯಿಸಿ ಬಿಜೆಪಿ ಉಗ್ರ ಪ್ರತಿಭಟನೆ ನಾಳೆ ಪ್ರಾರಂಭ.
ಕಾಸರಗೋಡು ಜಿಲ್ಲೆಯವರಿಗೆ ಕರ್ನಾಟಕ್ಕೆ ಹೋಗಲು ಕೇರಳ ಸರಕಾರ ಹೇರಿದ ನಿಷೇಧವನ್ನು ತೆಗೆದುಹಾಕಬೇಕೆಂದು ಒತ್ತಾಯಿಸಿ ಬಿಜೆಪಿ ಉಗ್ರ ಪ್ರತಿಭಟನೆ ನಾಳೆ ಪ್ರಾರಂಭವಾಗಲಿದೆ. ವಿಡಿಯೋ ಕಾನ್ಫರೆನ್ಸ್ ಮುಖಾಂತರ ನಡೆದ ಕಾಸರಗೋಡು ಬಿಜೆಪಿ ಜಿಲ್ಲಾ ಪದಾಧಿಕಾರಿಗಳ ಸಭೆ ಪ್ರತಿಭಟನಾ ಆಂದೋಲನವನ್ನು ಪ್ರಾರಂಭ ಮಾಡುವುದಾಗಿ ತೀರ್ಮಾನಿಸಲಾಯಿತು .
ನಾಳೆ (07/08/2020) ಕಾಸರಗೋಡು ಬಿಜೆಪಿ ಕಾರ್ಯಾಲಯದಲ್ಲಿ ಅಡ್ವ. ಕೆ. ಶ್ರೀಕಾಂತ್ ಅವರ ನೇತೃತ್ವದಲ್ಲಿ ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಯಲಿದೆ . ಪ್ರತಿಭಟನೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಉದ್ಘಾಟನೆ ಮಾಡಲಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಜಿಲ್ಲಾ ಮಂಡಲ ನಾಯಕರ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಲು ಸಭೆ ತೀರ್ಮಾನಿಸಿದೆ.
ಕೇಂದ್ರ ಸರಕಾರ ಹಾಗು ಕೇರಳ ಸರಕಾರದ ಚೀಫ್ ಸೆಕ್ರೆಟರೀ ಅವರ ಆನ್ ಲಾಕ್ ನಿರ್ದೇಶದ ಪ್ರಕಾರ ಅಂತಾರಾಜ್ಯ ಪ್ರಯಾಣಕ್ಕೆ ಯಾವುದೇ ಪಾಸ್ ಅಥವಾ ಅನುಮತಿಯ ಅವಶ್ಯಕೆತೆ ಇಲ್ಲ.ಆದರೆ ಅದಕ್ಕೆ ವಿರುದ್ಧವಾಗಿ ಕಾಸರಗೋಡು ಜಿಲ್ಲೆಯಲ್ಲಿ ಕೆಲವು ವಿಶೇಷ ನಿಬಂಧನೆಗಳ ನಿಟ್ಟು ನೀಡಿದ ಯಾತ್ರಾನುಮತಿ ಈ ಆದೇಶಕ್ಕೆ ವಿರುದ್ಧವಾಗಿದೆ ಎಂದು ಬಿಜೆಪಿ ಆರೋಪಿಸಿದೆ ಅವೈಜ್ಞಾನಿಕ ಹಾಗು ಅಪ್ರಯೋಗಿಕವಾದ ನಿಬಂದನೆಗಳನ್ನಿಟ್ಟು ಪಾಸ್ ನೀಡುವ ಯೋಜನೆ ಮಾಡುತ್ತಿದ್ದಾರೆ
ಇದು ಸ್ವೀಕಾರಾರ್ಹವಲ್ಲ ಎಂದು ಸಭೆ ಸೂಚಿಸಿತು . ನೂರಾರು ಜನರ ಮೇಲೆ ದುಷ್ಪರಿಣಾಮ ಬೀರುವ ಸಮಸ್ಯೆ ಬಗೆಹರಿಯುವವರೆಗೂ ವಿವಿಧ ರೀತಿಯ ಆಂದೋಲನಗಳನ್ನು ಮುಂದುವರಿಸಲು ಸಭೆ ನಿರ್ಧರಿಸಿದೆ.
- Get link
- X
- Other Apps
Comments
Post a Comment