- Get link
- X
- Other Apps
- Get link
- X
- Other Apps
ಮಧೂರು ಗ್ರಾಮಪಂಚಾಯತ್ ನಲ್ಲಿ ಚುರುಕುಗೊಂಡ ಕೋವಿಡ್ ತಪಾಸಣೆ: 60 ಮಂದಿಗೆ ಪಿ.ಸಿ.ಆರ್ ಟೆಸ್ಟ್
ಕಾಸರಗೋಡು, ಆ.11 : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ರೋಗಿಗಳ ಸಂಖ್ಯೆ ಅಧಿಕವಾಗಿರುವ ಪ್ರದೇಶಗಳಲ್ಲಿ ಒಂದಾಗಿರುವ ಮಧೂರು ಗ್ರಾಮಪಂಚಾಯತ್ ನಲ್ಲಿ ರೋಗ ತಪಾಸಣೆ ಪ್ರಕ್ರಿಯೆಗಳನ್ನು ಚುರುಕುಗೊಳಿಸಲಾಗಿದೆ. 60 ಮಂದಿ ಪ್ರಾಥಮಿಕ ಸಂಪರ್ಕಕ್ಕೊಳಗಾಗಿರುವ ಮಂದಿಯ ಪಿ.ಸಿ.ಆರ್. ತಪಾಸಣೆ ಈ ಸಂಬಂಧ ಮಂಗಳವಾರ ನಡೆಸಲಾಯಿತು.
ಮಧೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಈ ತಪಾಸಣೆ ಶಿಬಿರ ನಡೆಯಿತು. ಈ ಮೂಲಕ ಪ್ರಾಥಮಿಕ ಸಂಪರ್ಕಕ್ಕೊಳಗಾಗಿದ್ದ ಎಲ್ಲರನ್ನೂ ತಪಾಸಣೆಗೊಳಪಡಿಸಲಾಗಿದೆ. ಇಲ್ಲಿ ರೋಗ ಪ್ರತಿರೋಧ ಚಟವಟಕೆಗಳೂ ಚುರುಕಿನಿಂದ ನಡೆಯುತ್ತಿವೆ.
ಮಧೂರು ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈಗ 16 ಮಂದಿ ಕೋವಿಡ್ ಪಾಸಿಟಿವ್ ಆದವರಿದ್ದಾರೆ. ಈ ವರೆಗೆ ಒಟ್ಟು 116 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 2,3,6,7,8,9,10,11,12, 13,14,16,18,19 ನೇ ವಾರ್ಡ್ ಗಳು ಕಂಟೈ ನ್ಮೆಂಟ್ ಝೋನ್ ಗಳಾಗಿವೆ.
P-5
ಫೊಟೋ ಶೀರ್ಷಿಕೆ: ಮಧೂರು: ಮಧೂರಿನಲ್ಲಿ ಮಂಗಳವಾರ ನಡೆದ ಕೋವಿಡ್ ಪಿ.ಸಿ.ಆರ್. ತಪಾಸಣೆ.
- Get link
- X
- Other Apps
Comments
Post a Comment