ಕಗ್ಗತ್ತಲು ✍️ಸುಜಿತ್. ಕುಮಾರ್.✍️

ಕಗ್ಗತ್ತಲು ✍️ಸುಜಿತ್. ಕುಮಾರ್.✍️
---------------------
ಸುತ್ತಲೂ ಆವರಿಸಿದೆ ಭಯದ ವಾತಾವರಣ
ಅಲ್ಲಲ್ಲಿ ನಡೆಯುತ್ತಿದೆ ಕೊಲೆ, ಸುಲಿಗೆ,ಅತ್ಯಾಚಾರ ,ಮೋಸ ಕಳ್ಳತನ.
ಅರಿಯಲಾಗದೆ ಹೋದೆ ಈ ಸಮಾಜದಲ್ಲಿನ ಅಘೋರ ರಹಸ್ಯವ..
ರಾತ್ರಿ-ಹಗಲಿನಂತಿಹರು ಕೆಲ ಮನುಜರು
ಬಣ್ಣ ಬದಲಿಸುವರು ಆಗೊಮ್ಮೆ, ಈಗೊಮ್ಮೆ ಕ್ಷಣಕ್ಕೊಮ್ಮೆ.
ಎತ್ತ ಹೊರಟಿವೆ ಮಾನವೀಯ ಮೌಲ್ಯಗಳು?
ಪ್ರಶ್ನೆಯಾಗಿಯೇ ಉಳಿದಿವೆ ಅದೆಷ್ಟೋ ಊಹಾಪೋಹ ಸಂಗತಿಗಳು.
 ಸಕಲ ಜೀವಿಗಳಿಗೂ   ನೀಡುವನು, ರವಿ ತನ್ನೆಲ್ಲಾ ಶಾಖ, ಬೆಳಕನ್ನು.
ಭೂದೇವಿ ಹರಸುವಳು ಫಸಲು ನೀಡಿ ರೈತನನು.
ಪಂಚಭೂತಗಳಲಿ ಅಡಗಿದೆ ಸಾಕಷ್ಟು ವಿಚಾರಗಳು.
ಮನುಜನ ಕೃತ್ಯಕ್ಕೆ ಮುನಿದಿದ್ದಾಳೆ ಪ್ರಕೃತಿ ಮಾತೆ.
ಸುನಾಮಿ, ನೆರೆ, ಭೂಕಂಪಗಳಂತಹ ಪ್ರಕೃತಿ ವಿಕೋಪಗಳಿಂದ ಉತ್ತರಿಸಿದ್ದಾಳೆ ನಮ್ಮೆಲ್ಲರನ್ನ.
ಕಗ್ಗತ್ತಲು ಆವರಿಸಿದೆ...!ಇಂದು ಎಲ್ಲೆಲ್ಲಿಯೂ..!.
...✍️ಸುಜಿತ್. ಕುಮಾರ್.✍️

Comments

Post a Comment