ಆರೋಗ್ಯ ವಲಯದ ಅಭಿವೃದ್ಧಿಗೆ ಪೂರಕ : "ಆರ್ದ್ರಂ" ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಚ್ಚುವರಿ 5 ಕುಟುಂಬ ಆರೋಗ್ಯ ಕೇಂದ್ರಗಳು

ಆರೋಗ್ಯ ವಲಯದ ಅಭಿವೃದ್ಧಿಗೆ ಪೂರಕ : "ಆರ್ದ್ರಂ" ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಚ್ಚುವರಿ 5 ಕುಟುಂಬ ಆರೋಗ್ಯ ಕೇಂದ್ರಗಳು 
ಕಾಸರಗೋಡು, ಆ.1: "ಆರ್ದ್ರಂ" ಯೋಜನೆಯಲ್ಲಿ ಕಾಸರಗೋಡು ಜಿಲ್ಲೆಯ ಹೆಚ್ಚುವರಿ 5 ಕುಟುಂಬ ಆರೋಗ್ಯ ಕೇಂದ್ರಗಳೂ ಸೇರಿರುವುದು ಆರೋಗ್ಯ ವಲಯದ ಅಭಿವೃದ್ಧಿಗೆ ಪೂರಕವಾಗಿದೆ. 
                            ರಾಜ್ಯದ ಎಲ್ಲ ಸರಕಾರಿ ಆಸ್ಪತ್ರೆಗಳ ರೋಗಿ ಸೌಹಾರ್ಧ ಶುಶ್ರೂಷೆ ಕೇಂದ್ರಗಳಾಗಿಸಿ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ "ಆರ್ದ ್ರಂ" ಯೋಜನೆ ಜಾರಿಗೊಳಿಸುತ್ತಿದೆ. ಯೋಜನೆಯ ಎರಡನೇ ಹಂತದಲ್ಲಿ ಕಾಸರಗೋಡು ಜಿಲ್ಲೆಗೆ ಮಂಜೂರು ಮಾಡಲಾಗಿರುವ 22 ಕುಟುಂಬ ಆರೋಗ್ಯ ಕೇಂದ್ರಗಳ ಪಟ್ಟಿಗೆ ಈ ಕೇಂದ್ರಗಳೂ ಸೇರಿವೆ.   
                             ಕಾಸರಗೋಡು ಜಿಲ್ಲೆಯ ಚೆಮ್ನಾಡ್ ಗ್ರಾಮ ಪಂಚಾಯತ್ ನ ಚಟ್ಟಂಚಾಲ್ ಕುಟುಂಬ ಆರೋಗ್ಯ ಕೇಂದ್ರ, ವೆಸ್ಟ್ ಏಳೇರಿ  ಗ್ರಾಮಪಂಚಾಯತ್ ನ ಮೌಕೋಡ್ ಕುಟುಂಬ ಆರೋಗ್ಯ ಕೇಂದ್ರ, ಪಡನ್ನ ಗ್ರಾಮಪಂಚಾಯತ್ ನ ಪಡನ್ನ ಕುಟುಂಬ ಆರೋಗ್ಯ ಕೇಂದ್ರ, ತ್ರಿಕರಿಪುರ ಗ್ರಾಮ ಪಂಚಾಯತ್ ನ ಉಡುಂಬುಂತಲ ಕುಟುಂಬ ಆರೋಗ್ಯ ಕೇಂದ್ರ, ವಲಿಯಪರಂಬ ಗ್ರಾಮಪಂಚಾಯತ್ ನ ವಲಿಯಪರಂಬ ಕುಟುಂಬ ಆರೋಗ್ಯ ಕೇಂದ್ರಗಳನ್ನು ಆರ್ದ್ರಂ ಯೋಜನೆಯಲ್ಲಿ ಅಳವಡಿಸಲಾಗಿದೆ. 
                               ಈ ಮೂಲಕ ಈ ಆಸ್ಪತ್ರೆಗಳಲ್ಲಿ ಸಂಜೆ ಒ.ಪಿ. ಸೌಲಭ್ಯ, ಪ್ರಯೋಗಾಲಯ ಸೇವೆ, ಜನ ಸ್ನೇಹಿ ಸೌಲಭ್ಯಗಳು, ಶಿಶು ಸ್ನೇಹಿ ಇಮ್ಯೂನೇಷನ್ ರೂಂ, ಅಗತ್ಯ ಔಷಧಗಳ ಲಭ್ಯತೆ, ಆಶ್ವಾಸ್ ಕ್ಲಿನಿಕ್, ಮಾನಸಿಕ ಆರೋಗ್ಯ ಕ್ಲಿನಿಕ್, ಶ್ವಾಸಕೋಶ ಆರೋಗ್ಯ ಕೇಂದ್ರ ಶ್ವಾಸ್ ಕ್ಲಿನಿಕ್ ಇತ್ಯಾದಿ ಒದಗಲಿವೆ.    
                               ಈ ಕಾರ್ಯಕ್ರಮದ ಅಧಿಕೃತ ಉದ್ಘಾಟನೆ ಶೀಘ್ರದಲ್ಲೇ ನಡೆಯಲಿದೆ. ಆನ್ ಲೈನ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಇವುಗಳ ಉದ್ಘಾಟನೆ ನಡೆಸುವರು. ಆರೋಗ್ಯ ಸಚಿವೆ ಕೆ.ಕೆ.ಶೈಲಜಾ ಟೀಚರ್ ಅಧ್ಯಕ್ಷತೆ ವಹಿಸುವರು. 

Comments