ಅಂತಾರಾಜ್ಯ ಸರಕು ಸಾಗಣೆ ಸಂಬಂಧ ಮಂಗಳೂರಿನಿಂದ ಕಾಸರಗೋಡಿಗೂ, ಕಾಸರಗೋಡಿನಿಂದ ಮಂಗಳೂರಿಗೂ ದಿನನಿತ್ಯ ಪ್ರಯಾಣ ನಡೆಸುವ ವ್ಯಾಪಾರಿಗಳ ಸಮಸ್ಯೆಗಳು ಸಹಿತ ವಿವಿಧ ವಿಚಾರಗಳಲ್ಲಿ ಸಚಿವರಿಂದ ಆ.3ರಂದು ಮಾತುಕತೆ ಕಾಸರಗೋಡು

 ಆ.3ರಂದು ಸಚಿವರಿಂದ ಮಾತುಕತೆ 
ಕಾಸರಗೋಡು 
   ಆ.2: ಕಾಸರಗೋಡು ಜಿಲ್ಲೆಯ ವ್ಯಾಪಾರಿಗಳ ಪ್ರತಿನಿಧಿಗಳೊಂದಿಗೆ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರು ಆ.3ರಂದು ಬೆಳಗ್ಗೆ 10 ಗಂಟೆಯಿಂದ 11.30 ವರೆಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಸಂವಾದ ನಡೆಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.    
                     ಕೋವಿಡ್ ಅವಧಿಯಲ್ಲಿ ಕಾಸರಗೋಡು ಜಿಲ್ಲೆಯಲ್ಲಿ ಜಾರಿಗೊಳಿಸಿರುವ ವಿವಿಧ ಕಟ್ಟುನಿಟ್ಟಿಗಳ ಅಂಗವಾಗಿ ಜಿಲ್ಲೆಯ ವ್ಯಾಪಾರಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಬಗ್ಗೆ ನೇರ ಮಾತುಕತೆ ನಡೆಸಿ, ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸಂವಾದ ಜರುಗಲಿದೆ. 
 ಈ ವೇಳೆ ಅಂತಾರಾಜ್ಯ ಸರಕು ಸಾಗಣೆ ಸಂಬಂಧ ಮಂಗಳೂರಿನಿಂದ ಕಾಸರಗೋಡಿಗೂ, ಕಾಸರಗೋಡಿನಿಂದ ಮಂಗಳೂರಿಗೂ ದಿನನಿತ್ಯ ಪ್ರಯಾಣ ನಡೆಸುವ ವ್ಯಾಪಾರಿಗಳ ಸಮಸ್ಯೆಗಳು ಸಹಿತ ವಿವಿಧ ವಿಚಾರಗಳಲ್ಲಿ ಮಾತುಕತೆ ನಡೆಯಲಿದೆ ಎಂದು ಜಿಲ್ಲಾಧಿಕಾರಿ ಹೇಳಿದರು.

Comments