- Get link
- X
- Other Apps
- Get link
- X
- Other Apps
ಶುರುವಾಯ್ತು 225 ರೂ. ಬೆಲೆಯ ಕರೊನಾ ಲಸಿಕೆ ಕ್ಲಿನಿಕಲ್ ಟ್ರಯಲ್; ಮೈಸೂರು ಸೇರಿ 17 ಕಡೆ ಪ್ರಯೋಗ
ನವದೆಹಲಿ: ಸದ್ಯ ಜಗತ್ತಿನಲ್ಲಿ ಅತ್ಯಂತ ಮುಂಚೂಣಿಯಲ್ಲಿರುವ ಕರೊನಾ ವೈರಸ್ ನಿಗ್ರಹ ಲಸಿಕೆಯ ಕ್ಲಿನಿಕಲ್ ಟ್ರಯಲ್ ( ಮಾನವರ ಮೇಲೆ ಪ್ರಯೋಗ) ಭಾರತದಲ್ಲೂ ಆರಂಭವಾಗಿದೆ.
ಆಕ್ಸ್ಫರ್ಡ್ ವಿವಿ ತಂಡ ಬ್ರಿಟನ್ನ ಅಸ್ಟ್ರಾಜೆನೆಕಾ ಕಂಪನಿ ಜತೆಗೂಡಿ ಅಭಿವೃದ್ಧಿ ಪಡಿಸಿರುವ ಈ ಲಸಿಕೆ ಈಗಾಗಲೇ ಬ್ರಿಟನ್, ಅಮೆರಿಕ ಹಾಗೂ ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾಗಳಲ್ಲಿ ಮೂರನೇ ಹಾಗೂ ಅಂತಿಮ ಹಂತದ ಪರೀಕ್ಷೆಯಲ್ಲಿದೆ. ವರ್ಷಾಂತ್ಯಕ್ಕೆ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ
ಈ ಲಸಿಕೆಯನ್ನು ಭಾರತದಲ್ಲಿ ಕೋವಿಶೀಲ್ಡ್ ಎಂದು ಹೆಸರಿಸಲಾಗಿದ್ದು, ಪುಣೆಯ ಸಿರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಉತ್ಪಾದಿಸಿ, ಮಾರಾಟ ಮಾಡಲಿದೆ. ಹೀಗಾಗಿ ಇದರ ಎರಡನೇ ಹಾಗೂ ಮೂರನೇ ಹಂತದ ಕ್ಲಿನಿಕಲ್ ಟ್ರಯಲ್ಗೆ ಚಾಲನೆ ನೀಡಿದೆ.
ಪುಣೆಯ ಭಾರತಿ ವಿದ್ಯಾಪೀಠ ಡೀಮ್ಡ್ ವಿವಿಯ ವೈದ್ಯಕೀಯ ಕಾಲೇಜಿನಲ್ಲಿ ರೋಗಿಗಳ ಮೇಲೆ ಪ್ರಯೋಗಿಸಲಾಗುತ್ತಿದೆ. ಜತೆಗೆ ಮುಂಬೈನ ಇನ್ನೆರಡು ಆಸ್ಪತ್ರೆಗಳನ್ನು ಇದಕ್ಕಾಗಿ ಆಯ್ಕೆ ಮಾಡಲಾಗಿದೆ. ದೇಶದ 17 ಸ್ಥಳಗಳಲ್ಲಿ 1,600ಕ್ಕೂ ಹೆಚ್ಚು ಜನರಿಗೆ ಈ ಲಸಿಕೆಯನ್ನು ನೀಡಲಾಗುತ್ತಿದೆ ಎಂದು ಮುಖ್ಯ ಸಂಶೋಧನಾಧಿಕಾರಿ ಸಂಜಯ್ ಲಾಲ್ವಾನಿ ಮಾಹಿತಿ ನೀಡಿದ್ದಾರೆ. ಇದರಲ್ಲಿ ಮೈಸೂರಿನ ಜೆಎಸ್ಎಸ್ ಆಸ್ಪತ್ರೆ ಕೂಡ ಸೇರಿದೆ.
ಬಹುಶಃ ಈ ಲಸಿಕೆ ಜಗತ್ತಿನಲ್ಲಿಯೇ ಅತ್ಯಂತ ಕಡಿಮೆ ಬೆಲೆಯ ಲಸಿಕೆ ಎನಿಸಿದರೂ ಅಚ್ಚರಿಯಿಲ್ಲ. ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಈ ಕಂಪನಿಗೆ 1,125 ಕೋಟಿ ರೂ. (150 ಮಿಲಿಯನ್ ಡಾಲರ್ ) ಆರ್ಥಿಕ ನೆರವು ನೀಡಿದ್ದು, ಕೇವಲ ಮೂರು ಡಾಲರ್ಗೆ ಒಂದು ಡೋಸ್ನಂತೆ (225 ರೂ.) ಲಸಿಕೆ ಉತ್ಪಾದಿಸಿ ವಿತರಣೆ ಮಾಡಲಿದೆ.
- Get link
- X
- Other Apps
Comments
Post a Comment