- Get link
- X
- Other Apps
- Get link
- X
- Other Apps
ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 300ಕ್ಕೂ ಮೀರಿದ ಕೋವಿಡ್ ಸೋಂಕು ಖಚಿತಗೊಂಡವರ ಸಂಖ್ಯೆ
ಕಾಸರಗೋಡು, ಆ.7: ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕು ಬಾಧಿತರ ಸಂಖ್ಯೆ 300ಕ್ಕೂ ಮೀರಿದೆ.
ಈ ಪ್ರದೇಶದಲ್ಲಿ ಈ ವರೆಗೆ ರೋಗ ಖಚಿತಗೊಂಡವರ ಒಟ್ಟು ಸಂಖ್ಯೆ 310 ಆಗಿದೆ. ಕುಂಬಳೆ ಗ್ರಾಮ ಪಂಚಾಯತ್ ನಲ್ಲಿ 240 ಮಂದಿಗೆ, ಚೆಂಗಳ ಗ್ರಾಮ ಪಂಚಾಯತ್ ನಲ್ಲಿ 227 ಮಂದಿಗೆ, ಚೆಮ್ನಾಡ್ ಗ್ರಾಮಪಂಚಾಯತ್ ನಲ್ಲಿ 172 ಮಂದಿಗೆ, ಮಂಗಲ್ಪಾಡಿ ಗ್ರಾಮ ಪಂಚಾಯತ್ ನಲ್ಲಿ 154 ಮಂದಿಗೆ, ಉದುಮಾ ಗ್ರಾಮ ಪಂಚಾಯತ್ ನಲ್ಲಿ 138 ಮಂದಿಗೆ, ಪಳ್ಳಿಕ್ಕರೆ ಗ್ರಾಮ ಪಂಚಾಯತ್ ನಲ್ಲಿ 135 ಮಂದಿಗೆ, ಮಂಜೇಶ್ವರ ಗ್ರಾಮ ಪಂಚಾಯತ್ ನಲ್ಲಿ 120 ಮಂದಿಗೆ ಕೋವಿಡ್ ಸೋಂಕು ಖಚಿತಗೊಂಡಿದೆ.
ಜಿಲ್ಲೆಯಲ್ಲಿ ಶುಕ್ರವಾರ ಕೋವಿಡ್ ಸೋಂಕು ಖಚಿತಗೊಂಡವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ
ಶುಕ್ರವಾರ ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ಖಚಿತಗೊಂಡವರ ಸ್ಥಳೀಯಾಡಳಿತ ಸಂಸ್ಥೆಗಳ ಮಟ್ಟದ ಗಣನೆ ಇಂತಿದೆ.ಕಾಸರಗೋಡು ನಗರಸಭೆಯಲ್ಲಿ 31, ಬದಿಯಡ್ಕ ಪಂಚಾಯತ್ 2, ಚೆಮ್ನಾಡ್ ಪಂಚಾಯತ್ 21, ಮಂಗಲ್ಪಾಡಿ ಪಂಚಾಯತ್ 5, ಕುಂಬಳೆ ಪಂಚಾಯತ್ 4, ವರ್ಕಾಡಿ ಪಂಚಾಯತ್ 6, ಮೀಂಜ ಪಂಚಾಯತ್ 1, ಮೊಗ್ರಾಲ್ ಪುತ್ತೂರು ಪಂಚಾಯತ್ 1, ಕಾಞಂಗಾಡ್ ನಗರಸಭೆಯಲ್ಲಿ 4, ಚೆರುವತ್ತೂರು ಪಂಚಾಯತ್ ನಲ್ಲಿ 1, ಉದುಮಾ ಪಂಚಾಯತ್ ನಲ್ಲಿ 33, ತ್ರಿಕರಿಪುರ ಪಂಚಾಯತ್ 17, ಅಜಾನೂರು ಪಂಚಾಯತ್ 4, ಕಳ್ಳಾರ್ ಪಂಚಾಯತ್ 1, ನೀಲೇಶ್ವರ ನಗರಸಭೆ 2, ಪುಲ್ಲೂರು-ಪೆರಿಯ 1 ಮಂದಿ ಸೋಂಕು ಬಾಧಿತರು.
ಜಿಲ್ಲೆಯಲ್ಲಿ ಶುಕ್ರವಾರ 123 ಮಂದಿಗೆ ರೋಗಮುಕ್ತಿ
ಶುಕ್ರವಾರ ಕಾಸರಗೋಡು ಜಿಲ್ಲೆಯಲ್ಲಿ 123 ಮಂದಿಗೆ ಕೋವಿಡ್ ನೆಗೆಟಿವ್ ಆಗಿದೆ. ಅವರ ಸ್ಥಳೀಯಾಡಳಿತ ಮಟ್ಟದ ಗಣನೆ ಇಂತಿದೆ.
ಕಾಸರಗೋಡು ನಗರಸಭೆ ವ್ಯಾಪ್ತಿಯ 15, ಮಧೂರು ಪಂಚಾಯತ್ ನ 13, ಮಂಜೇಶ್ವರ ಪಂಚಾಯತ್ ನ 12, ಚೆಂಗಳ ಪಂಚಾಯತ್ ನ 10, ಚೆಮ್ನಾಡ್ ಪಂಚಾಯತ್ ನ 9, ಕುಂಬಳೆ ಪಂಚಾಯತ್ ನ 8, ಕಳ್ಳಾರ್ ಪಂಚಾಯತ್ ನ 6, ಮಂಗಲ್ಪಾಡಿ, ವರ್ಕಾಡಿ, ಪಳ್ಳಿಕ್ಕರೆ, ಬಳಾಲ್ ಪಂಚಾಯತ್ ಗಳ ತಲಾ 4, ಮೀಂಜ, ಉದುಮಾ, ಪಡನ್ನ, ಪನತ್ತಡಿ, ಪುಲ್ಲೂರು-ಪೆರಿಯ, ತ್ರಿಕರಿಪುರ ಗ್ರಾಮ ಪಂಚಾಯತ್ ಗಳ, ಕಾಞಂಗಾಡ್, ನೀಲೇಶ್ವರ ನಗರಸಭೆಗಳ ತಲಾ 3, ಪುತ್ತಿಗೆ, ಬದಿಯಡ್ಕ ಪಂಚಾಯತ್ ಗಳ ತಲಾ 2, ಮೊಗ್ರಾಲ್ ಪುತ್ತೂರು, ಕಾರಡ್ಕ, ಕಯ್ಯೂರು-ಚೀಮೇನಿ, ಕುತ್ತಿಕೋಲು, ಮಡಿಕೈ, ಅಜಾನೂರು ಪಂಚಾಯತ್ ಗಳ ತಲಾ 1 ಮಂದಿ ಗುಣಮುಖರಾದವರು.
- Get link
- X
- Other Apps
Comments
Post a Comment