- Get link
- X
- Other Apps
- Get link
- X
- Other Apps
ಮಾಸ್ಕ್ ಧರಿಸದೇ ಇದ್ದದ್ದಕ್ಕೆ 432 ಕೇಸು
ಕಾಸರಗೋಡು, ಆ.26: ಮಾಸ್ಕ್ ಧರಿಸದೇ ಇದ್ದ ಆರೋಪದಲ್ಲಿ ಆ.25ರಂದು ಕಾಸರಗೋಡು ಜಿಲ್ಲೆಯಲ್ಲಿ 432 ಮಂದಿ ವಿರುದ್ಧ ಕೇಸು ದಾಖಲಿಸಲಾಗಿದೆ. ಈ ಮೂಲಕ ಈ ಪ್ರಕರಣಕ್ಕೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾಗುವ ಕೇಸುಗಳ ಸಂಖ್ಯೆ 25062 ಆಗಿದೆ.
ಲಾಕ್ ಡೌನ್ ಉಲ್ಲಂಘನೆ: 72 ಕೇಸುಗಳು
ಕಾಸರಗೋಡು, ಆ.63: ಲಾಕ್ ಡೌನ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಆ.25ರಂದು 63 ಕೇಸು ದಾಖಲಿಸಲಾಗಿದೆ. 82 ಮಂದಿಯನ್ನು ಬಂಧಿಸಲಾಗಿದ್ದು, 2 ವಾಹನಗಳನ್ನು ವಶಪಡಿಸಲಾಗಿದೆ. ಮಂಜೇಶ್ವರ ಪೊಲೀಸ್ ಠಣೆಯಲ್ಲಿ 4 ಕೇಸುಗಳು, ಕುಂಬಳೆ 5, ಕಾಸರಗೋಡು 7, ವಿದ್ಯಾನಗರ 5, ಬದಿಯಡ್ಕ 3, ಬೇಡಗಂ 3, ಆದೂರು 2, ಮೇಲ್ಪರಂಬ 3, ಬೇಕಲ 3, ಅಂಬಲತ್ತರ 3, ಹೊಸದುರ್ಗ 7, ನೀಲೇಶ್ವರ 4, ಚಂದೇರ 3, ಚೀಮೇನಿ 3, ಚಿತ್ತಾರಿಕಲ್ಲ್ 4, ವೆಳ್ಳರಿಕುಂಡ್ 2, ರಾಜಪುರಂ 2 ಕೇಸುಗಳು ದಾಖಲಾಗಿವೆ.
ಈ ಮೂಲಕ ಈ ಪ್ರಕರಣಗಳಿಗೆ ಸಂಬಂಧಿಸಿ ಕಾಸರಗೋಡು ಜಿಲ್ಲೆಯಲ್ಲಿ ದಾಖಲಾದ ಕೇಸುಗಳ ಸಂಖ್ಯೆ 3998 ಆಗಿದೆ. 5486 ಮಂದಿಯನ್ನು ಬಂಧಿಸಲಾಗಿದೆ. 1333 ವಾಹನಗಳನ್ನು ವಶಪಡಿಸಲಾಗಿದೆ.
ಕ್ವಾರೆಂ ಟೈನ್ ಉಲ್ಲಂಘನೆ: 877 ಕೇಸು
ಕಾಸರಗೋಡು, ಆ.26: ಕ್ವಾರೆಂ ಟೈನ್ ಆದೇಶ ಉಲ್ಲಂಘನೆ ನಡೆಸಿದ ಆರೋಪದಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಈ ವರೆಗೆ 877 ಮಂದಿ ವಿರುದ್ಧ ಕೇಸು ದಾಖಲಾಗಿದೆ.
- Get link
- X
- Other Apps
Comments
Post a Comment