- Get link
- X
- Other Apps
- Get link
- X
- Other Apps
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 49 ಮಂದಿಗೆ ಕೋವಿಡ್ ಪಾಸಿಟಿವ್
ಕಾಸರಗೋಡು, ಆ.14: ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 49 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ. 35 ಮಂದಿಗೆ ಸಂಪರ್ಕ ಮೂಲಕ ಸೋಂಕು ತಗುಲಿದ್ದು, ಇವರಲ್ಲಿ ಒಬ್ಬರ ಸಂಪರ್ಕ ಮೂಲ ಪತ್ತೆಯಾಗಿಲ್ಲ. ಒಬ್ಬ ಆರೋಗ್ಯ ಕಾರ್ಯಕರ್ತೆಗೂ ಸೋಂಕು ಖಚಿತವಾಗಿದೆ. 5 ಮಂದಿ ಇತರ ರಾಜ್ಯಗಳಿಂದ, 9 ಮಂದಿ ವಿದೇಶದಿಂದ ಬಂದವರು ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ಆರೋಗ್ಯ ಕಾರ್ಯಕರ್ತೆ
ಮಂಜೇಶ್ವರ ಪಂಚಾಯತ್ ನ 34 ವರ್ಷದ ಆರೋಗ್ಯ ಕಾರ್ಯಕರ್ತೆಗೆ ಕೋವಿಡ್ ಪಾಸಿಟಿವ್ ಆಗಿದೆ.
ಸಂಪರ್ಕ ಮೂಲ ಪತ್ತೆಯಾಗದವರು
ಮಧೂರು ಪಂಚಾಯತ್ ನ 47 ವರ್ಷದ ಪುರುಷನ ಸೋಂಕಿನ ಸಂಪರ್ಕ ಮೂಲ ಪತ್ತೆಯಾಗಿಲ್ಲ.
ಇತರ ರಾಜ್ಯಗಳಿಂದ ಬಂದವರು
P-7 ಉತ್ತರ ಪ್ರದೇಶದಿಂದ ಆಗಮಿಸಿದ್ದ ಮಧೂರು ಪಂಚಾಯತ್ ನ 31,21 ವರ್ಷದ ಪುರುಷರು, ಕರ್ನಾಟಕದಿಂದ ಬಂದಿದ್ದ ಮಹಿಳೆ, ಮಂಜೇಶ್ವರ ಪಂಚಾಯತ್ ನ 31 ವರ್ಷದ ಪುರುಷ, ಚೆರುವತ್ತೂರು ಪಂಚಾಯತ್ ನ 31 ವರ್ಷದ ಪುರುಷ, ಮಹಾರಾಷ್ಟ್ರ ದಿಂದ ಬಂದಿದ್ದ 30 ವರ್ಷದ ಪುರುಷ ಸೋಂಕಿಗೊಳಗಾದವರು.
ವಿದೇಶದಿಂದ ಆಗಮಿಸಿದವರು
ದುಬಾಯಿಯಿಂದ ಬಂದಿದ್ದ ಉದುಮಾ ಪಂಚಾಯತ್ ನ 47,43,42,52,47 ವರ್ಷದ ಪುರುಷರು, ಬಹರೈನ್ ನಿಂದ ಆಗಮಿಸಿದ್ದ 30 ವರ್ಷದ ಪುರುಷ, ಅಬುದಾಭಿಯಿಂದ ಬಂದಿದ್ದ 26 ವರ್ಷದ ಮಹಿಳೆ, ಯು.ಎ.ಇ.ಯಿಂದ ಆಗಮಿಸಿದ್ದ ಮೊಗ್ರಾಲ್ ಪುತ್ತೂರು ಪಂಚಾಯತ್ ನ 32 ವರ್ಷದ. ಪಳ್ಳಿಕ್ಕರೆ ಪಂಚಾಯತ್ ನ 28 ವರ್ಷದ ಪುರುಷರಿಗೆ ಕೋವಿಡ್ ಪಾಸಿಟಿವ್ ಆಗಿದೆ.
ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಕಾಸರಗೋಡು ನಗರಸಭೆಯ 5, ಮಧೂರು ಪಂಚಾಯತ್ 4, ಚೆಮ್ನಾಡ್ ಪಂಚಾಯತ್ 5, ಕುಂಬಡಾಜೆ ಪಂಚಾಯತ್ 1, ಬೇಡಡ್ಕ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಮಂಜೇಶ್ವರ ಪಂಚಾಯತ್ 5, ಮಂಗಲ್ಪಾಡಿ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 2, ಕಾಞಂಗಾಡ್ ನಗರಸಭೆ 1, ಕಯ್ಯೂರು-ಚೀಮೇನಿ ಪಂಚಾಯತ್ 1, ಪಡನ್ನ ಪಂಚಾಯತ್ 1, ಅಜಾನೂರು ಪಂಚಾಯತ್ 2, ಉದುಮಾ ಪಂಚಾಯತ್ 14, ನೀಲೇಶ್ವರ ನಗರಸಭೆ 1, ಚೆರುವತ್ತೂರು ಪಂಚಾಯತ್ 2, ಮಡಿಕೈ 1, ಕಯ್ಯೂರು-ಚೀಮೇನಿ 1 ಮಂದಿ ಸೋಂಕು ಬಾಧಿತರು.
51 ಮಂದಿಗೆ ಕೋವಿಡ್ ನೆಗೆಟಿವ್
ಕಾಸರಗೋಡು ಜಿಲ್ಲೆಯಲ್ಲಿ ಶುಕ್ರವಾರ 51 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿದರು.
ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿದ್ದ, ಕಾಸರಗೋಡು ನಗರಸಭೆಯ 5, ಕುಂಬಡಾಜೆ ಪಂಚಾಯತ್ 2, ಪೈವಳಿಕೆ ಪಂಚಾಯತ್ 1, ಚೆಂಗಳ ಪಂಚಾಯತ್ 3, ಬದಿಯಡ್ಕ ಪಂಚಾಯತ್ 1, ಕುಂಬಳೆ ಪಂಚಾಯತ್ 1, ಚೆಮ್ನಾಡ್ ಪಂಚಾಯತ್ 2, ಮೊಗ್ರಾಲ್ ಪುತ್ತೂರು ಪಂಚಾಯತ್ 2, ಪುತ್ತಿಗೆ ಪಂಚಾಯತ್ 2, ಕುತ್ತಿಕೋಲು ಪಂಚಾಯತ್ 2, ಕಾಞಂಗಾಡ್ ನಗರಸಭೆಯ 2, ಅಜಾನೂರು ಪಂಚಾಯತ್ 6, ಪಡನ್ನ ಪಂಚಾಯತ್ 3, ತ್ರಿಕರಿಪುರ ಪಂಚಾಯತ್ 6, ಪಿಲಿಕೋಡ್ ಪಂಚಾಯತ್ 2, ಪಳ್ಳಿಕ್ಕರೆ ಪಂಚಾಯತ್ 7, ನೀಲೇಶ್ವರ ನಗರಸಭೆ 2 ಮಂದಿ ಗುಣಮುಖರಾದರು.
5171 ಮಂದಿ ನಿಗಾದಲ್ಲಿ
P-8 ಕಾಸರಗೋಡು ಜಿಲ್ಲೆಯಲ್ಲಿ 5171 ಮಂದಿ ನಿಗಾದಲ್ಲಿದ್ದಾರೆ ಎಂದು ಆರೋಗ್ಯ ಇಲಾಖೆಯ ವರದಿ ತಿಳಿಸಿದೆ.
ಮನೆಗಳಲ್ಲಿ 3860, ಸಾಂಸ್ಥಿಕವಾಗಿ 1311 ಮಂದಿ ನಿಗಾದಲ್ಲಿದ್ದಾರೆ. ನೂತನವಾಗಿ 264 ಮಂದಿ ನಿಗಾ ಪ್ರವೇಶಿಸಿದ್ದಾರೆ. 238 ಮಂದಿ ಶುಕ್ರವಾರ ತಮ್ಮ ನಿಗಾ ಅವಧಿ ಪೂರ್ಣಗೊಳಿಸಿದ್ದಾರೆ.
ನೂತನವಾಗಿ 986 ಮಂದಿಯ ಸ್ಯಾಂಪಲ್ ತಪಾಸಣೆಗೆ ಕಳುಹಿಸಲಾಗಿದೆ. 898 ಮಂದಿಯ ಫಲಿತಾಂಶ
- Get link
- X
- Other Apps
Comments
Post a Comment