ತಲಪ್ಪಾಡಿ ಮೂಲಕ ಕರ್ನಾಟಕಕ್ಕೆ ಚಿಕಿತ್ಸೆಗಾಗಿ ತೆರಳುವವರು, ಅದೇ ದಿನ ಮರಳುವುದಿದ್ದಲ್ಲಿ, ವ್ಯಾಪಾರ, ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ತೆರಳಿ ಅದೇ ದಿನ ಮರಳುವುದಿದ್ದಲ್ಲಿ ಅಂಥವರಿಗೆ ಆಂಟಿಜೆನ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಅನ್ವಯವಲ್ಲ ನಿತ್ಯ ಪ್ರಯಾಣನಡೆಸುವ ಮಂದಿಗೆ 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲಿ ನೋಂದಣಿ, ಆಂಟಿಜೆನ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಲಗತ್ತಿಸುವುದು ಕಡ್ಡಾಯವಾಗಿದೆ. :ಜಿಲ್ಲಾಧಿಕಾರಿ

ಕಾಸರಗೋಡು, ಆ.28: ಕೇರಳ ಹೈಕೋರ್ಟ್ ಆದೇಶ ಪ್ರಕಾರ ಕಾಸರಗೋಡು ಜಿಲ್ಲೆಯಿಂದ ಕರ್ನಾಟಕಕ್ಕೆ ರಾಷ್ಟ್ರೀಯ ಹೆದ್ದಾರಿ 66(ತಲಪ್ಪಾಡಿ ಮೂಲಕ) ಅಲ್ಲದೆ ಜಾಲ್ಸೂರು,ಪೆರ್ಲ, ಮಾಣಿಮೂಲೆ, ಬಂದಡ್ಕ, ಪಾಣತ್ತೂರು ರಸ್ತೆಗಳ ಮೂಲಕ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ತಲಪ್ಪಾಡಿ ಮೂಲಕ ಚಿಕಿತ್ಸೆಗಾಗಿ ತೆರಳುವವರು, ಅದೇ ದಿನ ಮರಳುವುದಿದ್ದಲ್ಲಿ, ವ್ಯಾಪಾರ, ಇನ್ನಿತರ ತುರ್ತು ಪರಿಸ್ಥಿತಿಯಲ್ಲಿ ತೆರಳಿ ಅದೇ ದಿನ ಮರಳುವುದಿದ್ದಲ್ಲಿ ಅಂಥವರಿಗೆ ಆಂಟಿಜೆನ್ ಟೆಸ್ಟ್ ಕಡ್ಡಾಯ ಎಂಬ ಆದೇಶ ಅನ್ವಯವಲ್ಲ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು. 
                            ಈ ಸಂಬಂಧ ಮಾತುಕತೆ ನಡೆಸುವ ನಿಟ್ಟಿನಲ್ಲಿ ಶುಕ್ರವಾರ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ ಆದೇಶ ಪ್ರಕಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೇರಲಾದ ತುರ್ತು ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 

ಇದೇ ವೇಳೆ ನಿತ್ಯ ಪ್ರಯಾಣನಡೆಸುವ ಮಂದಿಗೆ 21 ದಿನಗಳಿಗೊಮ್ಮೆ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲಿ ನೋಂದಣಿ, ಆಂಟಿಜೆನ್ ಟೆಸ್ಟ್ ನಡೆಸಿ ನೆಗೆಟಿವ್ ವರದಿ ಲಗತ್ತಿಸುವುದು ಕಡ್ಡಾಯವಾಗಿದೆ. ಇತರ ರಾಜ್ಯಗಳಿಂದ ಕಾಸರಗೋಡು ಜಿಲ್ಲೆಗೆ ಆಗಮಿಸುವ ಮಂದಿಗೂ ಈ ಆದೇಶ ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದರು. 
ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಶಿಲ್ಪಾ, ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ಮೊದಲಾದವರು ಉಪಸ್ಥಿತರಿದ್ದರು.
                             ............................................................................

Comments